ಮತ್ತೆ 141 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ದೃಢ..!
ಕಳೆದೊಂದು ವಾರದಲ್ಲಿ ಎಂಐಟಿಯ ಒಟ್ಟು 832 ವಿದ್ಯಾರ್ಥಿಗಳಿಗೆ ಸೋಂಕು| ಕಾಲೇಜನ್ನು ಕಂಟೈನ್ಮೆಂಟ್ ಝೋನ್ ಮಾಡಲಾಗಿದ್ದು, ಇನ್ನೂ ಕೆಲವು ದಿನ ಕಾಲೇಜು ಕ್ಯಾಂಪಸ್ ಸೀಲ್‌ಡೌನ್|
ಬೆಂಗಳೂರು(ಮಾ.28): ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ) ಕಾಲೇಜಿನ 126 ವಿದ್ಯಾರ್ಥಿಗಳು ಸೇರಿದಂತೆ ರಾಜ್ಯದಲ್ಲಿ ಶನಿವಾರ ಒಟ್ಟು 16 ವಿದ್ಯಾರ್ಥಿಗಳಿಗೆ ಸೋಂಕು ದೃಢವಾಗಿದೆ. ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಅರಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳಿಗೆ ವಸತಿ ಶಾಲೆಯಲ್ಲಿ ಐಸೋಲೋಷನ್ ವ್ಯವಸ್ಥೆ ಮಾಡಲಾಗಿದೆ.
ಗದಗ ಜಿಲ್ಲೆಯ ರೋಣ ಪಟ್ಟಣದ ಅಟಲ ಬಿಹಾರಿ ವಾಜಪೇಯಿ ಮಾದರಿ ವಸತಿ ಶಾಲೆಯ 4 ವಿದ್ಯಾರ್ಥಿನಿಯರಿಗೆ ಸೋಂಕು ದೃಢಪಟ್ಟಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪಟ್ಟಣದ ಖಾಸಗಿ ಕಾಲೇಜಿನ ಒಬ್ಬ ವಿದ್ಯಾರ್ಥಿ, ರಾಯಚೂರು ಜಿಲ್ಲೆಯ ಮುದಗಲ್‌ನ ಸರ್ಕಾರಿ ಬಾಲಕರ ಪ್ರೌಢ ಶಾಲೆಯ ಒಬ್ಬ ವಿದ್ಯಾರ್ಥಿಗೆ ಸೋಂಕು ದೃಢವಾಗಿದೆ.
ಹಾಸ್ಟೆಲ್‌ಗಳೇ ಕೊರೋನಾ ಹಾಟ್‌ಸ್ಪಾಟ್: 53 ವಿದ್ಯಾರ್ಥಿಗಳಿಗೆ ಪಾಸಿಟಿವ್
ಎಂಐಟಿಯಲ್ಲಿ 126 ಮಂದಿಗೆ ಸೋಂಕು:
ಮಣಿಪಾಲದ ಎಂಐಟಿಯಲ್ಲಿ ಮತ್ತೆ 126 ಮಂದಿ ವಿದ್ಯಾರ್ಥಿಗಳಿಗೆ ಸೋಂಕು ದೃಢವಾಗಿದೆ. ಶುಕ್ರವಾರ 184 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿತ್ತು. ಕಳೆದೊಂದು ವಾರದಲ್ಲಿ ಎಂಐಟಿಯ ಒಟ್ಟು 832 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಕಾಲೇಜನ್ನು ಕಂಟೈನ್ಮೆಂಟ್ ಝೋನ್ ಮಾಡಲಾಗಿದ್ದು, ಇನ್ನೂ ಕೆಲವು ದಿನ ಕಾಲೇಜು ಕ್ಯಾಂಪಸ್ ಸೀಲ್‌ಡೌನ್ ಆಗಿರಲಿದೆ.