ಸಿಬಿಎಸ್‌ಇ 12ನೇ ತರಗತಿ ರಿಸಲ್ಟ್‌ ತೃಪ್ತಿ ತರದಿದ್ದಲ್ಲಿ ಆಗಸ್ಟಲ್ಲಿ ಪರೀಕ್ಷೆ!

* ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿರುವ ಸಿಬಿಎಸ್‌ಇ ಸ್ಪಷ್ಟನೆ

* ಸಿಬಿಎಸ್‌ಇ 12ನೇ ತರಗತಿ ರಿಸಲ್ಟ್‌ ತೃಪ್ತಿ ತರದಿದ್ದಲ್ಲಿ ಆಗಸ್ಟಲ್ಲಿ ಪರೀಕ್ಷೆ

* ಸುಪ್ರೀಂಕೋರ್ಟ್‌ಗೆ ಸಿಬಿಎಸ್‌ಇ ಮಾಹಿತಿ

CBSE to SC Optional class 12 exam can be conducted between 15 Aug and 15 Sept pod

ನವದೆಹಲಿ(ಜೂ.22): ತಾನು ಸದ್ಯದಲ್ಲೇ ಪ್ರಕಟಿಸುವ 12ನೇ ತರಗತಿ ಫಲಿತಾಂಶವು ತೃಪ್ತಿ ತರದೇ ಹೋದರೆ ಅಂಥ ವಿದ್ಯಾರ್ಥಿಗಳಿಗೆ ಆಗಸ್ಟ್‌ 15ರಿಂದ ಸೆಪ್ಟೆಂಬರ್‌ 15ರ ನಡುವೆ ಪರೀಕ್ಷೆ ಏರ್ಪಡಿಸಲಾಗುತ್ತದೆ ಎಂದು ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ತಿಳಿಸಿದೆ.

ಈ ಬಗ್ಗೆ ಸೋಮವಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿರುವ ಸಿಬಿಎಸ್‌ಇ, ‘ಹಾಲಿ 30:30:40 ಆಧಾರದಲ್ಲಿ ನೀಡಲು ನಿರ್ಧರಿಸಿರುವ ಫಲಿತಾಂಶ ತೃಪ್ತಿ ತರದಿದ್ದರೆ ಸಿಬಿಎಸ್‌ಇ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಂಡು ಲಿಖಿತ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಫಲಿತಾಂಶ ಕುರಿತಾದ ಆಕ್ಷೇಪಗಳನ್ನು ಸ್ವೀಕರಿಸಲು ಸಮಿತಿಯೊಂದನ್ನು ರಚಿಸಲಾಗಿದೆ’ ಎಂದು ತಿಳಿಸಿದೆ.

ಕೋವಿಡ್‌ ಕಾರಣ ಈ ವರ್ಷದ ಪರೀಕ್ಷೆ ರದ್ದಾಗಿತ್ತು. ಈ ಕಾರಣ, 12ನೇ ತರಗತಿ ಫಲಿತಾಂಶವನ್ನು 10, 11ನೇ ತರಗತಿಯ ವಾರ್ಷಿಕ ಪರೀಕ್ಷಾ ಫಲಿತಾಂಶ ಹಾಗೂ 12ನೇ ತರಗತಿಯ ಆಂತರಿಕ ಮೌಲ್ಯಮಾಪನದ ಫಲಿತಾಂಶ ಆಧರಿಸಿ ಪ್ರಕಟಿಸಲು ಸಿಬಿಎಸ್‌ಇ ನಿರ್ಧರಿಸಿತ್ತು. ಇದಕ್ಕೆ ಕೆಲವು ಪಾಲಕರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಮೌಲ್ಯಮಾಪನ ಸೂತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್‌, ‘ಮಂಗಳವಾರ ಈ ಬಗ್ಗೆ ಉತ್ತರಿಸಿ’ ಎಂದು ಸುಪ್ರೀಂ ಕೋರ್ಟ್‌ಗೆ ಸೂಚಿಸಿತು.

Latest Videos
Follow Us:
Download App:
  • android
  • ios