ಬೆಂಗಳೂರು(ಡಿ.09):  ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಯುಜಿಸಿಇಟಿ​-2020 ಎರಡನೇ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಸಿಇಟಿ ರ‍್ಯಾಂಕಿಂಗ್ ಅಭ್ಯರ್ಥಿಗಳು ಡಿ.9ರಿಂದ 11ರವೆಗೆ ದಾಖಲೆಗಳನ್ನು ಅಪ್‌ಲೋಡ್‌ ಮಾಡಬಹುದು. ಆನಂತರದಲ್ಲಿ ಆಯ್ಕೆ ದಾಖಲು ಮಾಡಬಹುದು. ಡಿ.11ರಂದು ಸೀಟ್‌ ಮ್ಯಾಟ್ರಿಕ್ಸ್‌ ಬಿಡುಗಡೆ ಮಾಡಲಿದೆ. ಡಿ.11ರಿಂದ 15ರವೆಗೆ ಆಯ್ಕೆ ಬದಲು ಮಾಡಿಕೊಳ್ಳಬಹುದು. ಡಿ.16ರಂದು ಫಲಿತಾಂಶ ಬಿಡುಗಡೆ ಮಾಡಲಿದೆ. ಕಾಲೇಜಿಗೆ ಡಿ.19ರೊಳಗೆ ಪ್ರವೇಶ ಪಡೆದುಕೊಳ್ಳುವಂತೆ ಸೂಚಿಸಿದೆ.

ರಾಷ್ಟ್ರೀಯ ನೇಮಕಾತಿ ಸಂಸ್ಥೆ ಪರೀಕ್ಷೆ ನಡೆಯೋದು ಹೀಗೆ

2020ನೇ ಸಾಲಿನ ದ್ವಿತೀಯ ಪಿಯು ಪೂರಕ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಎರಡನೇ ಸುತ್ತಿನ ಸೀಟು ಹಂಚಿಕೆಯ ನಂತರ ಉಳಿಯುವ ಸೀಟುಗಳನ್ನು ಹಂಚಿಕೆ ಮಾಡಲು ಪರಿಗಣಿಸಲಾಗುತ್ತದೆ. ಫಲಿತಾಂಶವನ್ನು ಡಿ.9ರಂದು ಪ್ರಕಟಿಸಲಿದೆ. ಯುಜಿಸಿಇಟಿ-2020 ದಾಖಲಾತಿ ಪತ್ರ ಪಡೆಯದೇ ಇರುವ ಅಭ್ಯರ್ಥಿಗಳು ಅಥವಾ ಈವರೆಗೂ ದಾಖಲೆಗಳನ್ನು ಅಪ್‌ಲೋಡ್‌ ಮಾಡದೇ ಇರುವ ಅಭ್ಯರ್ಥಿಗಳು ನಿಗದಿತ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ ಎರಡನೇ ಸುತ್ತಿನಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕೆಇಎ ವೆಬ್‌ಸೈಟ್‌ ನೋಡಹುದು.