Asianet Suvarna News Asianet Suvarna News

ಕಾಲೇಜು ಶಿಕ್ಷಣ ಡಿಜಿಟಲೀಕರಣ: ರಾಜ್ಯದ ವಿವಿಗಳು ಅಮೇರಿಕಾದ ಪೆನ್ಸಿಲ್ವೇನಿಯಾ ವಿವಿಯೊಂದಿಗೆ ಒಪ್ಪಂದ

ಕಾಲೇಜು ಶಿಕ್ಷಣದಲ್ಲಿ ಗುಣಮಟ್ಟದ ಡಿಜಿಟಲೀಕರಣ ಶಿಕ್ಷಣ ಪ್ರಸಾರ ಉದ್ದೇಶದಿಂದ ರಾಜ್ಯ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಪೆನ್ಸಿಲ್ವೇನಿಯ (Pennsylvania) ಸ್ಟೇಟ್ ಸಿಸ್ಟಮ್ ಆಫ್ ಹೈಯರ್ ಎಜುಕೇಶನ್ (PSSHE) ಸಂಸ್ಥೆಗಳು ನಾಳೆ ಜಾಗತಿಕ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಲಿವೆ.

Digitization of College Education State Universities Agreement with US University of Pennsylvania sat
Author
First Published Jan 9, 2023, 6:48 PM IST

ಬೆಂಗಳೂರು (ಜ.09): ಕಾಲೇಜು ಶಿಕ್ಷಣದಲ್ಲಿ ಗುಣಮಟ್ಟದ ಡಿಜಿಟಲೀಕರಣ ಶಿಕ್ಷಣ ಪ್ರಸಾರ ಉದ್ದೇಶದಿಂದ ರಾಜ್ಯ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಪೆನ್ಸಿಲ್ವೇನಿಯ (Pennsylvania) ಸ್ಟೇಟ್ ಸಿಸ್ಟಮ್ ಆಫ್ ಹೈಯರ್ ಎಜುಕೇಶನ್ (PSSHE) ನಡುವೆ ಜಾಗತಿಕ ಪಾಲುದಾರಿಕೆ ಒಪ್ಪಂದದ ಪೂರ್ವಭಾವಿ ಸಭೆ ಇಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ನಡೆದಿದೆ. ನಾಳೆ (ಮಂಗಳವಾರ) ರಾಜ್ಯದ ಹಲವು ವಿಶ್ವವಿದ್ಯಾಲಯಗಳು ಮತ್ತು ಅಮೆರಿಕದ ಪೆನ್ಸಿಲ್ವೇನಿಯಾದ ವಿಶ್ವವಿದ್ಯಾಲಯಗಳು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಲಿವೆ.

ಒಪ್ಪಂದದ ಸಭೆಯ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ (Higher education Minister) ಅಶ್ವತ್ಥನಾರಾಯಣ (Ashwathanarayan) ಅವರು, ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಆಗುತ್ತಿರುವ ಸುಧಾರಣೆಗಳನ್ನು ಸರ್ಕಾರ ಮತ್ತಷ್ಟು ವಿಸ್ತರಿಸಲಿದ್ದು, ಅಮೆರಿಕದ ಪೆನ್ಸಿಲ್ವೇನಿಯಾದ ವಿಶ್ವವಿದ್ಯಾಲಯಗಳು ಇದರಲ್ಲಿ ಭಾಗಿಯಾಗಬೇಕೆಂದು ಸಭೆ ನಡೆಸಲಾಗಿದೆ. ರಾಜ್ಯದ ಹಲವು ವಿವಿಗಳು ಪೆನ್ಸಿಲ್ವೇನಿಯಾ ವಿವಿಗಳ ಜತೆ ಮಂಗಳವಾರ ಒಪ್ಪಂದಕ್ಕೆ (Agreement) ಸಹಿ‌ ಮಾಡಿಕೊಳ್ಳಲಿವೆ ಎಂದು ತಿಳಿಸಿದರು.

National Youth Festival 2023: ಯುವಜನೋತ್ಸವ: 4 ವರ್ಷಗಳ ಬಳಿಕ ಮತ್ತೆ ಶೃಂಗಾರಗೊಳ್ಳುತ್ತಿದೆ ಧಾರವಾಡ!

ಟ್ವಿನ್ನಿಂಗ್‌ ಕೋರ್ಸ್‌ಗೆ ಹೆಚ್ಚು ಪ್ರವೇಶ:
ಉನ್ನತ ಶಿಕ್ಷಣ ವ್ಯವಸ್ಥೆಯ ಪ್ರತಿಯೊಂದು ಹಂತಕ್ಕೂ ವಿಕೇಂದ್ರೀಕರಣವನ್ನು ವಿಸ್ತರಿಸಲು ಸರ್ಕಾರ ಒತ್ತು ನೀಡಲಿದೆ. ಹೊಸ ಶಿಕ್ಷಣ ನೀತಿ (ಎನ್ಇಪಿ) ಆಶಯದಂತೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಲಭ್ಯವಾಗಿಸಲು ವಿದೇಶಗಳ ಹೆಸರಾಂತ ವಿ.ವಿ.ಗಳ ಜೊತೆ ಸಹಭಾಗಿತ್ವ ಮಾಡಿಕೊಳ್ಳಲಾಗುವುದು. ಉನ್ನತ ಶಿಕ್ಷಣದ ಡಿಜಿಟಲೀಕರಣಕ್ಕೆ (Digitization) ಪ್ರಾಮುಖ್ಯ ಕೊಡಲಾಗಿದೆ. ಪಾಲಿಟೆಕ್ನಿಕ್ ನಲ್ಲಿ ಜಾರಿಗೊಳಿಸಿದ ಟ್ವಿನ್ನಿಂಗ್ ಕೋರ್ಸ್ (Twinning Course) ಹಾಗೂ ಮತ್ತಿತರ ಉಪಕ್ರಮಗಳಿಂದಾಗಿ ವಿದ್ಯಾರ್ಥಿಗಳ ಪ್ರವೇಶಾತಿ (Admission) ಪ್ರಮಾಣ ಶೇಕಡ 50ರಿಂದ 100ಕ್ಕೆ ಹೆಚ್ಚಾಗಿದೆ. ರಾಜ್ಯದಲ್ಲಿ ಪ್ರತಿವರ್ಷ 80 ಸಾವಿರ ವಿದ್ಯಾರ್ಥಿಗಳು ಪಾಲಿಟೆಕ್ನಿಕ್ (Polytechnic) ಸೇರುತ್ತಿದ್ದಾರೆ ಎಂದು ವಿವರಿಸಿದರು.

ಜಾಗತಿಕ ಮಟ್ಟದ  400 ಐಟಿ ಕಂಪನಿಗಳು ಬೆಂಗಳೂರಿನಲ್ಲಿವೆ: 
ಟ್ವಿನ್ನಿಗ್ ಕೋರ್ಸ್, ಡ್ಯೂಯೆಲ್ ಪದವಿ, ಕೌಶಲ ತರಬೇತಿ, ಇಂಟರ್ನ್‌ಶಿಪ್ ಇತ್ಯಾದಿಗಳನ್ನು ಮತ್ತಷ್ಟು ವಿಸ್ತರಿಸಲಾಗುವುದು. ಬೆಳವಣಿಗೆಯ ದೃಷ್ಟಿಯಿಂದ ಕರ್ನಾಟಕವು ಭರವಸೆಯ ರಾಜ್ಯವಾಗಿದೆ. ಹಾಗೆಯೇ ಬೆಂಗಳೂರು ದೇಶದಲ್ಲೆಡೆಯಿಂದ ಪ್ರತಿಭಾವಂತರನ್ನು ಸೆಳೆಯುತ್ತಿದೆ. ಜಾಗತಿಕ ಮಟ್ಟದ 500 ಅಗ್ರಮಾನ್ಯ ಕಂಪನಿಗಳ ಪೈಕಿ 400 ಕಂಪನಿಗಳು ಬೆಂಗಳೂರಿನಲ್ಲಿ ನೆಲೆಯಾಗಿವೆ. ಕುಲಪತಿ ಡಾ.ಪೀಟರ್ ಗಾರ್ಲೆಂಡ್ (Dr.Peter Garlend) ಮತ್ತು ಡಾ.ಅನಿತಾ ಮೀಹನ್ (Dr.Anitha Meehan) ನೇತೃತ್ವದ ಪೆನ್ಸಿಲ್ವೇನಿಯ ವಿ.ವಿ.ಗಳ ನಿಯೋಗವು ರಾಜ್ಯಕ್ಕೆ ಒಂದು ವಾರ ಅವಧಿಯ ಭೇಟಿ ನೀಡಿದೆ. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಹಂತದಲ್ಲಿ ಪರಸ್ಪರ ಸಹಭಾಗಿತ್ವ ಕುರಿತು ಚರ್ಚೆ ಹಾಗೂ ಸಮಾಲೋಚನೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

Udupi: ವಿಶ್ವವಿದ್ಯಾಲಯಗಳ ರಾಷ್ಟ್ರೀಯ ವಾಲಿಬಾಲ್ ಕ್ರೀಡಾಕೂಟ ಉದ್ಘಾಟಿಸಿದ ರಾಜ್ಯಪಾಲ ಗೆಹ್ಲೋಟ್

ಈ ಸಭೆಯಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ. ಬಿ. ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಡಾ. ಗೋಪಾಲಕೃಷ್ಣ ಜೋಶಿ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಆಯುಕ್ತ ಪಿ. ಪ್ರದೀಪ್ ಮತ್ತಿತರರು ಇದ್ದರು. ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು ಇಡೀ ದಿನ ನಡೆದ ಸಭೆಗಳಲ್ಲಿ ಭಾಗವಹಿಸಿದ್ದರು.

Follow Us:
Download App:
  • android
  • ios