Asianet Suvarna News Asianet Suvarna News

500 ಹುಡುಗೀರ ಮಧ್ಯೆ ಒಬ್ನೇ ಹುಡುಗ, ಎಕ್ಸಾಂ ಬರೆಯೋಕೆ ಹೋದವ ಚಳಿಜ್ವರ ಬಂದು ಆಸ್ಪತ್ರೆ ಸೇರಿದ!

ಅಲ್ಲಾ..ಇವತ್ತಿನ ಕಾಲದಲ್ಲಿ ಹೀಗೂ ಇರ್ತಾರ ಅಂತ. ಹೆಣ್ಮಕ್ಳು ಒಮ್ಮೆ ತಿರುಗಿ ನೋಡಿದ್ರೆ ಸಾಕು, ಸಣ್ಣದಾಗೊಂದು ಸ್ಮೈಲ್ ಕೊಟ್ರೂ ಸಾಕು ಅಂತ ಗಂಡ್‌ ಹೈಕ್ಳು ಕಾಯ್ತಿರ್ತಾರೆ. ಆದ್ರೆ ಇಲ್ಲೊಬ್ಬಾತ ಮಾತ್ರ ಹೆಣ್ಮಕ್ಕಳ ಗುಂಪನ್ನು ನೋಡಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಬಿಹಾರದಲ್ಲಿ ಇಂಥಹದ್ದೊಂದು ಘಟನೆ ನಡ್ದಿದೆ.

Bihar student faints after finding 500 girls at board exam centre Vin
Author
First Published Feb 2, 2023, 12:51 PM IST

ಹೆಣ್ಮಕ್ಳು ಮಾತನಾಡಿಸಿದ್ರೆ ಸಾಕು ಅಂತ ಅದೆಷ್ಟೋ ಹುಡುಗರು ಕಾಯ್ತಿರ್ತಾರೆ. ಹುಡುಗೀರ ಫ್ರೆಂಡ್‌ಶಿಪ್ ಮಾಡ್ಕೊಳ್ಳೋಕೆ ತುದಿಗಾಲಲ್ಲಿ ನಿಂತಿರ್ತಾರೆ. ಆದ್ರೆ ಇಲ್ಲೊಬ್ಬಾತ ಮಾತ್ರ ಪರೀಕ್ಷಾ ಕೇಂದ್ರದಲ್ಲಿ 500 ಹುಡುಗಿಯರನ್ನು ಕಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಅಷ್ಟಕ್ಕೇ ಮುಗ್ದಿಲ್ಲ. ಆತನಿಗೆ ಜ್ವರ ಬಂದಿರೋ ಕಾರಣ ಹಾಸ್ಪಿಟಲ್‌ಗೆ ಅಡ್ಮಿಟ್ ಮಾಡಲಾಗಿದೆ. ಇಂಥಹದ್ದೊಂದು ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ. ಪರೀಕ್ಷಾರ್ಥಿ ಮನೀಶ್‌ಗೆ ಎಕ್ಸಾಂ ಸೆಂಟರ್ ತಲುಪಿದ ಬೆನ್ನಲ್ಲೇ ಹುಡುಗಿಯರನ್ನು ನೋಡಿ ಅಸೌಖ್ಯ ಉಂಟಾಗಿದ್ದು, ಬಳಿಕ ಚಳಿ, ತಲೆನೋವು ಕಾಣಿಸಿಕೊಂಡು ತಲೆಸುತ್ತು ಬಂದು ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಬಿಹಾರದ ನಳಂದಾದ ಬೋರ್ಡ್ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬ ತರಗತಿಯಲಲ್ಲಿ 500 ಹುಡುಗಿಯರನ್ನು (Girls) ನೋಡಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕಾಲೇಜಿನ ಯಾವ ಕೋಣೆಯಲ್ಲಿ ಈ ವಿದ್ಯಾರ್ಥಿ ಪರೀಕ್ಷೆ (Exam) ಬರೆಯುತ್ತಿದ್ದನೋ ಅಲ್ಲಿ 322 ಹುಡುಗಿಯರು ಮಾತ್ರ ಪರೀಕ್ಷೆ ಬರೆಯುತ್ತಿದ್ದರು ಎಂಬುವುದೇ ಈ ಎಲ್ಲಾ ಅವಾಂತರಕ್ಕೆ ಕಾರಣ. ಅಂದರೆ ಅಲ್ಲಿ ಪರೀಕ್ಷೆ ಬರೆಯುತ್ತಿದ್ದ ಅಷ್ಟು ಹುಡುಗಿಯರಲ್ಲಿ ಮನೀಶ್ ಒಬ್ಬನೇ ಹುಡುಗ (Boy).

ಅಯ್ಯಯ್ಯೋ… ಪ್ರೀತೀನಾ… ಬೇಡ್ವೇ ಬೇಡ ಎನ್ನುತ್ತಾರೆ ಈ ಜನ

ಎಕ್ಸಾಂ ಫಾರ್ಮ್‌ನಲ್ಲಿ gender ಸೆಕ್ಷನ್‌ನಲ್ಲಿ ಹೆಣ್ಣೆಂದು ನಮೂದಿಸಿದ್ದ ಮನೀಶ್
ಮನೀಶ್ ಕುಮಾರ್ ತನ್ನ ಎಕ್ಸಾಂ ಫಾರ್ಮ್‌ನಲ್ಲಿ ಜೆಂಡರ್‌ ವಿಭಾಗದಲ್ಲಿ ಪುರುಷನ ಬದಲಿಗೆ ಹೆಣ್ಣು ಎಂದು ನಮೂದಿಸಿದ್ದೇ ಇಷ್ಟೆಲ್ಲಾ ತೊಂದರೆ ಕಾರಣವಾಗಿದೆ. ಇದರಿಂದಾಗಿ ಆತನ ಕೇಂದ್ರವು ಬಾಲಕಿಯರ ಪರೀಕ್ಷಾ ಕೇಂದ್ರವಾದ (Exam centre) ಬ್ರಿಲಿಯಂಟ್ ಕಾನ್ವೆಂಟ್ ಶಾಲೆಯೆಂದು ಸೆಲೆಕ್ಟ್‌ ಅಯಿತು. ಮೊದಲ ಅವಧಿಯಲ್ಲಿ ಗಣಿತ ವಿಷಯದ ಪರೀಕ್ಷೆಗೆ ಹಾಜರಾಗಲು ಕೇಂದ್ರಕ್ಕೆ ಆಗಮಿಸಿದ ಆತ ಅಲ್ಲಿನ ಸ್ಥಿತಿ ಕಂಡು ವಿದ್ಯಾರ್ಥಿ ಗಾಬರಿಗೊಂಡಿದ್ದಾನೆ. ಅಲ್ಲಿ ಆತನೊಬ್ಬನೇ ಬಾಲಕನಾಗಿದ್ದು, ಕೋಣೆಯಲ್ಲಿದ್ದ ಎಲ್ಲರೂ ಹೆಣ್ಮಕ್ಕಳಿದ್ದರು. 

ಸೆಕೆಂಡ್ ಪಿಯುಸಿಯಲ್ಲಿ ಓದುತ್ತಿದ್ದ ಮಣಿಶಂಕರ್ ಎಂಬಾತ ಆಲಂ ಇಕ್ಬಾಲ್ ಕಾಲೇಜ್‌ ವಿದ್ಯಾರ್ಥಿಯಾಗಿದ್ದು, ಬ್ರಿಲಿಯಂಟ್ ಸ್ಕೂಲ್‌ನಲ್ಲಿ ಪರೀಕ್ಷೆ ಬರೆಯಲು ಬಂದಿದ್ದ. ದೊಡ್ಡ ಹಾಲ್ ಪ್ರವೇಶಿಸಿ ಅಲ್ಲಿ ಬರೀ ಹುಡುಗಿಯರೇ ಇರುವುದನ್ನು ನೋಡಿ ಹೌಹಾರಿದ್ದಾನೆ. ಇದರಿಂದ ಗಾಬರಿಯಾಗಿ ಆತನಿಗೆ ಪ್ರಜ್ಞೆ ತಪ್ಪಿದೆ (Fainted). ಜ್ವರ ಕೂಡಾ ಬಂದಿದ್ದು, ಆತನನ್ನು ಸರ್ದಾರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ (Treatment) ಕೊಡಿಸಲಾಗಿದೆ.  'ಪರೀಕ್ಷಾ ಕೇಂದ್ರದಲ್ಲಿ ಸುಮಾರು 500 ಹುಡುಗಿಯರೊಂದಿಗೆ ಏಕಾಂಗಿಯಾಗಿದ್ದನು. ಇದು ಅವನಿಗೆ ಆತಂಕವನ್ನುಂಟು ಮಾಡಿತು' ಎಂದು ಪ್ರಸಾದ್ ಅವರ ಚಿಕ್ಕಮ್ಮ ವಿವರಿಸಿದರು. ಪ್ರಸಾದ್ ಅವರ ತಂದೆ, ಸಚ್ಚಿದಾನಂದ ಮಾತನಾಡಿ, ಮಗ ಕೆಲವು ಗಂಟೆಗಳ ನಂತರ ಪ್ರಜ್ಞೆಯನ್ನು ಮರಳಿ ಪಡೆದನು ಎಂದು ಹೇಳಿದರು. 

ಆಂಬ್ಯುಲೆನ್ಸ್ ಮೂಲಕ ವೈದ್ಯಕೀಯ ಮೌಲ್ಯಮಾಪನಕ್ಕಾಗಿ ಅವರನ್ನು ಸದರ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಟ್ವಿಟರ್‌ನಲ್ಲಿ ವೈರಲ್ ವೀಡಿಯೊ ವಿದ್ಯಾರ್ಥಿಯು "ಆಘಾತಕಾರಿ" ಅನುಭವದಿಂದ ಚೇತರಿಸಿಕೊಳ್ಳುತ್ತಿರುವುದನ್ನು ತೋರಿಸುತ್ತದೆ.

ಇಂಥಾ ಅಭ್ಯಾಸಗಳಿಂದ್ಲೇ ಮದ್ವೆ ವಯಸ್ಸಾದ್ರೂ ನೀವಿನ್ನೂ ಸಿಂಗಲ್ ಆಗಿರೋದು

ಪ್ರಜ್ಞಾಹೀನತೆಯಿಂದ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ
ಮನೀಶ್ ವಿಜ್ಞಾನ ವಿಷಯದಲ್ಲಿ 12ನೇ ಪರೀಕ್ಷೆ ಬರೆಯುತ್ತಿದ್ದ. ಹೆಚ್ಚುವರಿ ವಿಷಯವಾಗಿ, ಅತ ಗಣಿತಶಾಸ್ತ್ರದ ವಿಷಯವನ್ನು ತೆಗೆದುಕೊಂಡಿದ್ದ. ಆದರೆ ಅನಾರೋಗ್ಯದಿಂದ ಪರೀಕ್ಷೆ ಬರೆಯಲಾಗದೇ ಐದು ಪರೀಕ್ಷೆಗಳನ್ನು ಮಾತ್ರ ನೀಡಬೇಕಾಗುತ್ತದೆ. ಈ ವೇಳೆ ಜಿಲ್ಲಾ ಶಿಕ್ಷಣಾಧಿಕಾರಿ ಕೇಶವ ಪ್ರಸಾದ್ ಮಾತನಾಡಿ, ಪ್ರವೇಶ ಪತ್ರದಲ್ಲಿ ಆತ ಹೆಣ್ಣು ಎಂದು ಹಾಕಿಕೊಂಡಿದ್ದಾನೆ. ಇದರಿಂದಾಗಿ ಕೇಂದ್ರವನ್ನು ವಿದ್ಯಾರ್ಥಿನಿಯರಿಗಾಗಿಯೇ ನಿರ್ಮಿಸಲಾಗಿರುವ ಪರೀಕ್ಷಾ ಕೇಂದ್ರ ನೀಡಲಾಗಿದೆ. ಸದ್ಯ ವಿದ್ಯಾರ್ಥಿಯು ಅದೇ ಕೇಂದ್ರದಲ್ಲಿ ಪರೀಕ್ಷೆ ನೀಡಬೇಕಾಗುತ್ತದೆ. ನಂತರ ಲಿಂಗ (Gender) ವರ್ಗವನ್ನು ಸರಿಪಡಿಸಲಾಗುವುದು ಎಂದಿದ್ದಾರೆ.

ಈ ವರ್ಷ 36 ಜಿಲ್ಲೆಗಳಲ್ಲಿ 1,464 ಕೇಂದ್ರಗಳಲ್ಲಿ 6,36,432 ಹುಡುಗಿಯರು ಮತ್ತು 6,81795 ಹುಡುಗರು ಸೇರಿದಂತೆ 13 ಲಕ್ಷ 12 ನೇ ತರಗತಿ ವಿದ್ಯಾರ್ಥಿಗಳು ಬಿಹಾರ ಬೋರ್ಡ್ ಇಂಟರ್ಮೀಡಿಯೇಟ್ ಪರೀಕ್ಷೆಗೆ ಹಾಜರಾಗುವ ನಿರೀಕ್ಷೆಯಿದೆ.

Follow Us:
Download App:
  • android
  • ios