ಬೆಂಗಳೂರು(ಮೇ.  05)  ಕೊರೋನಾದಿಂದ ಖಾಸಗಿ ಶಾಲೆಗಳು ಸಂಕಷ್ಟಕ್ಕೆ ಸಿಲುಕಿದದ್ದು ನೆರವಿಗೆ ಧಾವಿಸುವಂತೆ ಸಿಎಂ ಯಡಿಯೂರಪ್ಪ,  ಮತ್ತು  ಪ್ರಧಾನಿ ನರೇಂದ್ರ ಮೋದಿಗೆ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ (ರುಪ್ಸಾ

) ಖಾಸಗಿ ಶಾಲೆಗಳ ಒಕ್ಕೂಟ ಪತ್ರ ಬರೆದಿದೆ. ಖಾಸಗಿ ಶಾಲೆಗಳ ಮೇಲೆ ಆರ್ಥಿಕ ‌ಹೊರೆಯಾಗದಂತೆ ಮನವಿ ಮಾಡಿಕೊಂಡಿದೆ. ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ  ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲೆಗಳಿವೆ. 62 ಲಕ್ಷ‌ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಮುಂದುವರೆದಿದೆ. ಇದರಲ್ಲಿ ನಾಲ್ಕು ಲಕ್ಷ ಟೀಚರ್, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದೊಂದು ವರುಷದಿಂದ ಶಾಲೆಗಳು ನಡೆದಿಲ್ಲ ಸರ್ಕಾರ ನಿಗದಿ ಮಾಡಿದಷ್ಟು ಶುಲ್ಕವನ್ನು ಪೋಷಕರು ಕಟ್ಟಿಲ್ಲ. ಈ‌ ವರುಷವೂ ಆನ್ ಲೈನ್ ಕ್ಲಾಸ್ ಮುಂದುವರಿಕೆ ಸಾಧ್ಯತೆ ಇದ್ದು  ಇದರಿಂದ ಖಾಸಗಿ ಶಾಲೆಗಳು ಮುಚ್ಚುವ ಪರಿಸ್ಥಿತಿ ಎದುರಾಗಿದೆ ಎಂದು ಆತಂಕ ತೋಡಿಕೊಂಡಿದ್ದಾರೆ.

ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಉಚಿತ ತರಬೇತಿ ಕೊಡ್ತಾರೆ

ಖಾಸಗಿ ಶಾಲೆಗಳ ಮೇಲೆ ರಾಜ್ಯ ಹಾಗೂ ಕೇಂದ್ರ‌ ಸರ್ಕಾರ ಮೃದುಧೋರಣೆ ತಾಳಬೇಕು ಎಂದು ಮನವಿ ಮಾಡಿಕೊಂಡಿದ್ದು ಕೆಲ ಬೇಡಿಕೆ ಮುಂದೆ ಇಟ್ಟಿದ್ದಾರೆ.

ಬೇಡಿಕೆಗಳೇನು?

1. ಬ್ಯಾಂಕ್ ಗಳಿಂದ‌ ಪಡೆದ ಕಂತುಗಳ ಸಾಲದ‌ ಮೇಲಿನ ‌ಬಡ್ಡಿ ಮನ್ನಾ ಮಾಡಿ
2. ಮೂಲಸೌಕರ್ಯ ಸಾಲಗಳು NPA ಆಗದಂತೆ ಪುನರ್ ರಚನೆ ಮಾಡಬೇಕು
3. ಕಡಿಮೆ ಬಡ್ಡಿ ದರದಲ್ಲಿ ಮೃದುಸಾಲ ಕೊಡಿ