ಬೆಂಗಳೂರು, (ಜ.17): 2020-21ನೇ ಸಾಲಿನ ಬೆಂಗಳೂರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಪದವಿ ಕೋರ್ಸ್ ಗಳ ಸೀಟು ಹಂಚಿಕೆ, ಶುಲ್ಕ ಪಾವತಿ ಮತ್ತು ಇತರೆ ಎಲ್ಲಾ ಪ್ರಕ್ರಿಯೆಗಳು ಆನ್‌ಲೈನ್‌ನಲ್ಲಿ ನಡೆಯಲಿವೆ.

ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಬಯಸಿ ಒಟ್ಟು  ಈ ಬಾರಿ 15,539 ಅರ್ಜಿಗಳು ಸಲ್ಲಿಕೆಯಾಗಿವೆ. ಕಳೆದ ವರ್ಷಕ್ಕೆ ಒಲಿಕೆ ಮಾಡಿದ್ರೆ ಶೇ 20 ಅರ್ಜಿ ಗಳು ಹೆಚ್ಚಾಗಿ ಸಲ್ಲಿಕೆಯಾಗಿವೆ.

SSLC, PUC ಪರೀಕ್ಷೆಗೆ ಮುಹೂರ್ತ ಫಿಕ್ಸ್..!

ಆನ್-ಲೈನ್ ಪ್ರವೇಶ ಪ್ರಕ್ರಿಯೆ ದಿನಾಂಕವನ್ನು ಸಹ ಪ್ರಕಟಿಸಲಾಗಿದ್ದು,  ಈಗಾಗಲೇ ಮೆರಿಟ್ ಪಟ್ಟಿ ಬಿಡುಗಡೆ ಆಗಿದೆ.  ನಾಳೆ ಅಂದ್ರ ಜ18ರಿಂದ ಅನ್ ಲೈನ್ ಮೂಲಕ ಸೀಟ್ ಹಂಚಿಕೆ ಆರಂಭವಾಗಲಿದ್ದು, 2ನೇ ಸುತ್ತಿನ ಹಂಚಿಕೆ ಜ.22 ರಂದು ನಡೆಯುತ್ತೆ ಎಂದು ಬೆಂಗಳೂರು ವಿವಿ ಕುಲಪತಿ ಡಾ.ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.

ವೇಳಾಪಟ್ಟಿ
• 18-01-2021 (ಮಧ್ಯಾಹ್ನ 12.00ಗಂಟೆಗೆ): ಮೊದಲ ಸುತ್ತಿನ ಸೀಟು ಹಂಚಿಕೆ ಮತ್ತು ಸೂಪರ್ ನ್ಯೂಮರರಿ ಸೀಟುಗಳು.

• 20-01-2021(ಮಧ್ಯರಾತ್ರಿಯವರೆಗೂ): ಮೊದಲ ಸುತ್ತಿನ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ

• 22-01-2021 (ಮಧ್ಯಾಹ್ನ 12.00ಗಂಟೆಗೆ): ಎರಡನೇ ಸುತ್ತಿನ ಸೀಟು ಹಂಚಿಕೆ ಮತ್ತು ಸೂಪರ್ ನ್ಯೂಮರರಿ ಸೀಟುಗಳು.

• 25-01-2021 (ಮಧ್ಯರಾತ್ರಿಯವರೆಗೂ): ಎರಡನೇ ಸುತ್ತಿನ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ.

• 27-01-2021 (ಮಧ್ಯಾಹ್ನ 12.00ಗಂಟೆಗೆ): ಮೂರನೇ ಸುತ್ತಿನ ಸೀಟು ಹಂಚಿಕೆ ಮತ್ತು ಸೂಪರ್ ನ್ಯೂಮರರಿ ಸೀಟುಗಳು.

• 29-01-2021 (ಮಧ್ಯರಾತ್ರಿಯವರೆಗೂ): ಮೂರನೇ ಸುತ್ತಿನ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ.

• 01-02-2021 (ಮಧ್ಯಾಹ್ನ 12.00ಗಂಟೆಗೆ): ಅಂತಿಮ ಸುತ್ತಿನ ಸೀಟು ಹಂಚಿಕೆ ಮತ್ತು ಸೂಪರ್ ನ್ಯೂಮರರಿ ಸೀಟುಗಳು.

• 03-02-2021 (ಮಧ್ಯರಾತ್ರಿಯವರೆಗೂ): ಅಂತಿಮ ಸುತ್ತಿನ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ.