Asianet Suvarna News Asianet Suvarna News

ಪಿಯು ಪುನರಾವರ್ತಿತರ ಪರೀಕ್ಷೆ ರದ್ದತಿ ಬಗ್ಗೆ ಮಹತ್ವದ ಮಾಹಿತಿ

* ಸಮಿತಿ ವರದಿ ಆಧರಿಸಿ ನಿರ್ಧಾರ: ನಿರ್ದೇಶಕಿ ಸ್ನೇಹಲ್‌
* ತಮ್ಮನ್ನೂ ಪರೀಕ್ಷೆ ರದ್ದು ನಿರ್ಧಾರಕ್ಕೆ ಪರಿಗಣಿಸಲು ಕೋರಿದ ಪುನರಾವರ್ತಿತ ಅಭ್ಯರ್ಥಿಗಳು
* ಈ ಸಂಬಂಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

Create of Panel of Experts for Cancel PU Repeat Exam in Karnataka grg
Author
Bengaluru, First Published Jun 17, 2021, 7:59 AM IST
  • Facebook
  • Twitter
  • Whatsapp

ಬೆಂಗಳೂರು(ಜೂ.17): ಪುನರಾವರ್ತಿತ ವಿದ್ಯಾರ್ಥಿಗಳಿಗೂ ಪರೀಕ್ಷೆ ರದ್ದು ನಿರ್ಧಾರ ವಿಸ್ತರಿಸಬೇಕೆ ಬೇಡವೇ ಎಂಬ ಬಗ್ಗೆಯೂ ವರದಿ ನೀಡಲು ತಜ್ಞರ ಸಮಿತಿಗೆ ಸೂಚಿಸಲಾಗಿದೆ ಎಂದು ಇದೇ ವೇಳೆ ನಿರ್ದೇಶಕಿ ಸ್ನೇಹಲ್‌ ಅವರು ತಿಳಿಸಿದ್ದಾರೆ.

ಪ್ರಸ್ತುತ ಹೊಸ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದುಪಡಿಸಿದರೂ ಪುನಾರಾವರ್ತಿತ ಮತ್ತು ಖಾಸಗಿ ಅಭ್ಯರ್ಥಿಗಳಿಗೆ ಕೋವಿಡ್‌ ತಹಬದಿಗೆ ಬಂದ ಬಳಿಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಪುನರಾವರ್ತಿತ ಅಭ್ಯರ್ಥಿಗಳು ತಮ್ಮನ್ನೂ ಪರೀಕ್ಷೆ ರದ್ದು ನಿರ್ಧಾರಕ್ಕೆ ಪರಿಗಣಿಸಲು ಕೋರಿದ್ದಾರೆ. ಕೆಲವರು ಈ ಸಂಬಂಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಕೂಡ ಪುನರಾವರ್ತಿತ ವಿದ್ಯಾರ್ಥಿಗಳಿಗೂ ಪರೀಕ್ಷೆ ರದ್ದು ಮಾಡಬಹುದೇ ಎಂದು ಪರಿಶೀಲಿಸಲು ನಿರ್ದೇಶಿಸಿದೆ. ಅದರಂತೆ ಪರಿಶೀಲಿಸಿ ವರದಿ ನೀಡಲು 12 ತಜ್ಞರ ಸಮಿತಿಗೆ ಸೂಚಿಸಲಾಗಿದೆ. ಇನ್ನೊಂದು ವಾರದಲ್ಲಿ ಸಮಿತಿ ವರದಿ ನೀಡಲಿದ್ದು ಅದರ ಆಧಾರದ ಮೇಲೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಈ ಮಾಹಿತಿಯನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೂ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಶಿಕ್ಷಣ ಇಲಾಖೆ ಗೊಂದಲದ ತೀರ್ಮಾನ: ಕೋರ್ಟ್ ಮೆಟ್ಟಿಲೇರಿದ ಪಿಯುಸಿ ಫೇಲಾದ ವಿದ್ಯಾರ್ಥಿಗಳು

ಇದೇ ವೇಳೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮಾದರಿಯಲ್ಲಿ ರಾಜ್ಯದಲ್ಲೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಫಲಿತಾಂಶ ನೀಡುವಾಗ ಯಾವೆಲ್ಲಾ ಅಂಶ ಪರಿಗಣಿಸಬೇಕೆಂದು ಫಾರ್ಮೂಲ ಸಿದ್ಧಪಡಿಸಲು ಇಲಾಖೆ 12 ತಜ್ಞರ ಸಮಿತಿ ರಚಿಸಿದೆ ಎಂದು ಅವರು ತಿಳಿಸಿದರು.
 

Follow Us:
Download App:
  • android
  • ios