ಕೋಚಿಂಗ್ ಗೆ ಲಕ್ಷಗಟ್ಟಲೇ ಖರ್ಚು ಮಾಡದೇ UPSC ಪಾಸ್ ಆಗಲು ಇಲ್ಲಿದೆ ಉತ್ತಮ ಸಲಹೆಗಳು
UPSC ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆ ಈ ವರ್ಷ ಜೂನ್ 27ರಂದು ನಡೆಯಲಿದೆ. ಐಎಎಸ್, ಐಪಿಎಸ್, ಅಧಿಕಾರಿಯಾಗುವ ಕನಸು ನಿಮಗೂ ಇದ್ದರೆ ಖಂಡಿತ ಈ ಪರೀಕ್ಷೆಯಲ್ಲಿ ನೀವು ಭಾಗಿಯಾಗುತ್ತೀರಿ. ಲಕ್ಷಾಂತರ ಜನರು ಪರೀಕ್ಷೆಗೆ ಸಿದ್ಧರಾಗಿರುತ್ತಾರೆ. ಆದರೆ ಇದರಲ್ಲಿ ಆಯ್ಕೆಯಾಗುವುದು ಮಾತ್ರ ಬೆರಳೆಣಿಕೆಯಷ್ಟು ಮಾತ್ರ. ಪರೀಕ್ಷೆಯಲ್ಲಿ ಪಾಸ್ ಆಗಲು ಸರಿಯಾದ ಮಾರ್ಗದರ್ಶನ ಮತ್ತು ಕಾರ್ಯತಂತ್ರವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಈ ಬಾರಿ ಯುಪಿಎಸ್ ಸಿ ಟಾಪರ್ ನವ್ಯಾ ಸಿಂಗ್ಲಾ ಅವರ ಅಮೂಲ್ಯ ಸಲಹೆ ಮತ್ತು ತಂತ್ರಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. 2016ರಲ್ಲಿ ಮೊದಲ ಪ್ರಯತ್ನದಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ನವ್ಯಾ ತೇರ್ಗಡೆಯಾಗಿದ್ದರು. ನವ್ಯ ಅವರು ಐಪಿಎಸ್ ಆಗಲು ಯೋಚಿಸಿದ ದಿನ, ಅವರು ಒಂದು ನಿರ್ಧಾರವನ್ನು ತೆಗೆದುಕೊಂಡರು ಮತ್ತು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪ್ರಯತ್ನಿಸುವುದಾಗಿ ಹೇಳಿದರು. ನವ್ಯರ ಪರಿಶ್ರಮ, ಸರಿಯಾದ ತಂತ್ರ, ಮತ್ತು ಪ್ರೋಟೋ-ಪ್ಲಾನಿಂಗ್ ಗಳು ಮೊದಲ ಬಾರಿಗೆ ಪರೀಕ್ಷೆ ಪಾಸ್ ಆಗುವಂತೆ ಮಾಡಿತು. ಅವರು ಐಪಿಎಸ್ ಆಕಾಂಕ್ಷಿಗಳಿಗಾಗಿ ತಿಳಿಸಿರುವ ಟಿಪ್ಸ್ ಇಲ್ಲಿದೆ...
ಪರೀಕ್ಷೆ ಬರೆಯಲು ನಿರ್ಧರಿಸಿದಾಗ ಮೊದಲು ಕೋಚಿಂಗ್ ಪಡೆದರು ಎಂದು ನವ್ಯಾ ಹೇಳಿದ್ದಾರೆ. ಕೋಚಿಂಗ್ ಗೆ ಸೇರಬಹುದು, ಶುಲ್ಕ ಪಾವತಿಸಬಹುದು ಅಥವಾ ಪ್ರತಿದಿನ ತರಗತಿಗಳನ್ನು ತೆಗೆದುಕೊಳ್ಳಬಹುದು. ಇದರಿಂದ ಸಾಕಷ್ಟು ಸಹಾಯವಾಗುತ್ತದೆ. ಸರಿಯಾದ ಮಾರ್ಗದರ್ಶನ ಸಿಕ್ಕರೆ, ವಿಷಯಗಳನ್ನು ಬೇಗ ಕಲಿಯಬಹುದು. ಸಿದ್ಧತೆಯ ಆರಂಭದಲ್ಲಿ, ಅಭ್ಯರ್ಥಿಯು ಏಕಾಗ್ರತೆಗಾಗಿ ಒಂದು ಕಾರ್ಯತಂತ್ರವನ್ನು ನಿರ್ಧರಿಸಬೇಕು ಎಂದು ನವ್ಯಾ ಇತರ ಅಭ್ಯರ್ಥಿಗಳಿಗೆ ಸಲಹೆ ನೀಡುತ್ತಾರೆ.
ಮೊದಲಿಗೆ ಪರೀಕ್ಷೆ ಬರೆಯಲು ಎಲ್ಲಿಂದ ಮಾರ್ಗದರ್ಶನ ಅಥವಾ ಸಲಹೆಯನ್ನು ತೆಗೆದುಕೊಳ್ಳುತ್ತೀರಿ ಎಂಬುದನ್ನು ನೆನಪಿನಲ್ಲಿಡಿ, ಅನುಕೂಲಕ್ಕೆ ಅನುಗುಣವಾಗಿ ಒಂದು ಕಾರ್ಯತಂತ್ರವನ್ನು ಮಾಡಬೇಕು. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅಧ್ಯಯನವನ್ನು ಪ್ರಾರಂಭಿಸಿ, ಯಾವ ವಿಷ್ಯ ಕಷ್ಟವಿರುತ್ತದೆ ಅದಕ್ಕೆ ಹೆಚ್ಚಿನ ಸಮಯ ನೀಡಿ. ಆದ್ದರಿಂದ ನಿಮಗೆ ಬೇಕಾದ ವೇಳಾಪಟ್ಟಿಯನ್ನು ನೀವೇ ನಿಗದಿಪಡಿಸಿಕೊಳ್ಳಿ. ಕೋಚಿಂಗ್ ತೆಗೆದುಕೊಳ್ಳಬೇಕೋ ಬೇಡವೋ ಎಂಬುದು ಕೂಡ ಕಾರ್ಯತಂತ್ರದ ಭಾಗವಾಗಿದೆ
ಯುಪಿಎಸ್ ಸಿಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಐಚ್ಛಿಕ ವಿಷಯವನ್ನು ಆಯ್ಕೆ ಮಾಡುವುದು ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಳ್ಳೆಯ ಐಡಿಯಾ ಬಂದ ಮೇಲೆ ಮಾತ್ರ ಆಯ್ಕೆ ಮಾಡಿ ಎನ್ನುತ್ತಾರೆ ನವ್ಯಾ. ಪದವಿ ಪಡೆದ ವಿಷಯವನ್ನು ಆಯ್ಕೆ ಮಾಡುವುದು ಒಳ್ಳೆಯದು ಏಕೆಂದರೆ ಕಲಿತ ವಿಷಯದ ಮೇಲೆ ನಿಮಗೆ ಉತ್ತಮ ಹಿಡಿತವಿರುತ್ತದೆ ಎನ್ನುತ್ತಾರೆ. ನವ್ಯ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಂತೆ, ಅದೇ ವಿಷಯವನ್ನು ಐಚ್ಛಿಕ ಎಂದು ಆಯ್ಕೆ ಮಾಡಿದ್ದರು ಎನ್ನುತ್ತಾರೆ ಅವರು.
ಐಚ್ಛಿಕ ವಿಷಯ ಅಗತ್ಯವಿಲ್ಲದಿದ್ದರೂ, ಸುಲಭವಾಗಿರುವ ಮತ್ತು ಬೇಗನೆ ಅರ್ಥ ಮಾಡಿಕೊಳ್ಳುವ ವಿಷಯವನ್ನು ಆಯ್ಕೆ ಮಾಡಲು ಪ್ರಯತ್ನಿಸಿ. ಸರಿಯಾದ ಕಾರ್ಯತಂತ್ರ ಮತ್ತು ಸರಿಯಾದ ಆಯ್ಕೆಯು ಪರೀಕ್ಷೆ ಸಿದ್ಧತೆಗೆ ಎರಡು ಅತ್ಯಂತ ಅವಶ್ಯಕವಾದ ಅಂಶಗಳಾಗಿವೆ ಎಂಬುದನ್ನು ಗಮನಿಸಿ. ಇದರಿಂದ ಸ್ಕೋರ್ ಉತ್ತಮವಾಗುತ್ತದೆ.
ಮುಂದಿನ ಮುಖ್ಯ ಹಂತವೆಂದರೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳುವುದು, ಇದರಿಂದ ಹೆಚ್ಚಿನ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎನ್ನುತ್ತಾರೆ ನವ್ಯಾ. ಇದಕ್ಕೆ ಉದಾಹರಣೆಯನ್ನು ನೀಡುತ್ತಾ, "ನಾನು ದಿನಪತ್ರಿಕೆಯ ಅಗತ್ಯ ಭಾಗಗಳ ಟಿಪ್ಪಣಿಗಳನ್ನು ಸಹ ತಯಾರಿಸಿ, ಅದನ್ನು ಓದಲು ಬಳಸಿದ್ದೇನೆ" ಎಂದು ಅವರು ಹೇಳುತ್ತಾರೆ. ಅದೇ ರೀತಿ, ಮುಖ್ಯ ಪರೀಕ್ಷೆಗೆ ಸಿದ್ಧತೆ ನಡೆಸಲು ಕನಿಷ್ಠ ಪುಸ್ತಕಗಳನ್ನು ಇಟ್ಟುಕೊಳ್ಳಿ, ನಂತರ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.
ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಬಯಸಿದರೆ, ಆಂತರಿಕ ಬರವಣಿಗೆ ಅಭ್ಯಾಸಕ್ಕೆ ಹೆಚ್ಚು ಒತ್ತು ನೀಡಿ. ಪ್ರಶ್ನೆಗಳಿಗೆ ಉತ್ತರ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಯಶಸ್ಸನ್ನು ಖಚಿತಪಡಿಸುತ್ತದೆ. ಕಳೆದ ವರ್ಷದ ಪತ್ರಿಕೆ ನೋಡಿ, ಅಣಕು ಪರೀಕ್ಷೆಗಳನ್ನು ನೀಡಿ ಮತ್ತು ಏನಾದರೂ ಕೊರತೆ ಇದೆಯೇ ಎಂದು ನೋಡಲು ಉತ್ತರಗಳನ್ನು ಬರೆಯಿರಿ. ಗೊತ್ತಾಗದ ವಿಷಯಗಳನ್ನು ಮತ್ತೆ ಮನನ ಮಾಡಿ.
ನವ್ಯ ಹೇಳುತ್ತಾರೆ, "ಇಡೀ ತಯಾರಿಯ ಸಮಯದಲ್ಲಿ ಪೇಪರ್ ಓದುವುದನ್ನು ನಿಲ್ಲಿಸಬೇಡಿ, ಏಕೆಂದರೆ ಸುತ್ತಲಿರುವ ವಿದ್ಯಮಾನಗಳ ಬಗ್ಗೆ ತಿಳಿದಾಗ, ಉತ್ತರ ನೀಡಲು ತುಂಬಾನೇ ಸುಲಭವಾಗುತ್ತದೆ.
ಈ ಪರೀಕ್ಷೆಯನ್ನು ಒಂದೂವರೆ ವರ್ಷ ತಯಾರಿಯಲ್ಲಿ ಪಾಸ್ ಮಾಡಬಹುದು ಎಂಬುದನ್ನು ನೆನಪಿಡಿ. ಮೊದಲ ಪ್ರಯತ್ನ ಉಳಿದ ಪ್ರಯತ್ನಗಳಲ್ಲಿ ಬರುವುದಿಲ್ಲ, ಆದ್ದರಿಂದ ಕಠಿಣ ಪರಿಶ್ರಮ ವಹಿಸಿ, ಮೊದಲ ಪ್ರಯತ್ನ ಕೊನೆಯ ಪ್ರಯತ್ನವಾಗಿ ಮುಂದುವರಿಯಿರಿ. ಈ ಪ್ರಯತ್ನದಲ್ಲಿ ಏನು ಮಾಡಬೇಕೋ ಅದನ್ನು ಮಾಡಲು ದೃಢ ನಿರ್ಧಾರ ಮಾಡಿ. ಅದರಂತೆ ಅಧ್ಯಯನ ಮಾಡಿ. ಹೀಗೆ ಮಾಡಿದರೆ ಸುಲಭವಾಗಿ ಐಪಿಎಸ್ ಅಧಿಕಾರಿಯಾಗಬಹುದು.