Asianet Suvarna News Asianet Suvarna News

NLSIU ಪ್ರವೇಶ ಪರೀಕ್ಷೆ ರದ್ದು : ಸುಪ್ರೀಂಕೋರ್ಟ್ ಮಹತ್ವದ ಆದೇಶ

ನ್ಯಾಷನಲ್ ಲಾ ಆಪ್ಟಿಟ್ಯೂಡ್ ಪರೀಕ್ಷೆ ಸಂಬಂಧ ಸುಪ್ರೀಂಕೋರ್ಟ್ ಇಂದು (ಸೋಮವಾರ) ಮಹತ್ವದ ತೀರ್ಪು ನೀಡಿದೆ.

Court Cancels Bengaluru National Law School Separate Entrance Exam rbj
Author
Bengaluru, First Published Sep 21, 2020, 2:45 PM IST

ನವದೆಹಲಿ, (ಸೆ.21): ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿರ್ವಸಿಟಿ (ಎನ್ ಎಲ್ ಎಸ್ ಐಯು) ಸೆಪ್ಟೆಂಬರ್ 12ರಂದು ನಡೆಸಿದ್ದ ನ್ಯಾಷನಲ್ ಲಾ ಆಪ್ಟಿಟ್ಯೂಡ್ ಪರೀಕ್ಷೆ-2020 ಇದರ ಪ್ರತ್ಯೇಕ ಪ್ರವೇಶ ಪರೀಕ್ಷೆಯ ಅಧಿಸೂಚನೆಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ.

5 ವರ್ಷಗಳ ಸಂಯೋಜಿತ ಬಿಎ, ಎಲ್.ಎಲ್.ಬಿ ಪದವಿ ಪ್ರವೇಶದ ಎನ್ ಎಲ್ ಎಟಿ-2020 ಪ್ರವೇಶ ಪರೀಕ್ಷೆಯನ್ನು ರದ್ದುಗೊಳಿಸಿರುವ ಸುಪ್ರೀಂಕೋರ್ಟ್, ಸೆಪ್ಟೆಂಬರ್ 28ರಂದು ಬೆಂಗಳೂರಿನ ಎನ್ ಎಲ್ ಎಸ್ ಐಯು ಸೇರಿದಂತೆ ದೇಶಾದ್ಯಂತ ಇರುವ 22 ರಾಷ್ಟ್ರೀಯ ಕಾನೂನು ವಿವಿಗಳಲ್ಲಿನ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್ ಟಿ-2020) ಪ್ರಕಾರವೇ ಪ್ರವೇಶ ಪರೀಕ್ಷೆ ನಡೆಸಬೇಕೆಂದು ಸುಪ್ರೀಂಕೋರ್ಟ್  ನಿರ್ದೇಶಿಸಿದೆ.

Sex Education: ಬೇಕಾ? ಯಾರಿಗೆ? ಯಾವಾಗ?

ಎನ್ ಎಲ್ ಎಟಿ ನಿರ್ಧಾರ ಪ್ರಶ್ನಿಸಿ ಎನ್ ಎಲ್ ಎಸ್ ಐಯು ಮಾಜಿ ಉಪಕುಲಪತಿ ಪ್ರೊ.ಆರ್.ವೆಂಕಟರಾವ್ ಮತ್ತು ಪ್ರವೇಶ ಪರೀಕ್ಷೆ ಆಕಾಂಕ್ಷಿಗಳ ಪೋಷಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜಸ್ಟೀಸ್ ಅಶೋಕ್ ಭೂಷಣ್ ನೇತೃತ್ವದ ಪೀಠ ಇಂದು (ಸೋಮವಾರ)  ಈ ಆದೇಶವನ್ನು ನೀಡಿದೆ.

ಅಷ್ಟೇ ಅಲ್ಲದೇ ಎಲ್ಲಾ ಎನ್ ಎಲ್ ಯುಗಳು ಅಕ್ಟೋಬರ್ ಮಧ್ಯಂತರದಿಂದಲೇ ಶೈಕ್ಷಣಿಕ ಚಟುವಟಿಕೆ ಪುನರಾರಂಭಿಸುವಂತೆ ಸೂಚಿಸಿದೆ.

Follow Us:
Download App:
  • android
  • ios