Asianet Suvarna News Asianet Suvarna News

KPSC Recruitment 2022: ಔಷಧ ವಿಶ್ಲೇಷಕರು ಹುದ್ದೆಗಳಿಗೆ ಕೆಪಿಎಸ್‌ಸಿ ನೇಮಕಾತಿ

ಕರ್ನಾಟಕ ಲೋಕಸೇವಾ ಆಯೋಗವು  'ಗ್ರೂಪ್ ಸಿ'   ವಿಭಾಗದಲ್ಲಿ  ಖಾಲಿ ಇರುವ  ಒಟ್ಟು 2 ಔಷಧ ವಿಶ್ಲೇಷಕರು ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಎಪ್ರಿಲ್ 20 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

kpsc recruitment 2022 notification for drug inspector post gow
Author
Bengaluru, First Published Mar 11, 2022, 5:17 PM IST

ಬೆಂಗಳೂರು(ಮಾ.11): ಕರ್ನಾಟಕ ಲೋಕಸೇವಾ ಆಯೋಗವು (Karnataka Public Service Commission -KPSC) ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ.   'ಗ್ರೂಪ್ ಸಿ'   ವಿಭಾಗದಲ್ಲಿ ಒಟ್ಟು 2 ಔಷಧ ವಿಶ್ಲೇಷಕರು ( drug inspector ) ಹುದ್ದೆ ಖಾಲಿ ಇದ್ದು,   ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಆನ್‌ಲೈನ್‌ ಮೂಲಕ  ಅರ್ಜಿ ಸಲ್ಲಿಸಲು ಮಾರ್ಚ್ 21 ರಿಂದ ಎಪ್ರಿಲ್ 20ರವರೆಗೆ ಕಾಲಾವಕಾಶವಿದೆ.  ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು https://kpsc.kar.nic.in/ಗೆ ಭೇಟಿ ನೀಡಲು ಕೋರಲಾಗಿದೆ.

ಒಟ್ಟು 2 ಹುದ್ದೆಗಳ ಮಾಹಿತಿ
ಔಷಧ  ವಿಶ್ಲೇಷಕರು (ಸಸ್ಯಶಾಸ್ತ್ರ-botany): 1ಹುದ್ದೆ
ಔಷಧ  ವಿಶ್ಲೇಷಕರು (ರಸಾಯನಶಾಸ್ತ್ರ- Chemistry): 1ಹುದ್ದೆ

ಶೈಕ್ಷಣಿಕ ವಿದ್ಯಾರ್ಹತೆ: ಕರ್ನಾಟಕ ಲೋಕಸೇವಾ ಆಯೋಗದ  'ಗ್ರೂಪ್ ಸಿ'   ವಿಭಾಗದಲ್ಲಿ ಖಾಲಿ ಇರುವ  ಔಷಧ ವಿಶ್ಲೇಷಕರು ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ  ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು. ಬಿ.ಫಾರ್ಮ್ ಮತ್ತು ಡಿ.ಫಾರ್ಮ್ ಓದಿರಬೇಕು.

KPSC Recruitment 2022: ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ

ವಯೋಮಿತಿ: ಕರ್ನಾಟಕ ಲೋಕಸೇವಾ ಆಯೋಗದ  'ಗ್ರೂಪ್ ಸಿ'   ವಿಭಾಗದಲ್ಲಿ ಖಾಲಿ ಇರುವ  ಔಷಧ ವಿಶ್ಲೇಷಕರು ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 18 ರಿಂದ  35 ವರ್ಷದ ಒಳಗಿರಬೇಕು. ಸರಕಾರದ ನಿಯಮಗಳ ಪ್ರಕಾರ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ, SC/ST,ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ:  ಕರ್ನಾಟಕ ಲೋಕಸೇವಾ ಆಯೋಗದ  'ಗ್ರೂಪ್ ಸಿ'   ವಿಭಾಗದಲ್ಲಿ ಖಾಲಿ ಇರುವ  ಔಷಧ ವಿಶ್ಲೇಷಕರು ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ ಅಭ್ಯರ್ಥಿಗಳು ₹600, 2ಎ/2ಬಿ/3ಎ/3ಬಿ ಗೆ ಸೇರಿದ ಅಭ್ಯರ್ಥಿಗಳು ₹300, ಮಾಜಿ ಸೈನಿಕ ಅಭ್ಯರ್ಥಿಗಳು ₹50 ಅರ್ಜಿ ಶುಲ್ಕ ಪಾವತಿಸಬೇಕು. SC/ST,ಪ್ರವರ್ಗ-1, ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಅರ್ಜಿಯನ್ನು ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಕಾಮನ್ ಸರ್ವಿಸ್ ಸೆಂಟರ್ ಮುಂಖಾಂತರ ಪಾವತಿಸಬಹುದು.

KEA Assistant Professor Exam: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚನೆ

ಆಯ್ಕೆ ಪ್ರಕ್ರಿಯೆ: ಕರ್ನಾಟಕ ಲೋಕಸೇವಾ ಆಯೋಗದ  'ಗ್ರೂಪ್ ಸಿ'   ವಿಭಾಗದಲ್ಲಿ ಖಾಲಿ ಇರುವ  ಔಷಧ ವಿಶ್ಲೇಷಕರು ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ  ಸ್ಪರ್ಧಾತ್ಮಕ ಪರೀಕ್ಷೆ, ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. 

ವೇತನ ವಿವರ: ಕರ್ನಾಟಕ ಲೋಕಸೇವಾ ಆಯೋಗದ  'ಗ್ರೂಪ್ ಸಿ'   ವಿಭಾಗದಲ್ಲಿ ಖಾಲಿ ಇರುವ  ಔಷಧ ವಿಶ್ಲೇಷಕರು ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಹುದ್ದೆಗನುಸಾರ ₹30,350  ರಿಂದ ₹58,250 ರವರೆಗೆ ವೇತನ ದೊರೆಯಲಿದೆ.

ಅಗತ್ಯ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ : ಮಾರ್ಚ್ 21, 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಎಪ್ರಿಲ್ 20, 2022
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಎಪ್ರಿಲ್ 21, 2022
ನೇಮಕಾತಿ ಅಧಿಸೂಚನೆ ಬಗ್ಗೆ ಸಂಪುರ್ಣ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ ಇಲ್ಲಿ ಕ್ಲಿಕ್ಕಿಸಿ 

SBI Recruitment 2022: ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳಿಗೆ ಎಸ್‌ಬಿಐ ನೇಮಕಾತಿ

Follow Us:
Download App:
  • android
  • ios