Asianet Suvarna News Asianet Suvarna News

CBSE term-II board exams: ಏ.26 ರಿಂದ ಸಿಬಿಎಸ್ಇ 10, 12ನೇ ತರಗತಿಯ ಎರಡನೆ ಅವಧಿಯ ಬೋರ್ಡ್ ಪರೀಕ್ಷೆ

 ಏಪ್ರಿಲ್ 26 ರಿಂದ  10 ಮತ್ತು 12 ನೇ ತರಗತಿಯ ಎರಡನೇ ಅವಧಿಯ ಬೋರ್ಡ್ ಪರೀಕ್ಷೆಗಳು ಪ್ರಾರಂಭವಾಗಲಿವೆ ಎಂದು ಸಿಬಿಎಸ್‍ಇ  ಶುಕ್ರವಾರ ಪ್ರಕಟಿಸಿದೆ.

CBSE term-II board exams for Class X and XII to be held from April 26 gow
Author
Bengaluru, First Published Mar 11, 2022, 8:01 PM IST

ನವದೆಹಲಿ(ಮಾ.11): ಕೇಂದ್ರೀಯ ಪೌಢ ಶಿಕ್ಷ ಮಂಡಳಿ (Central Board of Secondary Education -CBSE)  10 ಮತ್ತು 12 ನೇ ತರಗತಿಯ ಎರಡನೇ ಅವಧಿಯ ಬೋರ್ಡ್ ಪರೀಕ್ಷೆಗಳು ಏಪ್ರಿಲ್ 26 ರಿಂದ ಪ್ರಾರಂಭವಾಗಲಿವೆ ಎಂದು ಶುಕ್ರವಾರ ಪ್ರಕಟಿಸಿದೆ. ಕೋವಿಡ್‍ ಸಾಂಕ್ರಾಮಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 2021-22ನೇ ಶೈಕ್ಷಣಿಕ ವರ್ಷದಲ್ಲಿ 10 ಮತ್ತು 12ನೇ ತರಗತಿಯ ಪಠ್ಯಕ್ರಮವನ್ನು ಬದಲಾಯಿಸಿ ಎರಡು ಅವಧಿಗಳಿಗೆ ವಿಂಗಡಿಸಲಾಗಿದ್ದು, ಪ್ರತಿ ಅವಧಿಯ ಕೊನೆಯಲ್ಲಿ ಸಿಬಿಎಸ್ ಇ ಪರೀಕ್ಷೆಗಳನ್ನು ನಡೆಸುತ್ತಿದೆ.

ಟರ್ಮ್ I ಪರೀಕ್ಷೆಗಳು ಈಗಾಗಲೇ ಮುಗಿದಿದ್ದು, 10 ಮತ್ತು 12 ಎರಡೂ ತರಗತಿಗಳಿಗೆ ಟರ್ಮ್-II ಪರೀಕ್ಷೆಗಳು ಏಪ್ರಿಲ್ 26 ರಿಂದ ಪ್ರಾರಂಭವಾಗುತ್ತವೆ. ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳು ಬಂದ್ ಆಗಿದ್ದನ್ನು ಗಮನದಲ್ಲಿಟ್ಟುಕೊಂಡು ಎರಡು ಪರೀಕ್ಷೆಗಳ ನಡುವೆ ಸಾಕಷ್ಟು ಅಂತರವನ್ನು ನೀಡಲಾಗಿದೆ ಎಂದು ಮಂಡಳಿ ತಿಳಿಸಿದೆ.

ಜೆಇಇ-ಮೇನ್ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿಯನ್ನು ಸಿದ್ಧಪಡಿಸುವಾಗ ಸಾಕಷ್ಟು ಕಾಳಜಿ ವಹಿಸಲಾಗಿದೆ. ಯಾವುದೇ ಎರಡು ವಿಷಯಗಳ ಪರೀಕ್ಷೆಗಳು ಒಂದೇ ದಿನಾಂಕದಂದು ಬರದಂತೆ ನೋಡಿಕೊಳ್ಳಲಾಗಿದೆ ಸಿಬಿಎಸ್ ಇ ಹೇಳಿದೆ.

KEA Assistant Professor Exam: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ

ಇನ್ನೂ ಬಿಡುಗಡೆಯಾಗದ ಟರ್ಮ್ I ಪರೀಕ್ಷೆ ಫಲಿತಾಂಶ: CBSE 10ನೇ ತರಗತಿ ಮತ್ತು 12ನೇ ತರಗತಿ  ಟರ್ಮ್ 1ರ ಫಲಿತಾಂಶ ಮಾ.12ರ ನಂತರ ಪ್ರಕಟವಾಗಲಿದೆ ಎಂದು ಹೇಳಲಾಗಿದೆ. ಮಾರ್ಚ್ 10 ಕ್ಕೂ ಮುನ್ನ ಬಿಡುಗಡೆಯಾಗಲಿದೆ ಎಂದು ಸುದ್ದಿಯಾಗಿತ್ತು. ಆದರೆ ಇನ್ನೂ ಬಿಡುಗಡೆಯಾಗಿಲ್ಲ. " ಫಲಿತಾಂಶ ತಯಾರಿ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದೆ ಮತ್ತು ಅದನ್ನು ಯಾವಾಗ ಬೇಕಾದರೂ ಪ್ರಕಟಿಸಬಹುದು. ಮಂಡಳಿಯು ಶೀಘ್ರದಲ್ಲೇ ತಿಳಿಸುತ್ತದೆ" ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

10, 12 ನೇ ತರಗತಿ ಪರೀಕ್ಷೆಗಳಿಗೆ ಹಾಜರಾಗಿರುವ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು CBSEಯ  ಅಧಿಕೃತ ಸೈಟ್‌ ನಲ್ಲಿ  https://www.cbse.gov.in/ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಪರಿಶೀಲಿಸಬಹುದು.

ನವೆಂಬರ್ - ಡಿಸೆಂಬರ್‌ನಲ್ಲಿ ನಡೆದ  10ನೇ ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ಒಟ್ಟು 36 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಸದ್ಯ ವಿದ್ಯಾರ್ಥಿಗಳು ಟರ್ಮ್‌ 1 ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನಷ್ಟೇ ಬಿಡುಗಡೆ ಮಾಡಲಿದ್ದು, ವಿದ್ಯಾರ್ಥಿಗಳು ಪಾಸ್‌ ಅಥವಾ ಫೇಲ್‌ ಎಂಬುದನ್ನು ತಿಳಿಸುವುದಿಲ್ಲ. ಸಿಬಿಎಸ್‌ಇ ಟರ್ಮ್‌ 1 ಪರೀಕ್ಷೆ ಫಲಿತಾಂಶವನ್ನು ಚೆಕ್‌ ಮಾಡಲು ವಿದ್ಯಾರ್ಥಿಗಳು cbse.gov.in ಅಥವಾ cbseresults.nic.in ಗೆ ಭೇಟಿ ನೀಡಲು ಸೂಚಿಸಲಾಗಿದೆ.

ಫಲಿತಾಂಶವನ್ನು ಟರ್ಮ್‌ 1 ಪರೀಕ್ಷೆ ಮತ್ತು ಇಂಟರ್‌ನಲ್‌ ಮಾರ್ಕ್ಸ್‌ ಹಾಗೂ ಟರ್ಮ್‌ 2 ಪರೀಕ್ಷೆ ಮತ್ತು ಇಂಟರ್‌ನಲ್‌ ಮಾರ್ಕ್ಸ್‌ ಆಧಾರದಲ್ಲಿ  ಅಂದರೆ ಶೇಕಡ.50 ಅಂಕಗಳ ವ್ಹೇಟೇಜ್‌ ನೀಡಿ ಫಲಿತಾಂಶ ಪ್ರಕಟಿಸಲಾಗುತ್ತದೆ.

KPSC RECRUITMENT 2022: ಔಷಧ ವಿಶ್ಲೇಷಕರು ಹುದ್ದೆಗಳಿಗೆ ಕೆಪಿಎಸ್‌ಸಿ ನೇಮಕಾತಿ

ಸಿಬಿಎಸ್‌ಇ ಫಲಿತಾಂಶ ಚೆಕ್‌ ಮಾಡುವ ವಿಧಗಳು: ವಿದ್ಯಾರ್ಥಿಗಳು ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ ವೆಬ್‌ಸೈಟ್‌ cbse.gov.in  ಅಥವಾ cbseresults.nic.in ಗೆ ಭೇಟಿ ನೀಡಿ. ಓಪನ್‌ ಅದ ಪೇಜ್‌ನಲ್ಲಿ ರಿಜಿಸ್ಟ್ರೇಷನ್‌ ನಂಬರ್ ನೀಡಿ ಲಾಗಿನ್‌ ಆಗಿ. ಫಲಿತಾಂಶ ಚೆಕ್ ಮಾಡಿ. ಅಗತ್ಯವಿದ್ದಲ್ಲಿ ದಾಖಲೆಯನ್ನು ಡೌನ್‌ಲೋಡ್ ಮಾಡಿ ಪ್ರಿಂಟ್‌ ತೆಗೆದುಕೊಳ್ಳಿ.

ಡಿಜಿ ಲಾಕರ್ ಮೂಲಕವು ವೀಕ್ಷಿಸಬಹುದು: ಡಿಜಿಲಾಕರ್ ಆ್ಯಪ್‌ನಲ್ಲಿ ಅಭ್ಯರ್ಥಿಗಳು ತಮ್ಮ 10, 12ನೇ ತರಗತಿ ಫಲಿತಾಂಶಗಳನ್ನು ಪರಿಶೀಲಿಸಬಹುದು. ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು ಅಥವಾ ವೆಬ್‌ಸೈಟ್ digilocker.gov.in ನಲ್ಲಿ ಪರಿಶೀಲಿಸಬಹುದು.

ಡಿಜಿಲಾಕರ್ ಆಪ್‌ನಿಂದ ಸಿಬಿಎಸ್‌ಇ 10ನೇ ಮತ್ತು 12 ನೇ ತರಗತಿ ಟರ್ಮ್ 1ರ ಮಾರ್ಕ್‌ಶೀಟ್ ಅನ್ನು ಪರಿಶೀಲಿಸುವುದು ಅಥವಾ ಡೌನ್‌ಲೋಡ್ ಮಾಡುವುದು ಹೇಗೆ? : ಸ್ಮಾರ್ಟ್‌ಫೋನ್‌ನಲ್ಲಿ ಪ್ಲೇಸ್ಟೋರ್ ಅಥವಾ ಆಪ್ ಸ್ಟೋರ್‌ಗೆ ಹೋಗಿ.  ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ಸಿಬಿಎಸ್‌ಇ ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ. ಬಳಿಕ ಶಿಕ್ಷಣ ವಿಭಾಗಕ್ಕೆ ಹೋಗಿ ಮತ್ತು "10 ನೇ ತರಗತಿ ಉತ್ತೀರ್ಣ ಪ್ರಮಾಣಪತ್ರ ಮತ್ತು 10 ನೇ ತರಗತಿಯ ಅಂಕಪಟ್ಟಿ" ಅಥವಾ "12 ನೇ ತರಗತಿ ಉತ್ತೀರ್ಣ ಪ್ರಮಾಣಪತ್ರ ಮತ್ತು 12 ನೇ ತರಗತಿಯ ಅಂಕಪಟ್ಟಿ" ಆಯ್ಕೆಮಾಡಿ.  ಲಾಗಿನ್ ಜಾಗದಲ್ಲಿ ವರ್ಷ, ಹೆಸರು ಮತ್ತು ರೋಲ್ ಸಂಖ್ಯೆಯನ್ನು ನಮೂದಿಸಿ. ಸಿಬಿಎಸ್‌ಇ ಟರ್ಮ್ 1ರ ಮಾರ್ಕ್‌ಶೀಟ್ ಕಾಣಿಸಿಕೊಳ್ಳುತ್ತದೆ. ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.

ಉಮಂಗ್ ಮೂಲಕವು ಪರಿಶೀಲಿಸಬಹುದು: CBSE ವಿದ್ಯಾರ್ಥಿಗಳು UMANG ಮೊಬೈಲ್ ಅಪ್ಲಿಕೇಶನ್‌ನಲ್ಲಿ ಕೂಡ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. UMANG ಅಪ್ಲಿಕೇಶನ್ ಅನ್ನು Google Play ಅಪ್ಲಿಕೇಶನ್ ಮೂಲಕ ಡೌನ್‌ಲೋಡ್ ಮಾಡಬಹುದು.

Follow Us:
Download App:
  • android
  • ios