ಐಐಟಿ ರೂರ್ಕಿ ನಡೆಸುತ್ತಿರುವ GATE 2025 ಪರೀಕ್ಷಾ ಅಭ್ಯರ್ಥಿಗಳಿಗೆ ಕಳುಹಿಸಲಾದ ಇಮೇಲ್‌ನಲ್ಲಿ "ಇಡ್ಲಿ, ಚಟ್ನಿ, ಸಾಂಬಾರ್" ಶಬ್ದಗಳು ಕಾಣಿಸಿಕೊಂಡು ವೈರಲ್ ಆಗಿದೆ. ರೆಡ್ಡಿಟ್‌ನಲ್ಲಿ ಹಂಚಿಕೊಂಡ ಸ್ಕ್ರೀನ್‌ಶಾಟ್‌ನ ಸತ್ಯಾಸತ್ಯತೆ ದೃಢಪಟ್ಟಿಲ್ಲ. ಐಐಟಿ ರೂರ್ಕಿ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ತಾಂತ್ರಿಕ ದೋಷ ಅಥವಾ ತಮಾಷೆಯೆಂಬುದು ಸ್ಪಷ್ಟವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆ ಮತ್ತು ಹಾಸ್ಯಗಳು ಹರಿದಾಡುತ್ತಿವೆ.
ಐಐಟಿ ರೂರ್ಕಿ (IIT Roorkee) ಯಲ್ಲಿ ಜನವರಿ ಒಂದರಿಂದ ಗೇಟ್ ( ಎಂಜಿನಿಯರಿಂಗ್‌ನಲ್ಲಿ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ) ನಡೆಯುತ್ತಿದೆ. ಈ ಮಧ್ಯೆ ಗೇಟ್ ಆಡಳಿತ ಪರೀಕ್ಷಾ ಅಭ್ಯರ್ಥಿಗೆ ಕಳುಹಿಸಿದ ಇಮೇಲ್ (Email) ಒಂದು ವೈರಲ್ ಆಗಿದೆ. ರೆಡ್ಡಿಟ್ ನಲ್ಲಿ ಇಮೇಲ್ ಸ್ಕ್ರೀನ್ ಶಾಟ್ ಹಂಚಿಕೊಳ್ಳಲಾಗಿದೆ. ಅಡ್ಮಿಟ್ ಕಾರ್ಡ್ ಗೆ ಸಂಬಂಧಿಸಿದ ಇ ಮೇಲ್ ಇದಾಗಿದ್ದು, ಇದ್ರಲ್ಲಿ ಇಡ್ಲಿ, ಸಾಂಬಾರ್ ಬಂದಿರೋದು ಕುತೂಹಲ ಕೆರಳಿಸಿದೆ. ವಿಚಿತ್ರ ಇ ಮೇಲ್ ಬಗ್ಗೆ ಬಳಕೆದಾರರು ಚರ್ಚೆ ಶುರು ಮಾಡಿದ್ದಾರೆ. ಇದು ಟೆಕ್ನಿಕಲ್ ತಪ್ಪೋ ಅಥವಾ ತಮಾಷೆಗೆ ಹೀಗೆ ಬರೆಯಲಾಗಿದೆಯೋ ಎನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಇ ಮೇಲ್ ಸತ್ಯಾಸತ್ಯತೆಯನ್ನು ದೃಢೀಕರೀಸೋದು ಕಷ್ಟ. ಐಐಟಿ ರೂರ್ಕಿ ಕೂಡ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದ.
ವೈರಲ್ ರೆಡ್ಡಿಟ್ ಪೋಸ್ಟ್ (Reddit post) ನಲ್ಲಿ ಏನಿದೆ? : ರೆಡ್ಡಿಟ್ ನಲ್ಲಿ ಇ ಮೇಲ್ ಸ್ಕ್ರೀನ್ ಶಾಟ್ ಹಂಚಿಕೊಳ್ಳಲಾಗಿದೆ. ನನಗೆ ಗೇಟ್ (GATE) ನಿಂದ ಈ ಅಧಿಕೃತ ಮೇಲ್ ಬಂದಿದೆ. ಇದು ಉದ್ದೇಶಪೂರ್ವಕವೇ? ಅವರು ಅಂತಹ ತಪ್ಪು ಹೇಗೆ ಮಾಡ್ತಾರೆ ಎಂದು ಶೀರ್ಷಿಕೆ ಹಾಕಲಾಗಿದೆ. ಡಿಯರ್, ಇಡ್ಲಿ ಚಟ್ನಿ, ನೋ ಸಾಂಬಾರ್, ಗೇಟ್ 2025 ಅಡ್ಮಿನ್ ಕಾರ್ಡ್ GOAPS ಪೋರ್ಟಲ್ ನಲ್ಲಿ ಲಭ್ಯವಿದ್ದು, ನೀವು ಡೌನ್ಲೋಡ್ ಮಾಡಬಹುದು. ಗೇಟ್ 2025ಕ್ಕೆ ಶುಭವಾಗಲಿ ಎಂದು ಮೇಲ್ ಕಳುಹಿಸಲಾಗಿದೆ. ಐಐಟಿ ರೂರ್ಕಿ ಅಧಿಕೃತ ತಂಡ ಎಂದೇ ಬರೆಯಲಾಗಿದೆ. ಈ ಫೋಸ್ಟ್ ವೇಗವಾಗಿ ವೈರಲ್ ಆಗಿದೆ, ಈವರೆಗೆ 2800ಕ್ಕೂ ಹೆಚ್ಚು ಬಾರಿ ಪೋಸ್ಟ್ ವೀಕ್ಷಣೆ ಮಾಡಲಾಗಿದೆ. ನೂರಾರು ಮಂದಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಸೈನಿಕ ಶಾಲೆ ಪ್ರವೇಶ: 6ನೇ ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ!
ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಿಸಿದ ಮೀಮ್ಸ್ ಮತ್ತು ಜೋಕ್ ಹರಿದಾಡುತ್ತಿದೆ. ಕೆಲವರು ಇದನ್ನು ಜೋಕ್ ಅಂದ್ರೆ ಮತ್ತೆ ಕೆಲವರು ಅದ್ರ ಸತ್ಯಾಸತ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕೆಲವರು ತಮಗೂ ಇಂಥ ಮೇಲ್ ಬಂದಿರೋದಾಗಿ ತಿಳಿಸಿದ್ದಾರೆ. ಅನೇಕ ಬಾರಿ ಟೆಕ್ನಿಕಲ್ ಸಮಸ್ಯೆಯಿಂದ ಇದು ಸಂಭವಿಸುತ್ತದೆ. ಡ್ರಾಫ್ಟ್ ಮೇಲ್ ಬಳಸುವಾಗ ಇಂಥ ಸಮಸ್ಯೆ ಹೆಚ್ಚು ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರಿಗೆ ಚಟ್ನಿ ಹಾಗೂ ಸಾಂಬಾರ್ ಸಮಸ್ಯೆಯಾಗಿದೆ. ಚಟ್ನಿ ಇದೆ ಸಾಂಬಾರ್ ಏಕೆ ಇಲ್ಲ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಪುಣ್ಯ GOAPS ಅಂತ ಬರೆದ್ರು ಗೊಬ್ಬರ ಅಂತ ಬರೆದಿಲ್ಲ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಒಟ್ಟಿನಲ್ಲಿ ಗೇಟ್ ಪರೀಕ್ಷೆಗೆ ಸಂಬಂಧಿಸಿದ ಇ ಮೇಲ್ ನಲ್ಲಿ ಇಡ್ಲಿ ಚಟ್ನಿ ಸಾಂಬಾರ್ ಸಖತ್ ಸದ್ದು ಮಾಡ್ತಿದೆ.
ಮಕ್ಕಳಿಗೆ ಈ ಹವ್ಯಾಸ ಕಲಿಸಿದರೆ, ವೃದ್ಧಾಪ್ಯದಲ್ಲಿ ಯಾವ ತಂದೆ-ತಾಯಿಯೂ ಆಶ್ರಮದಲ್ಲಿರುವ
ಗೇಟ್ ಪರೀಕ್ಷೆ 2025 ಅನ್ನು ಐಐಟಿ ರೂರ್ಕಿ ನಡೆಸುತ್ತಿದೆ. ಪರೀಕ್ಷೆಯು ಜನವರಿ 1, 2, 15 ಮತ್ತು 16 ರಂದು ನಡೆಯಲಿದೆ. ಜನವರಿ 1 ಮತ್ತು 2ರ ಪರೀಕ್ಷೆ ಈಗಾಗಲೇ ಮುಗಿದಿದ್ದು 15 ಮತ್ತು 16ರ ಪರೀಕ್ಷೆ ಬಾಕಿ ಇದೆ. ಗೇಟ್‌ನ ಪೂರ್ಣ ಹೆಸರು ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್. ಗೇಟ್‌ನಲ್ಲಿ ಹೆಚ್ಚಿನ ಅಂಕಗಳೊಂದಿಗೆ ಪಾಸ್ ಆದ್ರೆ IIT, NIT ಅಥವಾ IISc ನಂತಹ ಕೆಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ M.Tech ಅಥವಾ ME ಮಾಡಲು ಅವಕಾಶ ಸಿಗುತ್ತದೆ.
