ಸಿಇಟಿ ದಾಖಲೆ ತಿದ್ದುಪಡಿಗೆ ಸೆ.12 ಮತ್ತು ಸೆ.13ಕ್ಕೆ ಅವಕಾಶ
ಸಿಇಟಿ ಕೆಲವು ಅಭ್ಯರ್ಥಿಗಳು ಸಲ್ಲಿಸಿರುವ ದಾಖಲಾತಿಗಳಲ್ಲಿ ವ್ಯತ್ಯಾಸ ಕಂಡು ಬಂದಿದ್ದು ಸರಿಪಡಿಸಿಕೊಳ್ಳುವಂತೆ ಕೆಇಎ ಸೂಚಿಸಿದೆ. ಅಭ್ಯರ್ಥಿಗಳು ಸೆ.12 ಮತ್ತು 13ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳಿ ದಾಖಲೆಗಳನ್ನು ಸರಿಪಡಿಸಿಕೊಳ್ಳಬಹುದು.
ಬೆಂಗಳೂರು (ಸೆ.11): ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಕೆಲವು ಅಭ್ಯರ್ಥಿಗಳು ಸಲ್ಲಿಸಿರುವ ದಾಖಲಾತಿಗಳಲ್ಲಿ ವ್ಯತ್ಯಾಸ ಕಂಡು ಬಂದಿದ್ದು ಸರಿಪಡಿಸಿಕೊಳ್ಳುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಸೂಚಿಸಿದೆ. ಕೆಲ ಅಭ್ಯರ್ಥಿಗಳ ವ್ಯಾಸಂಗ ಪ್ರಮಾಣ ಪತ್ರಗಳಲ್ಲಿ ತಪ್ಪು ಕಂಡು ಬಂದಿದೆ. ಗ್ರಾಮೀಣ ಪ್ರದೇಶ ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರದಲ್ಲಿ ವ್ಯತ್ಯಾಸ ಕಂಡುಬಂದಿದೆ. ಇಂತಹ ಅಭ್ಯರ್ಥಿಗಳು ಸೆ.12 ಮತ್ತು 13ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳಿ ದಾಖಲೆಗಳನ್ನು ಸರಿಪಡಿಸಿಕೊಳ್ಳಬಹುದು ಎಂದು ಕೆಇಎ ತಿಳಿಸಿದೆ. ಅಭ್ಯರ್ಥಿಯೊಬ್ಬ 1ರಿಂದ 4ನೇ ತರಗತಿವರೆಗೆ ಒಂದು ಶಾಲೆಯಲ್ಲಿ ವ್ಯಾಸಂಗ ಮಾಡಿರುವುದಾಗಿ ಅರ್ಜಿಯಲ್ಲಿ ತಿಳಿಸಿದ್ದಾರೆ. ಆದರೆ ಆ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ 1ರಿಂದ 3ನೇ ತರಗತಿವರೆಗೆ ಮಾತ್ರ ಅಭ್ಯಾಸ ಮಾಡಿರುವುದನ್ನು ಪರಿಶೀಲಿಸಲಾಗಿದೆ. 4ನೇ ತರಗತಿಯನ್ನು ಬೇರೆ ಶಾಲೆಯಲ್ಲಿ ಅಭ್ಯಾಸ ಮಾಡಿದ್ದು, ಆ ಶಾಲೆ ಮೊದಲಿನ ಬಿಇಒ ಕಚೇರಿಯ ವ್ಯಾಪ್ತಿಗೆ ಬರದಿದ್ದರೆ ಸಂಬಂಧಪಟ್ಟಬಿಇಒ ಕಚೇರಿಯಿಂದ ಪತ್ರ ಪಡೆಯಬೇಕಾಗಿರುತ್ತದೆ. ಕೆಲವು ಅಭ್ಯರ್ಥಿಗಳು 8ರಿಂದ 10ನೇ ತರಗತಿವರೆಗೆ ಒಂದು ಶಾಲೆಯಲ್ಲಿ ಅಭ್ಯಾಸ ಮಾಡಿರುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಆದರೆ 8ನೇ ತರಗತಿಯನ್ನು ಬೇರೆ ಶಾಲೆಯಲ್ಲಿ ಅಭ್ಯಾಸ ಮಾಡಿದ್ದು, ಬಿಇಒ ಕಚೇರಿ ವ್ಯಾಪ್ತಿ ಬದಲಾಗಿದೆ. ಆದ್ದರಿಂದ ಇಂತಹ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಸಮಯಾವಕಾಶ ನೀಡಲಾಗಿದೆ ಎಂದು ಕೆಇಎ ವಿವರಿಸಿದೆ.
ಸಿಇಟಿ ಬಿಕ್ಕಟ್ಟು ಪರಿಹರಿಸದಿದ್ದರೆ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ
ಬೆಂಗಳೂರು: ಸರ್ಕಾರ ಸಿಇಟಿ ಬಿಕ್ಕಟ್ಟು ಬಗೆಹರಿಯುವವರೆಗೂ ಖಾಸಗಿ ವಿವಿಗಳು 2022-23ನೇ ಸಾಲಿನ ತರಗತಿಗಳನ್ನು ಆರಂಭಿಸದಿರಲು ಸಾಧ್ಯವಿಲ್ಲ. ಶೀಘ್ರ ತರಗತಿಗಳನ್ನು ಆರಂಭಿಸುತ್ತೇವೆ. ಸರ್ಕಾರ ಆದಷ್ಟುಬೇಗ ಬಿಕ್ಕಟ್ಟು ಬಗೆಹರಿಸಲು ಕ್ರಮ ವಹಿಸಬೇಕು ಎಂದು ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರರೂ ಆದ ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್.ದೊರೆಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಗುರುವಾರ ತಮ್ಮ ವಿವಿಯ ಘಟಿಕೋತ್ಸವ ಕುರಿತು ನಡೆಸಿದ ಪತ್ರಿಕಾಗೋಷ್ಠಿ ವೇಳೆ, ಸಿಇಟಿ ಬಿಕ್ಕಟ್ಟು ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ಸರ್ಕಾರ ಹೈಕೋರ್ಚ್ ಆದೇಶ ಪ್ರಶ್ನಿಸಿ ಮೇಲ್ಮನವಿ ಹೋಗುವುದಾಗಿ ಹೇಳಿದೆ. ಇದರಿಂದ ಸಿಇಟಿ ಕೌನ್ಸೆಲಿಂಗ್ ತಡವಾಗುವ ಸಾಧ್ಯತೆ ಇದೆ. ಬಿಕ್ಕಟ್ಟು ಬಗೆಹರಿಯುವರೆಗೂ ಖಾಸಗಿ ವಿವಿಗಳು ತರಗತಿ ಆರಂಭಿಸಿದೆ ಕೂತರೆ ಖಾಸಗಿ ವಿವಿ, ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಸಿಇಟಿ ವಿದ್ಯಾರ್ಥಿಗಳಿಗಾಗಲಿ, ಆಡಳಿತ ಮಂಡಳಿ, ಎನ್‌ಆರ್‌ಇ ಇತರೆ ಸೀಟುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗಾಗಲಿ ಯಾರಿಗೂ ಸಮಯಕ್ಕೆ ಸರಿಯಾಗಿ ಪಠ್ಯಕ್ರಮ ಬೋಧನೆ ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗೆ ಪರಿಹಾರ ಎಂದರೆ ಸರ್ಕಾರ ಯಾವುದೇ ರೀತಿಯಲ್ಲಾದರೂ ಆಗಲಿ ಆದಷ್ಟುಬೇಗ ಬಿಕ್ಕಟ್ಟು ಬಗೆಹರಿಸಲು ಕ್ರಮ ವಹಿಸಬೇಕು ಎಂದರು.
NEET result : ಋುಷಿಕೇಶ್ ರಾಜ್ಯಕ್ಕೇ ಪ್ರಥಮ, ದೇಶಕ್ಕೆ ನಂ.3
ಹಾಗಾಗಿ ನಾವು ಕಾಯುತ್ತಾ ಕೂರದೆ ತರಗತಿಗಳನ್ನು ಆರಂಭಿಸುತ್ತೇವೆ. ಸರ್ಕಾರ ಬಿಕ್ಕಟ್ಟು ಬಗೆಹರಿಸಿ ಸಿಇಟಿ ಕೌನ್ಸೆಲಿಂಗ್ ನಡೆಸಿದ ಬಳಿಕ ಆ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಲಾಗುವುದು. ಪ್ರತಿ ವರ್ಷ ಒಂದಲ್ಲ ಒಂದು ವಿಷಯದಿಂದ ಸಿಇಟಿ ಪ್ರವೇಶ ಪ್ರಕ್ರಿಯೆ ವಿಳಂಬವಾಗುತ್ತಲೇ ಇದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
NEET 2022; ದಿನಗೂಲಿ ನೌಕರನ ಮಗ ಮತ್ತು ತರಕಾರಿ ಮಾರುವವನ ಮಗಳು ನೀಟ್
ಯುಜಿ ಸಿಇಟಿಯನ್ನೇ ಇಷ್ಟೊಂದು ವಿಳಂಬ ಮಾಡಿದರೆ ಎಂಬಿಎ, ಎಂಸಿಎ ಸೇರಿದಂತೆ ಹಲವು ಕೋರ್ಸುಗಳ ಪ್ರವೇಶಕ್ಕೆ ನಡೆಯುವ ಪಿಜಿಸಿಇಟಿ ಯಾವಾಗ ನಡೆಸುತ್ತಾರೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಈವರೆಗೆ ಮಾಹಿತಿ ನೀಡುತ್ತಿಲ್ಲ. ಆದಷ್ಟುಬೇಗ ಸಿಇಟಿ ಪ್ರಕ್ರಿಯೆ ಮುಗಿಸಿ, ಪಿಜಿಸಿಇಟಿ ನಡೆಸಬೇಕೆಂದು ದೊರೆಸ್ವಾಮಿ ಆಗ್ರಹಿಸಿದರು.