ಖಾಸಗಿ ಶಾಲೆಯ ವಿದ್ಯಾರ್ಥಿಗಳಿಂದ 100 ನಿಮಿಷಗಳಲ್ಲಿ 1 ರಿಂದ 100 ರವರೆಗೆ ಮಗ್ಗಿ ಪಠಿಸಿ ವಿಶ್ವ ದಾಖಲೆ ನಿರ್ಮಾಣ

ಚೈತನ್ಯ ಟೆಕ್ನೋ ಶಾಲೆಯ 10 ರಾಜ್ಯಗಳ 73 ಶಾಖೆಯ 400 ಮಕ್ಕಳು ಜೂಮ್ ಲಿಂಕ್ ನಿಂದ 100 ನಿಮಿಷಗಳಲ್ಲಿ 100 ಮ್ಯಾಥೆಮ್ಯಾಟಿಕ್ಸ್  ಟೇಬಲ್ಸ್ ಹೇಳಿ ಎಲ್ಲರನ್ನು ಅಚ್ಚರಿಗೊಳಿಸಿ ವರ್ಲ್ಡ್ ಆಫ್ ರೆಕಾರ್ಡ್ ಸ್ಥಾನ ಪಡೆದಿದ್ದಾರೆ.

chaitanya techno school students world record in table competition gow

ವರದಿ: ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್  

ಬೆಂಗಳೂರು(ಜ.6): ಚೈತನ್ಯ ಟೆಕ್ನೋ ಶಾಲೆಯ 10 ರಾಜ್ಯಗಳ 73 ಶಾಖೆಯ 400 ಮಕ್ಕಳು ಜೂಮ್ ಲಿಂಕ್ ನಿಂದ 100 ನಿಮಿಷಗಳಲ್ಲಿ 100 ಮ್ಯಾಥೆಮ್ಯಾಟಿಕ್ಸ್  ಟೇಬಲ್ಸ್ ಹೇಳಿ ಎಲ್ಲರನ್ನು ಅಚ್ಚರಿಗೊಳಿಸಿ ವರ್ಲ್ಡ್ ಆಫ್ ರೆಕಾರ್ಡ್ ಸ್ಥಾನ ಪಡೆದಿದ್ದಾರೆ. ಈ ಕುರಿತು ಇಂದು ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಚೈತನ್ಯ ಶಾಲೆಗಳ ಶೈಕ್ಷಣಿಕ ನಿರ್ದೇಶಕಿ ಡಾ.ಸೀಮಾ ಈ ದಾಖಲೆಯನ್ನು ವರ್ಲ್ಡ್ ಆಪ್ ರೆಕಾರ್ಡ್ ಲಂಡನ್ ಮೇಲ್ವಿಚಾರಣೆ ನಡೆಸಿತು. ಮಕ್ಕಳ ಮಾನಸಿಕ ಬುದ್ದಿಮತೆಯನ್ನು ಹೆಚ್ಚಿಸಲು ಇಂತಹ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾಸಾ ಹಮ್ಮಿಕೊಳ್ಳುವ ವಿಶ್ವ ಸ್ಪೇಸ್ ಸೆಟಲ್ಮೆಂಟ್ ಸ್ಪರ್ಧೆಯಲ್ಲಿ ಚೈತನ್ಯ ಟೆಕ್ಕೋ ಶಾಲೆ ಭಾಗವಹಿಸಿ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ ಎಂದು ತಿಳಿಸಿದರು. ಶಾಲೆಯ ಮುಖ್ಯಸ್ಥ ಡಾ.ಬಿ.ಎಸ್‌. ರಾವ್ ಮಾತನಾಡಿ, ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು. ಶಿಕ್ಷಕರು ಇಂತಹ ಪ್ರತಿಭಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ಮಾಡಿದ ಕೊಪ್ಪಳದ ಕುವರಿ

ನಗರದ ಉಲ್ಲಾಳ ಶಾಲೆಯ 85 ವಿದ್ಯಾರ್ಥಿಗಳು ಭಾಗಿ:  
ಬೆಂಗಳೂರಿನ ಉಲ್ಲಾಳದಲ್ಲಿರುವ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್  ನ  85 ವಿದ್ಯಾರ್ಥಿಗಳು (ಮಾವೇರಿಕ್ಸ್) ಪಾಲ್ಗೊಂಡು 100 ನಿಮಿಷಗಳಲ್ಲಿ 1-100 ರವರೆಗೆ  ಮಗ್ಗಿಯನ್ನು ಪಠಿಸಿ  ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಚೈತನ್ಯ ಟೆಕ್ನೋ ಸ್ಕೂಲ್ ಪ್ರತೀ ವರ್ಷವೂ ಮಕ್ಕಳಿಗೆ ಬೇರೆ ಬೇರೆ ಕೌಶಲ್ಯಗಳ ಬಗ್ಗೆ ತರಬೇತಿ ನೀಡಿ ತಮ್ಮ ಸಂಸ್ಥೆಯ ಮಕ್ಕಳ ಹೆಸರನ್ನು ವರ್ಲ್ಡ್ ರೆಕಾರ್ಡ್ ನಲ್ಲಿ  ನೊಂದಾಯಿಸುವಲ್ಲಿ ಸಹಕರಿಸುತ್ತಾ ಬಂದಿದ್ದು, ಈ ಬಾರಿ ಮಕ್ಕಳಿಂದ ಮಗ್ಗಿ ಹೇಳಿಸುವ ಮೂಲಕ ಮತ್ತೊಂದು ದಾಖಲೆಯ ಪುಟ ತೆರೆದಿದ್ದಾರೆ. 2 ರಿಂದ 10 ವರ್ಷದೊಳಗಿನ ಮಕ್ಕಳು ಮಗ್ಗಿ ಹೇಳುವ ಮೂಲಕ ದಾಖಲೆ ಸೇರಿದ್ದು, ಈ ಮೂಲಕ ಶಾಲೆಗೆ ಹೆಮ್ಮೆ ತಂದಿದ್ದಾರೆ ಪ್ರಾಂಶುಪಾಲರಾದ ಸಂದ್ಯಾ ಮಕ್ಕಳ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

Guinness World Record: ಅಬ್ಬಬ್ಬಾ..ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

Latest Videos
Follow Us:
Download App:
  • android
  • ios