ಸಿಇಟಿ ದಿನಾಂಕ ಬದಲು: ಏ.18, 19ಕ್ಕೆ ಪರೀಕ್ಷೆ

ಸಿಇಟಿಗೆ ಅಭ್ಯರ್ಥಿಗಳ ನೋಂದಣಿ ಪ್ರಕ್ರಿಯೆ ಬುಧವಾರದಿಂದ ಆರಂಭವಾಗಿದ್ದು, ಫೆ.10ರವರೆಗೆ ಮುಂದುವರೆಯಲಿದೆ.ಈ ವರ್ಷ ಯಾವುದೇ ದಾಖಲೆಗಳ ಭೌತಿಕ ಪರಿಶೀಲನೆ ಇರುವುದಿಲ್ಲ, ಅಪ್ಲಿಕೇಶನ್-ಕಮ್-ವೆರಿಫಿಕೇಶನ್ ಮಾದರಿಯಲ್ಲಿ ಪರಿಶೀಲನೆ ನಡೆಯಲಿದೆ. 

CET Date Changed in Karnataka grg

ಬೆಂಗಳೂರು(ಜ.10):  ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ನಡೆಸುವ 2024ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ನಿಗದಿಪಡಿಸಿದ್ದ ದಿನಾಂಕವನ್ನು ಪರಿಷ್ಕರಿಸಿದ್ದು, ಏ.18 ಮತ್ತು 19ಕ್ಕೆ ಪರೀಕ್ಷೆ ನಡೆಸುವುದಾಗಿ ತಿಳಿಸಿದೆ.

ಈ ಮೊದಲು ಏ.20 ಮತ್ತು 21ರಂದು ಸಿಇಟಿ ಪರೀಕ್ಷೆ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ, ಈ ಅವಧಿಯಲ್ಲಿ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ (ಎನ್‌ಡಿಎ) ಪರೀಕ್ಷೆಗಳು ಇರುವುದರಿಂದ ಎರಡೂ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ತೊಂದರೆಯಾಗಬಾರದು ಎಂದು ಸಿಇಟಿ ಪರೀಕ್ಷೆಯನ್ನು ಎರಡು ದಿನ ಮೊದಲೇ ನಡೆಸಲು ತೀರ್ಮಾನಿಸಲಾಗಿದೆ ಎಂದು ಕೆಇಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2024ರ ಸಿಇಟಿ ಪರೀಕ್ಷೆ ದಿನಾಂಕ ಪ್ರಕಟ, ವಿಷಯಾವಾರು ಮಾಹಿತಿ ಇಲ್ಲಿದೆ

ಸಿಇಟಿಗೆ ಅಭ್ಯರ್ಥಿಗಳ ನೋಂದಣಿ ಪ್ರಕ್ರಿಯೆ ಬುಧವಾರದಿಂದ ಆರಂಭವಾಗಿದ್ದು, ಫೆ.10ರವರೆಗೆ ಮುಂದುವರೆಯಲಿದೆ.ಈ ವರ್ಷ ಯಾವುದೇ ದಾಖಲೆಗಳ ಭೌತಿಕ ಪರಿಶೀಲನೆ ಇರುವುದಿಲ್ಲ, ಅಪ್ಲಿಕೇಶನ್-ಕಮ್-ವೆರಿಫಿಕೇಶನ್ ಮಾದರಿಯಲ್ಲಿ ಪರಿಶೀಲನೆ ನಡೆಯಲಿದೆ. ರಾಜ್ಯದ ವಿದ್ಯಾರ್ಥಿ, ಕನ್ನಡ ಮಾಧ್ಯಮ, ಜಾತಿ, ಆದಾಯ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳನ್ನು ಶಿಕ್ಷಣ ಇಲಾಖೆಯ ಸ್ಯಾಟ್ಸ್‌ ಮತ್ತು ಕಂದಾಯ ಇಲಾಖೆ ವೆಬ್‌ಸೈಟ್‌ ಸೇವೆಗಳ ಮೂಲಕ ಪರಿಶೀಲಿಸಲಾಗುತ್ತದೆ. ಎಲ್ಲ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಅಧಿಕಾರಿಗಳು ಅಭ್ಯರ್ಥಿಗಳಿಗೆ ಸೂಚಿಸಿದ್ದಾರೆ.

ಈ ವರ್ಷ, ಅಭ್ಯರ್ಥಿಗಳಿಗೆ ವೈದ್ಯಕೀಯ, ದಂತವೈದ್ಯಕೀಯ, ಆಯುರ್ವೇದ ಮತ್ತು ಇತರ ಕೋರ್ಸ್‌ಗಳಿಗೆ ನೋಂದಾಯಿಸಲು ತಿಳಿಸಲಾಗಿದೆ ಮತ್ತು ಯುಜಿ-ನೀಟ್‌ ಫಲಿತಾಂಶಗಳ ನಂತರ, ಕೆಇಎಯೊಂದಿಗೆ ಈಗಾಗಲೇ ನೋಂದಾಯಿತ ಅಭ್ಯರ್ಥಿಗಳಿಗೆ ಅವರ ನೀಟ್‌ ಸ್ಕೋರ್ ಮತ್ತು ರೋಲ್ ಸಂಖ್ಯೆಯನ್ನು ನಮೂದಿಸಲು ಇಂಟರ್ಫೇಸ್ ಒದಗಿಸಲಾಗುತ್ತದೆ. ಕೆಇಎ ವಿದ್ಯಾರ್ಥಿಗಳಿಗಾಗಿ ಮೊಬೈಲ್ ಅಪ್ಲಿಕೇಶನ್ ಸಹ ಅಭಿವೃದ್ಧಿಪಡಿಸಲಾಗಿದೆ. ಅಭ್ಯರ್ಥಿಗಳು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

Latest Videos
Follow Us:
Download App:
  • android
  • ios