ಯಾರಿಗೆ ಬೇಕಾದ್ರೂ ಹಿಪ್ನಾಟಿಸಂ ಮಾಡಬಹುದಾ? ಕಲಿಯೋಕ್ಕಿದೆ ನೂರಾರು ದಾರಿ

ಹಿಪ್ನಾಟಿಸಂ ಎಂದಾಗ ಅದನ್ನು ನಕಾರಾತ್ಮಕವಾಗಿ ನೋಡುವವರೇ ಹೆಚ್ಚು. ಅದನ್ನು ಒಳ್ಳೆಯ ಕೆಲಸಕ್ಕೆ ಬಳಸಿಕೊಂಡ್ರೆ ಪ್ರಯೋಜನವಿದೆ ಎನ್ನುತ್ತಾರೆ ತಜ್ಞರು. ಆದ್ರೆ ಅನೇಕರಿಗೆ ಈ ಹಿಪ್ನಾಟಿಸಂ ನಿಜವಾಗ್ಲೂ ವರ್ಕ್ ಆಗುತ್ತಾ ಎಂಬ ಪ್ರಶ್ನೆ ಇದೆ.
 

Can Anyone Really Be Hypnotized Is There Any Course For It Know Everything roo

ಇತ್ತೀಚಿಗೆ ಬಂದ ಶೈತಾನ್ ಸಿನಿಮಾ ಹಿಪ್ನಾಟಿಸಂಗೆ ಸಂಬಂಧಿಸಿದ್ದಾಗಿದೆ. ಈ ಹಿಂದೆಯೂ ಅನೇಕ ಚಿತ್ರಗಳು, ಧಾರಾವಾಹಿಗಳಲ್ಲಿ ಹಿಪ್ನಾಟಿಸಂಗೆ ಸಂಬಂಧಿಸಿದ ದೃಶ್ಯಗಳನ್ನು ನೋಡ್ಬಹುದು. ಹಿಪ್ನಾಟಿಸಂ ಬಗ್ಗೆ ಸಾಮಾನ್ಯ ಜನರಿಗೆ ಅನೇಕ ಪ್ರಶ್ನೆಗಳಿವೆ. ನಿಜವಾಗ್ಲೂ ಇದನ್ನು ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಕಾಡೋದು ಸಾಮಾನ್ಯ. ಹಿಪ್ನಾಟಿಸಂ ಇತಿಹಾಸ ಇಂದು – ನಿನ್ನೆಯದಲ್ಲ. ಅದಕ್ಕೆ ಇತಿಹಾಸವಿದೆ. 

ಶ್ರೀರಾಮ (Ram) ಮತ್ತು ಶ್ರೀಕೃಷ್ಣನಿಗೆ ಹುಟ್ಟಿನಿಂದಲೇ ಹಿಪ್ನಾಟಿಸಂ (Hypnotism) ಜ್ಞಾನವಿತ್ತು. ಅವರು ಯಾರನ್ನಾದ್ರೂ ನೋಡಿದ್ರೆ ಅಥವಾ ಇವರು ಯಾರನ್ನಾದ್ರೂ ನೋಡಿದ್ರೆ ನೋಡಿದ ವ್ಯಕ್ತಿ ಕೃಷ್ಣ (Krishna) ಅಥವಾ ರಾಮನ ಮೋಹಕ್ಕೆ ಒಳಗಾಗ್ತಿದ್ದರು. ಎಲ್ಲವನ್ನೂ ಮರೆತು ರಾಮ/ ಕೃಷ್ಣ ಹೇಳಿದಂತೆ ಕೇಳುತ್ತಿದ್ದರು ಎಂಬ ಮಾತಿದೆ. ಇದೇ ಕಾರಣಕ್ಕೆ ಶ್ರೀಕೃಷ್ಣನಿಗೆ ಮೋಹನ ಎನ್ನುವ ಹೆಸರು ಕೂಡ ಬಂದಿದೆ. ಕೃಷ್ಣನು ತನ್ನ ಜೀವನದಲ್ಲಿ ಅನೇಕ ಸಂಮೋಹನ ಕ್ರಿಯೆಗಳನ್ನು ಮಾಡಿದ್ದಾನೆ. ಅವನ ಮಧುರವಾದ ನಗು ಮತ್ತು ಸುಂದರ ರೂಪವನ್ನು ಕಂಡು ಗೋಕುಲದ ಗೋಪಿಯರು ತನ್ನನ್ನು ಹತೋಟಿಯಲ್ಲಿಟ್ಟುಕೊಳ್ಳಲಾರದೆ ಅವನ ಮೋಹದಿಂದ ಎಲ್ಲವನ್ನೂ ಮರೆತು ಅವನ ಸಹವಾಸದಲ್ಲಿರಲು ಹಂಬಲಿಸುತ್ತಿದ್ದರು ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಪ್ರಪಂಚದಲ್ಲಿ ಹತ್ಯಾಕಾಂಡಗಳನ್ನು ಸೃಷ್ಟಿಸಿದ ಹಿಟ್ಲರ್ ಕೂಡ ಹಿಪ್ನಾಟಿಸಂ ಮಾಡ್ತಿದ್ದ ಎಂದು ಜನರು ನಂಬುತ್ತಾರೆ. ನಾವಿಂದು ಹಿಪ್ನಾಟಿಸಂ ಬಗ್ಗೆ ನಿಮಗೆ ಒಂದಿಷ್ಟು ಮಾಹಿತಿ ನೀಡ್ತೇವೆ.

ನಿಮ್ಮ ಆರೋಗ್ಯ ಕಾಪಾಡಿಕೊಳ್ಳೋದಕ್ಕೆ 'ಐದು ನಿಮಿಷದ ಸೂತ್ರ'ವೇ ಸಾಕು!

ಹಿಪ್ನಾಟಿಸಂ ಅಂದ್ರೇನು? : ಎಲ್ಲರೂ ಮೊದಲು ತಿಳಿಯಬೇಕಾದ ವಿಷ್ಯ ಇದು. ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್‌ನ ಪ್ರಕಾರ, ಹಿಪ್ನಾಟಿಸಂ ಒಬ್ಬ ವ್ಯಕ್ತಿಯ ಗಮನವನ್ನು ಕೇಂದ್ರೀಕರಿಸುವುದಾಗಿದೆ. ಈ ವ್ಯಕ್ತಿಯ ಸಲಹೆ ಮೇಲೆ ಮಾತ್ರ ಆತ ನಡೆಯುತ್ತಾನೆ. ಸರಳ ಭಾಷೆಯಲ್ಲಿ ಇದನ್ನು ನಿದ್ರೆ (Sleep) ಗೆ ಹೋಲಿಸಲಾಗುತ್ತದೆ. ಈ ಸ್ಥಿತಿಯಲ್ಲಿ ವ್ಯಕ್ತಿ ಎಚ್ಚರವಾಗಿರೋದಿಲ್ಲ. ನಿದ್ರೆಯಲ್ಲಿ ಕೂಡ ವ್ಯಕ್ತಿ ಎಚ್ಚರವಾಗಿರೋದಿಲ್ಲ. ಆದ್ರೆ ಹಿಪ್ನಾಟಿಸಂ ಸ್ಥಿತಿಯಲ್ಲಿ ನಿದ್ರೆಯಲ್ಲಿರುವ ವ್ಯಕ್ತಿ ನಿರ್ದಿಷ್ಟ ಧ್ವನಿಗೆ ಮಾತ್ರ ಎಚ್ಚರಗೊಳ್ಳುತ್ತಾನೆ. ಆ ಧ್ವನಿ ಹೇಳಿದ ಕೆಲಸವನ್ನೆಲ್ಲ ಚಾಚೂತಪ್ಪದೆ ಮಾಡುತ್ತಾನೆ. 

ಹಿಪ್ನಾಟಿಸಂ ಅಗತ್ಯವೇಕಿತ್ತು? : ದೇವಾನುದೇವತೆಗೆಳ ಕಾಲ ಬಿಟ್ಟು ಈಗಿನ ಬಗ್ಗೆ ನಾವು ಮಾತನಾಡೋದಾದ್ರೆ ಹಿಪ್ನಾಟಿಸಂ ಪ್ರಯೋಗವನ್ನು ಹದಿನೈದನೇ ಶತಮಾನದಲ್ಲಿ ಸ್ವಿಸ್ ವೈದ್ಯ ಪ್ಯಾರೆಸೆಲ್ಸಸ್ ಮಾಡಿದ್ರು. ಆಗ ಅರವಳಿಕೆ ಮದ್ದು ಇರಲಿಲ್ಲ. ಜನರಿಗೆ ಸೂಕ್ತ ಚಿಕಿತ್ಸೆ ನೀಡುವ ವೇಳೆ ನೋವನ್ನು ಕಡಿಮೆ ಮಾಡಲು ಇದ್ರ ಪ್ರಯೋಗ ಮಾಡಿದ್ರು. ಕಾಲು, ಕೈ ಕತ್ತರಿಸುವ ಸಮಯದಲ್ಲಿ ರೋಗಿಗೆ ಹಿಪ್ನಾಟಿಸಂ ಮಾಡಿ ಮಲಗಿಸಲಾಗುತ್ತಿತ್ತು. ಭಾರತದ ಮನು ಸಂಹಿತೆಯಲ್ಲೂ ಇದರ ಉಲ್ಲೇಖವಿದೆ. ಇನ್ನು ಈಜಿಪ್ಟ್ – ಗ್ರೀಸ್ ನಲ್ಲಿ ಹಿಪ್ನಾಟಿಸಂ ದೇವಾಲಯಗಳಿವೆ. ಈಗ ಈ ಹಿಪ್ನಾಟಿಸಂ ಅನ್ನು ಹಿಪ್ನೋ ಥೆರಪಿ ಎಂದು ಕರೆಯಲಾಗುತ್ತದೆ.

ಹಿಪ್ನಾಟಿಸಂ ಹೇಗೆ ಕಲಿಯೋದು? : ವಿದೇಶದಲ್ಲೂ ಹಿಪ್ನಾಟಿಸಂ ಪ್ರಸಿದ್ಧಿ ಪಡೆದಿದೆ. ಇದಕ್ಕೆ ನಾನಾ ಕೋರ್ಸ್ ಗಳಿವೆ. ಭಾರತದಲ್ಲೂ ನೀವು ಹಿಪ್ನಾಟಿಸಂ ಕಲಿಯಬಹುದು. ಭಾರತದಲ್ಲಿ ಹಿಪ್ನೋ ಥೆರಪಿ ಚಿಕಿತ್ಸಾ ಕೇಂದ್ರಗಳು (Hypno Therapy Treatment Centers) ಮತ್ತು ಅಕಾಡೆಮಿಗಳಿವೆ. ಆಸಕ್ತಿ ಇದ್ದಲ್ಲಿ ನೀವು ಅಲ್ಲಿಗೆ ಹೋಗಿ ತರಬೇತಿ ಪಡೆಯಬಹುದು. ನೀವು ಉತ್ತಮ ಸಂಮೋಹನಕಾರರಾಗಬೇಕೆಂದ್ರೆ 300 ಗಂಟೆಗಳ ತರಬೇತಿ ಅಗತ್ಯವಿರುತ್ತದೆ. ಆನ್ಲೈನ್ ನಲ್ಲಿ ಕೂಡ ನೀವು ಈ ಕೋರ್ಸ್ ಮಾಡಬಹುದು. 

ಆಫೀಸಲ್ಲಿ ಕೂತಲ್ಲೇ ಕೆಲಸ ಮಾಡಿ ತೂಕ ಹೆಚ್ಚಾಗಿದ್ಯಾ? ವೈಟ್‌ ಲಾಸ್ ಮಾಡ್ಕೊಳ್ಳೋಕೆ ಇಲ್ಲಿದೆ ಟಿಪ್ಸ್‌

ಹಿಪ್ನಾಟಿಸಂ ಹಂತ: ಹಿಪ್ನಾಟಿಸಂ ಮೊದಲ ಹಂತದಲ್ಲಿ ಸಂಮೋಹನಕ್ಕೊಳಗಾದ ವ್ಯಕ್ತಿಯು ಸಂಮೋಹನಕಾರನ ಪ್ರಭಾವಕ್ಕೆ ಒಳಗಾಗಲು ಪ್ರಾರಂಭಿಸುತ್ತಾನೆ. ಲಘು ನಿದ್ರೆಯನ್ನು ಅನುಭವಿಸಲು ಪ್ರಾರಂಭಿಸುತ್ತಾನೆ. ಎರಡನೇ ಹಂತದಲ್ಲಿ ನಿದ್ರೆ ಆಳವಾಗುತ್ತದೆ ಮತ್ತು ವಿಷಯವು ಸಂಮೋಹನಕಾರನ ಮಾತುಗಳನ್ನು ಕೇಳಲು ಪ್ರಾರಂಭಿಸುತ್ತದೆ. ಮೂರನೆಯ ಹಂತದಲ್ಲಿ ಅವನ ಉಪಪ್ರಜ್ಞೆಯು ಜಾಗೃತಗೊಳ್ಳುತ್ತದೆ ಮತ್ತು ಅವನು ಸಂಮೋಹನಕಾರನನ್ನು ಪಾಲಿಸಲು ಪ್ರಾರಂಭಿಸುತ್ತಾನೆ.  
 

Latest Videos
Follow Us:
Download App:
  • android
  • ios