Asianet Suvarna News Asianet Suvarna News

ಅಂಬೇಡ್ಕರ್ ಫೋಟೋ ಇಲ್ಲದೆ ಸಂವಿಧಾನ ದಿನ ಆಚರಣೆ: ಬೆಂಗಳೂರು ವಿವಿಯಲ್ಲಿ ಹೈಡ್ರಾಮಾ..!

ಸಂವಿಧಾನ ಆಚರಣೆ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋ ಇಲ್ಲದೇ ಕಾರ್ಯಕ್ರಮ ಆಯೋಜನೆ 

Created High Drama in Bangalore University During Constitution Day grg
Author
First Published Nov 30, 2022, 9:09 AM IST

ಬೆಂಗಳೂರು(ನ.30):  ಬೆಂಗಳೂರು ವಿಶ್ವವಿದ್ಯಾಲಯಲ್ಲಿ ನಡೆದ ಸಂವಿಧಾನ ದಿನ ದಿನಾಚರಣೆ ಕಾರ್ಯಕ್ರಮದಲ್ಲಿ ದೊಡ್ಡ ಹೈಡ್ರಾಮ ನಡೆದಿದೆ. ಸಂವಿಧಾನ ಆಚರಣೆ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋ ಇಲ್ಲದೇ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಹೀಗಾಗಿ ಅಂಬೇಡ್ಕರ್ ಫೋಟೋ ಇಲ್ಲದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. 

Created High Drama in Bangalore University During Constitution Day grg

ಯುನಿವರ್ಸಿಟಿ ಲಾ ಕಾಲೇಜ್ ಅಂಡ್ ಡಿಪಾರ್ಟ್‌ಮೆಂಟ್‌ ಆಫ್ ಸ್ಟಡೀಸ್ ಇನ್ ಲಾ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಫೋಟೋ ಇಲ್ಲದೆ ಕಾರ್ಯಕ್ರಮ ಆಯೋಜಿಸಿತ್ತು. ಅಂಬೇಡ್ಕರ್ ಫೋಟೋ ಇಲ್ಲದಕ್ಕೆ ಪಿಎಚ್ಡಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ ಬಳಿಕ ವಿವಿ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿತ್ತು. 

Created High Drama in Bangalore University During Constitution Day grg

ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ಸಲ್ಲಿ ಎಲ್ಲ ರಸ್ತೆ ಬಂದ್‌ ಇಲ್ಲ...!

ಗಲಾಟೆ ಬಳಿಕ ಎಚ್ಚೆತ್ತ ವಿವಿ ಆಡಳಿತ ಮಂಡಳಿ ಅಂಬೇಡ್ಕರ್ ಫೋಟೋವಿಟ್ಟು ಗೌರವ ಸಲ್ಲಿಸಿದೆ. ಇದಾದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ಲಾ ಕಾಲೇಜಿನ ಪ್ರಿನ್ಸಿಪಲ್ ಅವರು ವಿದ್ಯಾರ್ಥಿಗಳಿಗೆ ಕ್ಷಮೆಯಾಚಿಸಿದ್ದಾರೆ ಅಂತ ತಿಳಿದು ಬಂದಿದೆ. ಈ ಕುರಿತು ಸಂವಿಧಾನ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಅಂಬೇಡ್ಕರ್ ಫೋಟೋವಿಡುವಂತೆ ಕುಲಸಚಿವರು ಸುತ್ತೋಲೆ ಹೊರಡಿಸಿದ್ದಾರೆ. 
 

Follow Us:
Download App:
  • android
  • ios