ಭವಿಷ್ಯದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಕೇಂದ್ರದಿಂದ PM Shri Schools ಸ್ಥಾಪನೆ

ಭವಿಷ್ಯದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಪಿಎಂ ಶ್ರೀ ಶಾಲೆಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದೆ.
 

Centre to set up  PM Shri Schools  to prepare students for future  gow

ನವದೆಹಲಿ (ಜೂ.2): ಭವಿಷ್ಯದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಗುರಿಯನ್ನಿಟ್ಟುಕೊಂಡು' ಪಿಎಂ ಶ್ರೀ ಶಾಲೆಗಳ (PM Shri schools) ಸ್ಥಾಪನೆಗೆ ಕೇಂದ್ರ ಸರ್ಕಾರ (Central Government) ಚಿಂತನೆ ನಡೆಸಿದೆ. ಇದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ (National Education Policy ) ಪ್ರಯೋಗಾಲಯವಾಗಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Union Education Minister Dharmendra Pradhan) ಗುರುವಾರ ಹೇಳಿದ್ದಾರೆ.

ಗುಜರಾತಿನಲ್ಲಿ (Gujarat) ಎರಡು ದಿನಗಳ ರಾಷ್ಟ್ರದ ಶಿಕ್ಷಣ ಸಚಿವರ ಸಮ್ಮೇಳನದಲ್ಲಿ (National Education Ministers) ಪಾಲ್ಗೊಂಡು ಮಾತನಾಡಿದ ಅವರು, ಜ್ಞಾನಧಾರಿತ ಆರ್ಥಿಕತೆಯ ರಾಷ್ಟ್ರವಾಗಿ ದೇಶ ಹೊರಹೊಮ್ಮುವಲ್ಲಿ ಶಾಲಾ ಶಿಕ್ಷಣ ಅಡಿಪಾಯವಾಗಿದೆ ಎಂದರು.

ಭವಿಷ್ಯಕ್ಕಾಗಿ ವಿದ್ಯಾರ್ಥಿಗಳನ್ನು ತಯಾರು ಮಾಡಲು' ಪಿಎಂ ಶ್ರೀ ಶಾಲೆಗಳ (School) ಸ್ಥಾಪನೆ ಬಗ್ಗೆ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಕೇಂದ್ರ ಸಚಿವರು ತಿಳಿಸಿದರು. ರಾಜ್ಯಗಳ ಶಿಕ್ಷಣ ಸಚಿವರು ಹಾಜರಾಗಿದ್ದ ಈ ಸಮ್ಮೇಳನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಟಾನವನ್ನು ವಿರೋಧಿಸಿ ತಮಿಳುನಾಡು ಭಾಗವಹಿಸದೆ ಬಹಿಷ್ಕರಿಸಿದೆ. 

SUVARNA NEWS REALITY CHECK; ಕೋಟಿ ಹಣ ಬಿಡುಗಡೆಯಾದ್ರೂ ಮಕ್ಕಳಿಗೆ ಕಳಪೆ ಬಿಸಿಯೂಟ!

21ನೇ ಶತಮಾನದ ಜ್ಞಾನ ಮತ್ತು ಕೌಶಲ್ಯದಿಂದ ಹೊಸ ಪೀಳಿಗೆ ವಂಚಿತವಾಗಬಾರದು ಎಂದು ಹೇಳಿದ ಸಚಿವರು, ಪಿಎಂ ಶ್ರೀ ಶಾಲೆಗಳ ಮಾದರಿಗಾಗಿ ನೀತಿ ರೂಪಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪ್ರೋತ್ಸಾಹ ಮತ್ತು ಸಲಹೆಗಳನ್ನು ಪಡೆಯಲು ಇಚ್ಚಿಸುವುದಾಗಿ ತಿಳಿಸಿದರು. 

ಭಾರತವನ್ನು ಜ್ಞಾನಧಾರಿತ ಆರ್ಥಿಕತೆ ರಾಷ್ಟ್ರವನ್ನಾಗಿಸುವಲ್ಲಿ ಮುಂದಿನ 25 ವರ್ಷ ಮಹತ್ವದ್ದಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ಪರಸ್ಪರ ಅನುಭವಗಳನ್ನು ಯಶಸ್ಸು ಹಂಚಿಕೊಳ್ಳುವ ಮೂಲಕ ಭಾರತವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕಾಗಿದೆ ಎಂದರು.

ಕರ್ನಾಟಕ (Karnataka), ಒಡಿಶಾ, ದೆಹಲಿ, ಮೇಘಾಲಯ, ಬಿಹಾರ್, ಉತ್ತರ ಪ್ರದೇಶ, ಗುಜರಾತ್ ಮತ್ತು ಹರಿಯಾಣದ ಶಿಕ್ಷಣ ಮಾದರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

LIS Academy ಜೊತೆ ಸೇರಿ ನೂತನ ಸಂಜೆ ಕೋರ್ಸ್‌ ಆರಂಭಿದ VTU 

ಪ್ರಿಸ್ಕೂಲ್‌ನಿಂದ ಪ್ರೌಢಶಾಲೆಗೆ ಒಳಪಡುವ ಎನ್‌ಇಪಿಯ 5+3+3+4 ವಿಧಾನವು ಬಾಲ್ಯದ ಆರೈಕೆ ಮತ್ತು ಶಿಕ್ಷಣ ಕಾರ್ಯಕ್ರಮ (ECCE), ಶಿಕ್ಷಕರ ತರಬೇತಿ ಮತ್ತು ವಯಸ್ಕರ ಶಿಕ್ಷಣದ ಮೇಲೆ ಒತ್ತು ನೀಡುತ್ತದೆ. ಅಲ್ಲದೆ, ಶಾಲಾ ಶಿಕ್ಷಣದೊಂದಿಗೆ ಕೌಶಲ್ಯ ಅಭಿವೃದ್ಧಿಯ ಏಕೀಕರಣ ಮತ್ತು ಮಾತೃಭಾಷೆಯಲ್ಲಿ ಕಲಿಕೆಗೆ ಆದ್ಯತೆ ನೀಡುವತ್ತ ಗಮನ ಹರಿಸಲಾಗಿದೆ ಎಂದು ಅವರು ಹೇಳಿದರು. 

ನಾನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಮಂತ್ರಿಗಳನ್ನು ಪ್ರೋತ್ಸಾಹಿಸುತ್ತೇನೆ ಮತ್ತು ನಮ್ಮ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟನ್ನು ಅಭಿವೃದ್ಧಿಪಡಿಸಲು ಮತ್ತು ಡಿಜಿಟಲ್ ಶಿಕ್ಷಣದ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಶಿಕ್ಷಣವನ್ನು ಸಾರ್ವತ್ರಿಕಗೊಳಿಸಲು ಗುಣಮಟ್ಟದ ಇ-ಕಂಟೆಂಟ್ ಅನ್ನು ಅಭಿವೃದ್ಧಿಪಡಿಸಲು ಎಲ್ಲರ ಸಕ್ರಿಯ ಭಾಗವಹಿಸುವಿಕೆಯನ್ನು ಬಯಸುತ್ತೇನೆ, ”ಎಂದು ಸಚಿವರು ಹೇಳಿದರು.

IDBI RECRUITMENT 2022; ಬರೋಬ್ಬರಿ 1,544 ಹುದ್ದೆಗಳ ಭರ್ತಿಗೆ ನೇಮಕಾತಿ

ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೀಡುವ ಶಿಕ್ಷಣದಲ್ಲಿನ ಉತ್ತಮ ಅಭ್ಯಾಸಗಳು ಭಾರತದ ಯುವಕರನ್ನು ಜಾಗತಿಕ ನಾಗರಿಕರನ್ನಾಗಿ ಪರಿವರ್ತಿಸುವಲ್ಲಿ ಸಂಚಿತ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅವರು ಹೇಳಿದರು.

ಎಲ್ಲಾ ರಾಜ್ಯ ಶಿಕ್ಷಣ ಮಂತ್ರಿಗಳಿಂದ ಅನುಭವ ಮತ್ತು ಜ್ಞಾನ ಹಂಚಿಕೆ ಮತ್ತು ಸಮ್ಮೇಳನದಲ್ಲಿ ರಚನಾತ್ಮಕ ಮತ್ತು ಫಲಿತಾಂಶ ಆಧಾರಿತ ಚರ್ಚೆಯು ಮುಂದೆ NEP 2020 ಗೆ ಅನುಗುಣವಾಗಿ ನಮ್ಮ ಕಲಿಕೆಯ ವ್ಯಾಪ್ತಿಯನ್ನು ಪರಿವರ್ತಿಸುತ್ತದೆ ಪ್ರಧಾನ್ ಹೇಳಿದರು.

Latest Videos
Follow Us:
Download App:
  • android
  • ios