ರಾಜ್ಯಾದ್ಯಂತ ಆರ್‌ಟಿಇ ಮರು ಅನುಷ್ಠಾನಕ್ಕೆ ಒತ್ತಾಯ: 20 ಸಾವಿರ ವಿದ್ಯಾರ್ಥಿಗಳಿಂದ ಅಭಿಯಾನ
ರಾಜ್ಯಾದ್ಯಂತ ಆರ್‌ಟಿಇ ಕಡ್ಡಾಯ ಶಿಕ್ಷಣ ಹಕ್ಕು ಮರು ಅನುಷ್ಠಾನಕ್ಕೆ ಒತ್ತಾಯ ಕೇಳಿಬಂದಿದ್ದು, 20 ಸಾವಿರ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿಗೆ ಸಾಮೂಹಿಕ ಪತ್ರ ಅಭಿಯಾನಕ್ಕೆ ಮುಂದಾಗಿದ್ದಾರೆ. ಖಾಸಗಿ ಶಾಲಾ ಒಕ್ಕೂಟಗಳಿಂದ ಕೂಡ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತವಾಗಿದೆ.
ಬೆಂಗಳೂರು (ಆ.18): ರಾಜ್ಯಾದ್ಯಂತ ಆರ್‌ಟಿಇ ಕಡ್ಡಾಯ ಶಿಕ್ಷಣ ಹಕ್ಕು ಮರು ಅನುಷ್ಠಾನಕ್ಕೆ ಒತ್ತಾಯ ಕೇಳಿಬಂದಿದೆ. ಕೇಂದ್ರ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಆರ್ಥಿಕವಾಗಿ ದುರ್ಬಲ ಮಕ್ಕಳು ಕೂಡಾ ಖಾಸಗಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಲು ನೆರವಾಗುವುದಕ್ಕಾಗಿ ಇರುವ ಯೋಜನೆಯಾಗಿದೆ.
ಈ ಹಿನ್ನೆಲೆಯಲ್ಲಿ ಏಕಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸಾಮೂಹಿಕ ಪತ್ರ ಅಭಿಯಾನಕ್ಕೆ 20 ಸಾವಿರ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಖಾಸಗಿ ಶಾಲಾ ಒಕ್ಕೂಟಗಳಿಂದ ಕೂಡ ಬೆಂಬಲ ವ್ಯಕ್ತವಾಗಿದೆ.
ಮೆಟ್ರೋ ಪ್ರಯಾಣಿಕರಿಗೆ ಸಂತಸದ ಸುದ್ದಿ, ಇಂದಿನಿಂದ ನಾಗಸಂದ್ರ-ಮಾದವಾರ ಟ್ರಯಲ್ ರನ್
ಆಗಸ್ಟ್ 19ರಿಂದ ರಾಜ್ಯದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಅಭಿಯಾನ ಆರಂಭವಾಗಲಿದೆ. ಆರ್‌ಟಿಇ ಶಿಕ್ಷಣ ಹಕ್ಕು ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಆದ್ರೆ ಈ ತಿದ್ದುಪಡಿಯಿಂದ ಲಕ್ಷಾಂತರ ಮಕ್ಕಳಿಗೆ ಅನ್ಯಾಯವಾಗಿದೆ. ಈಗಾಗಲೇ ದೇಶದ ಬೇರೆ ರಾಜ್ಯಗಳಲ್ಲಿ ಆರ್‌ಟಿಇ ಮರು ಅನುಷ್ಠಾನಗೊಳಿಸಲಾಗಿದೆ. ಪ್ರತಿ ವರ್ಷ ಲಕ್ಷಾಂತರ ಮಕ್ಕಳು ಆರ್‌ಟಿಇ ಅಡಿಯಲ್ಲಿ ಶಾಲೆಗೆ ದಾಖಲಾಗುತ್ತಿದ್ದಾರೆ.
ಆದ್ರೆ ಆರ್‌ಟಿಇ ಕಾಯಿದೆ ತಿದ್ದುಪಡಿ ನಂತರ ಆರ್.ಟಿ.ಇ ಮಕ್ಕಳ ಸಂಖ್ಯೆ ಮೂರರಿಂದ ನಾಲ್ಕು ಸಾವಿರಕ್ಕೆ ಇಳಿದಿದೆ. ಈಗಾಗಲೇ ನಾವು ಆರ್‌ಟಿಇ ಮರು ಅನುಷ್ಠಾನಗೊಳಿಸುವಂತೆ ಕೋರ್ಟ್ ಮೊರೆ ಹೋಗಿದ್ದೇವೆ. ಈಗ ಮತ್ತೊಮ್ಮೆ ವಿದ್ಯಾರ್ಥಿಗಳಿಂದಲೂ ಪ್ರಧಾನಿ ನರೇಂದ್ರ ಮೋದಿಗೆ ಆರ್‌ಟಿಇ ಮರು ಅನುಷ್ಠಾನಗೊಳಿಸಲು ಪತ್ರ ಅಭಿಯಾನ ಆರಂಭವಾಗುತ್ತಿದೆ ಎಂದು ಖಾಸಗಿ ಶಾಲೆಗಳ ಒಕ್ಕೂಟಗಳ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿಕೆ ನೀಡಿದ್ದಾರೆ.
116 ದೇಶಗಳಿಗೆ ವ್ಯಾಪಿಸಿದ ಮಂಕಿಪಾಕ್ಸ್ ವೈರಸ್, ಭಾರತಕ್ಕೆ ಆತಂಕ, ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ!
ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಶೇ. 25ರಷ್ಟು ಸ್ಥಾನಗಳನ್ನು ಆರ್‌ಟಿಇ ಕಾಯ್ದೆ ಅಡಿಯಲ್ಲಿ ಮೀಸಲು ಇಡಬೇಕೆಂದು 2009ರಲ್ಲಿ ಸರ್ಕಾರ ನಿಯಮ ರೂಪಿಸಿತ್ತು. ಈ ಕಾಯ್ದೆಗೆ ಸರ್ಕಾರ ತಿದ್ದುಪಡಿ ತಂದ ನಂತರ ಆರ್‌ಟಿಇ ಕಾಯ್ದೆ ಅಡಿಯಲ್ಲಿ ಸೀಟು ಪಡೆಯುವ ಅರ್ಜಿಗಳ ಸಂಖ್ಯೆ ಇಳಿಮುಖವಾಗಿದೆ.
ತಿದ್ದುಪಡಿ ಏನು?
ಆರ್‌ಟಿಇ ಅಡಿಯಲ್ಲಿ ಸೀಟು ಪಡೆಯಬೇಕಾದರೆ ಪಾಲಕರು ವಾಸಿಸುವ ಪ್ರದೇಶದ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ಇಲ್ಲದಿದ್ದರೆ ಮಾತ್ರ ಅರ್ಜಿ ಹಾಕಬಹುದು ಎಂಬುದು ಇತ್ತೀಚೆಗೆ ಕಾಯ್ದೆಗೆ ತಂದಿರುವ ತಿದ್ದುಪಡಿಯೇ ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಸರ್ಕಾರಿ ಶಾಲೆಗಳು ಇರುವುದರಿಂದ ಪಾಲಕರಿಗೆ ಆರ್‌ಟಿಇ ಕಾಯ್ದೆ ಅಡಿ ಪ್ರಯೋಜನ ಪಡೆಯುವುದು ದುಸ್ತರವಾಗಿದೆ. ಅರ್ಜಿ ಹಾಕಿದರೂ ಪ್ರವೇಶ ಸಿಗದ ಹಿನ್ನೆಲೆಯಲ್ಲಿ ಪಾಲಕರು ಆಸಕ್ತಿ ಕಳೆದುಕೊಂಡಿದ್ದಾರೆ.