ಲಕ್ಷಾಂತ ವಿದ್ಯಾರ್ಥಿಗಳು ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷಾ ದಿನಾಂಕ, ಸಮಯದ ನಿರೀಕ್ಷೆಯಲ್ಲಿದ್ದಾರೆ. ಸಿಬಿಎಸ್‌ಇ 10 ಮತ್ತು 12 ಬೋರ್ಡ್ ಪರೀಕ್ಷೆಗಳ ದಿನಾಂಕಗಳನ್ನು ತಿಳಿಯಲು ಕಾತುರದಿಂದ ಕಾಯುತ್ತಿರುವ ಭಾರತದಾದ್ಯಂತದ ಲಕ್ಷಾಂತರ ವಿದ್ಯಾರ್ಥಿಗಳು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು  ಮಾಹಿತಿಗೆ ಕಾಯುತ್ತಿದ್ದಾರೆ.

ಸಿಬಿಎಸ್‌ಇ ಮಂಡಳಿ ಪರೀಕ್ಷೆಗಳ ದಿನಾಂಕಗಳನ್ನು ನಾವು ಬಿಡುಗಡೆ ಮಾಡುತ್ತೇವೆ ಎಂದು ಪೋಖ್ರಿಯಲ್ ಬುಧವಾರ ಟ್ವೀಟ್ ಮಾಡಿದ್ದಾರೆ. ಸಿಬಿಎಸ್‌ಇ 10 ನೇ ತರಗತಿ, 12 ಬೋರ್ಡ್ ಪರೀಕ್ಷೆಗಳು 2021 ಅನ್ನು ಆನ್‌ಲೈನ್‌ನಲ್ಲಿ ನಡೆಸಲಾಗುವುದಿಲ್ಲ ಮತ್ತು ಆಫ್‌ಲೈನ್ ಮೋಡ್‌ನಲ್ಲಿ ನಡೆಯಲಿದೆ. ಮೊದಲಿನಂತೆ ಪರೀಕ್ಷೆಗಳು ನಡೆಯಲಿವೆ. ಬೋರ್ಡ್ ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳ ದೈಹಿಕ ಉಪಸ್ಥಿತಿಯ ಅಗತ್ಯವಿರುತ್ತದೆ ಎಂದಿದ್ದಾರೆ.

ಮನವಿಗೆ ಸ್ಪಂದಿಸಿದ ಸರ್ಕಾರ; ಸಿಇಟಿ ಕೌನ್ಸೆಲಿಂಗ್ ವಿಸ್ತರಣೆಗೆ ಸಿದ್ಧ

ಸಿಬಿಎಸ್‌ಇ ಮಂಡಳಿ ಪರೀಕ್ಷೆಗಳು 2021 ಫೆಬ್ರವರಿ ಮೊದಲು ನಡೆಯುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವರು ಹೇಳಿದ್ದಾರೆ. ವಿಶೇಷವೆಂದರೆ, ಈ ಹಿಂದೆ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಸಿಬಿಎಸ್‌ಇ 10, 12 ಬೋರ್ಡ್ ಪರೀಕ್ಷೆಗಳು ನಡೆದಿವೆ.

ಪ್ರಸ್ತುತ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ದಿನಾಂಕಗಳನ್ನು ನಿರ್ಧರಿಸಿದ್ದೇವೆ. ಆದರೆ ಪರಿಸ್ಥಿತಿ ಹದಗೆಡುತ್ತಿದೆ ಎಂದೆನಿಸದರೆ ನಾವು ವಿದ್ಯಾರ್ಥಿಗಳ ಪರವಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಕಾಲೇಜ್ ಮೆಂಟರ್‌ಶಿಪ್ ಆರಂಭಿಸಿದ ಆ್ಯಪಲ್ ಕಂಪನಿ!

ಮಕ್ಕಳ ಸುರಕ್ಷತೆ ನಮಗೆ ಅತ್ಯಂತ ಮುಖ್ಯವಾಗಿದೆ. ಅಗತ್ಯವಿದ್ದರೆ ನಾವು ಮತ್ತೆ ಸಭೆ ನಡೆಸುತ್ತೇವೆ. ಶಿಕ್ಷಣ ಸಚಿವಾಲಯವು ಆನ್‌ಲೈನ್‌ನಲ್ಲಿ 33 ಕೋಟಿ ವಿದ್ಯಾರ್ಥಿಗಳನ್ನು ತಲುಪಿದೆ ಮತ್ತು COVID-19 ರ ನಡುವೆ ನೀಟ್ ಪರೀಕ್ಷೆಗಳನ್ನು ಸಹ ನಡೆಸಿದೆ ಎಂದಿದ್ದಾರೆ.

ಮಂಡಳಿಯು ಸಿಬಿಎಸ್ಇ 2021 10 ಮತ್ತು 12 ಕ್ಕೆ ಪರೀಕ್ಷಾ ದಿನಾಂಕ ಬಿಡುಗಡೆ ಮಾಡಿದ ನಂತರ ಸಿಬಿಎಸ್ಇ ಮುಂಬರುವ ಸಿಬಿಎಸ್ಇ ಬೋರ್ಡ್ ಪರೀಕ್ಷೆಗಳ ಅಡ್ಮಿಟ್ ಕಾರ್ಡ್ ಬಿಡುಗಡೆಯಾಗುವ ನಿರೀಕ್ಷೆಯಿದೆ.