ಏ.19, 20 ಮತ್ತು ಏ.21ರಿಂದ ನಡೆಯಬೇಕಿದ್ದ ಪದವಿ ಹಾಗೂ ಸ್ನಾತಕೋತ್ತರ ವಿವಿಧ ಕೋರ್ಸ್‌ಗಳ ಪರೀಕ್ಷೆ| ಕೊರೋನಾ ಎರಡನೇ ಅಲೆ ಮತ್ತು ಸಾರಿಗೆ ಸೇವೆ ವ್ಯತ್ಯಯದಿಂದ ಮುಂದೂಡಲ್ಪಟ್ಟ ಪರೀಕ್ಷೆಗಳು| ನಿಗದಿಪಡಿಸಲಿರುವ ಮುಂದಿನ ದಿನಾಂಕ ಶೀಘ್ರ ಪ್ರಕಟ| 

ಬೆಂಗಳೂರು(ಏ.17): ಹೆಚ್ಚುತ್ತಿರುವ ಕೊರೋನಾ ಹಾಗೂ ಸಾರಿಗೆ ಸೇವೆ ಕೊರತೆ ಕಾರಣದಿಂದ ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಏ.19, 20 ಮತ್ತು ಏ.21ರಿಂದ ನಡೆಯಬೇಕಿದ್ದ ಪದವಿ ಹಾಗೂ ಸ್ನಾತಕೋತ್ತರ ವಿವಿಧ ಕೋರ್ಸ್‌ಗಳ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ.

ವಿವಿಯ ಎಲ್ಲ ಪದವಿ ಕೋರ್ಸ್‌ಗಳ ಒಂದು ಮತ್ತು ಮೂರನೇ ಸೆಮಿಸ್ಟರ್‌ ಪರೀಕ್ಷೆ ಹಾಗೂ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರ್‌ ಕಾಲೇಜಿನ (ಯುವಿಸಿವಿ) ಬಿ.ಆಚ್‌ರ್‍, ಬಿಟೆಕ್‌ ಪರೀಕ್ಷೆಗಳು ಏ.19ರಂದು ನಡೆಯಬೇಕಿತ್ತು. ಜೊತೆಗೆ ಸ್ನಾತಕೋತ್ತರ ಕೋರ್ಸ್‌ಗಳಾದ ಎಂಬಿಎ, ಎಂಸಿಎ, ಎಂಇಡಿ, ಎಂಎಸ್‌ಸಿ, ಏ.20ಕ್ಕೆ, ಎಂಎ, ಎಸ್‌ಎಲ್‌ಪಿ, ಎಂವಿಒಸಿ ಕೋರ್ಸ್‌ಗಳ ಮೂರನೇ ಸೆಮಿಸ್ಟರ್‌ ಹಾಗೂ ಎಂಸಿಎ ಐದನೇ ಸೆಮಿಸ್ಟರ್‌ ಪರೀಕ್ಷೆಗಳನ್ನು ಏ.21ರಂದು ನಡೆಸಲು ತೀರ್ಮಾನಿಸಲಾಗಿತ್ತು.

ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು: ಸಭಾಪತಿ ಹೊರಟ್ಟಿ ಪ್ರತಿಕ್ರಿಯೆ

ಆದರೆ ಕೊರೋನಾ ಎರಡನೇ ಅಲೆ ಮತ್ತು ಸಾರಿಗೆ ಸೇವೆ ವ್ಯತ್ಯಯದಿಂದ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ನಿಗದಿಪಡಿಸಲಿರುವ ಮುಂದಿನ ದಿನಾಂಕಗಳನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ವಿವಿ ತಿಳಿಸಿದೆ.