ಶೇ.15ರಷ್ಟು ಶುಲ್ಕ ಏರಿಕೆಗೆ ಖಾಸಗಿ ಶಾಲೆಗಳ ನಿರ್ಧಾರ: ಶೇ.5ರಿಂದ ಶೇ.15 ಹೆಚ್ಚುವರಿ ಹೊರೆ ಸಂಭವ
ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಪ್ರಮುಖ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಪೋಷಕರು ಇನ್ನಷ್ಟು ದುಬಾರಿ ಮೊತ್ತ ತೆರಬೇಕಾಗುತ್ತದೆ. 2023-24ನೇ ಸಾಲಿನಲ್ಲಿ ತಮ್ಮೆಲ್ಲಾ ಸದಸ್ಯ ಶಾಲೆಗಳಲ್ಲಿ ಪ್ರವೇಶ ಶುಲ್ಕವನ್ನು ಶೇ.5ರಿಂದ ಶೇ.15ರಷ್ಟು ಹೆಚ್ಚಿಸಲು ಕ್ಯಾಮ್ಸ್ ಸೇರಿದಂತೆ ವಿವಿಧ ಖಾಸಗಿ ಶಾಲಾ ಸಂಘಟನೆಗಳು ನಿರ್ಧರಿಸಿವೆ.
ಬೆಂಗಳೂರು (ಫೆ.03): ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಪ್ರಮುಖ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಪೋಷಕರು ಇನ್ನಷ್ಟು ದುಬಾರಿ ಮೊತ್ತ ತೆರಬೇಕಾಗುತ್ತದೆ. 2023-24ನೇ ಸಾಲಿನಲ್ಲಿ ತಮ್ಮೆಲ್ಲಾ ಸದಸ್ಯ ಶಾಲೆಗಳಲ್ಲಿ ಪ್ರವೇಶ ಶುಲ್ಕವನ್ನು ಶೇ.5ರಿಂದ ಶೇ.15ರಷ್ಟು ಹೆಚ್ಚಿಸಲು ಕ್ಯಾಮ್ಸ್ ಸೇರಿದಂತೆ ವಿವಿಧ ಖಾಸಗಿ ಶಾಲಾ ಸಂಘಟನೆಗಳು ನಿರ್ಧರಿಸಿವೆ.
ಪ್ರಮುಖವಾಗಿ ಸುಮಾರು 4 ಸಾವಿರ ಸದಸ್ಯ ಶಾಲೆಗಳನ್ನು ಹೊಂದಿರುವ ಕರ್ನಾಟಕ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ಶೇ.10ರಿಂದ 15ರಷ್ಟು ಪ್ರವೇಶ ಶುಲ್ಕ ಹೆಚ್ಚಿಸಲು ತನ್ನ ಸದಸ್ಯ ಶಾಲೆಗಳಿಗೆ ಸಲಹೆ ನೀಡಿದೆ. ಪ್ರತಿ ವರ್ಷ ಹೆಚ್ಚಾಗುವ ಶಾಲಾ ನಿರ್ವಹಣಾ ವೆಚ್ಚ, ಹೊಸದಾಗಿ ಅಳವಡಿಸಿಕೊಳ್ಳುವ ಸೌಲಭ್ಯಗಳು ಇತ್ಯಾದಿ ಕಾರಣದಿಂದ ಅದಕ್ಕೆ ಅನುಗುಣವಾಗಿ ಶುಲ್ಕ ಹೆಚ್ಚಿಸಲು ಸಲಹೆ ನೀಡಲಾಗಿದೆ. ಅಂತಿಮವಾಗಿ ಶುಲ್ಕ ಹೆಚ್ಚಿಸುವುದು ಬಿಡುವುದು ಆಯಾ ಶಾಲಾ ಆಡಳಿತ ಮಂಡಳಿಗಳಿಗೆ ಬಿಟ್ಟ ವಿಚಾರ.
ಅಂಗನವಾಡಿ ಶಿಕ್ಷಣ ಅವಧಿ 3 ತಾಸು ಕಡಿತ: ಸರ್ಕಾರದಿಂದ ಆದೇಶ
ಆದರೆ, ಪೋಷಕರಿಗೆ ಹೊರೆಯಾಗುವಂತೆ ಶೇ.20, ಶೇ.30ರಷ್ಟು ಶುಲ್ಕ ಹೆಚ್ಚಿಸಿದರೆ ಅದು ಒಪ್ಪುವಂತಹದ್ದಲ್ಲ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಹೇಳಿದ್ದಾರೆ. ಮತ್ತೊಂದು ಖಾಸಗಿ ಶಾಲಾ ಸಂಘಟನೆ ರುಪ್ಸಾ ಕರ್ನಾಟಕ ಕೂಡ ಶೇ.5ರಿಂದ 10ರಷ್ಟುಶುಲ್ಕ ಹೆಚ್ಚಿಸಲು ತನ್ನ ಸದಸ್ಯ ಶಾಲೆಗಳಿಗೆ ತಿಳಿಸಿರುವುದಾಗಿ ಹೇಳಿದೆ. ನಮ್ಮ ಸಂಘಟನೆಯಡಿ ಬರುವ ಬಜೆಟ್ ಶಾಲೆಗಳಲ್ಲಿ ದಾಖಲಾತಿ ಕಡಿಮೆ ಇದೆ. ಹೀಗಾಗಿ ಶುಲ್ಕವನ್ನು ತೀವ್ರವಾಗಿ ಹೆಚ್ಚಿಸಲು ಸಾಧ್ಯವಿಲ್ಲ. ಖರ್ಚು ವೆಚ್ಚಕ್ಕೆ ಅಗುಗುಣವಾಗಿ ಶೇ.5ರಿಂದ 10ರಷ್ಟು ಹೆಚ್ಚಿಸಿಕೊಳ್ಳಲು ತಿಳಿಸಲಾಗಿದೆ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆಹೇಳಿದ್ದಾರೆ.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಎಲ್‌ಕೆಜಿಯಿಂದ ಪಿಯುಸಿವರೆಗೆ ಫ್ರೀ ಶಿಕ್ಷಣ: ಎಚ್‌ಡಿಕೆ ಭರವಸೆ
ಇನ್ನು, ಮತ್ತೊಂದು ಖಾಸಗಿ ಶಾಲಾ ಸಂಘಟನೆಯಾದ ಕುಸ್ಮಾ ಶುಲ್ಕ ಹೆಚ್ಚಳ ನಿರ್ಧಾರವನ್ನು ಸದಸ್ಯ ಶಾಲೆಗಳಿಗೇ ಬಿಟ್ಟಿರುವುದಾಗಿ ಹೇಳಿದೆ. ಒಂದು ಸಂಘಟನೆಯಾಗಿ ನಾವು ಸದಸ್ಯ ಶಾಲೆಗಳಿಗೆ ಇಂತಿಷ್ಟೇ ಶುಲ್ಕ ಹೆಚ್ಚಿಸಿ ಎಂದು ಹೇಳಲಾಗುವುದಿಲ್ಲ ಅಥವಾ ಶುಲ್ಕ ಹೆಚ್ಚಿಸಲು ನಮಗೆ ಸ್ವಾತಂತ್ರ್ಯವಿದೆ ಎಂದು ಮನಸೋ ಇಚ್ಛೆ ಹೆಚ್ಚಿಸಲೂ ಆಗುವುದಿಲ್ಲ. ಶಾಲೆ ಇರುವ ಪ್ರದೇಶ, ಶಾಲೆಗೆ ಯಾವ ವರ್ಗದ ಮಕ್ಕಳು ಬರುತ್ತಿದ್ದಾರೆ, ಪೋಷಕರ ಶಕ್ತಿ ಸಾಮರ್ಥ್ಯ, ಶಾಲೆಯಲ್ಲಿರುವ ಸೌಲಭ್ಯಗಳು ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಶುಲ್ಕ ಹೆಚ್ಚಿಸಿಕೊಳ್ಳಲು ಶಾಲೆಗಳಿಗೆ ಬಿಡಲಾಗಿದೆ ಎಂದು ಕುಸ್ಮಾ ಅಧ್ಯಕ್ಷರಾದ ಸತ್ಯಮೂರ್ತಿ ತಿಳಿಸಿದ್ದಾರೆ.