ಬೆಂಗಳೂರಿನಲ್ಲಿ ಶಾಲಾ ಸಮಯ ಬದಲಾವಣೆ: ಮಕ್ಕಳನ್ನು ಬೇಗನೆ ಎಬ್ಬಿಸಿ ಶಾಲೆಗೆ ಕಳಿಸುವುದು ಪೋಷಕರ ಜವಾಬ್ದಾರಿ!

ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ತಗ್ಗಿಸುವ ಹಿನ್ನೆಲೆಯಲ್ಲಿ ಶಾಲಾ ಸಮಯವನ್ನು ಬದಲಾವಣೆ ಮಾಡಲು ಶಿಕ್ಷಣ ಇಲಾಖೆ ನಿರ್ಧಾರ ಕೈಗೊಳ್ಳುತ್ತಿದೆ.

Bengaluru School Timing Change education department decide 30 min early open the schools sat

ಬೆಂಗಳೂರು (ಅ.03): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆಯನ್ನು ತಗ್ಗಿಸುವ ಹಿನ್ನೆಲೆಯಲ್ಲಿ ಶಾಲಾ ಸಮಯ ಬದಲಾವಣೆ ಮಾಡಲು ಶಿಕ್ಷಣ ಇಲಾಖೆಯು ನಿರ್ಧಾರ ಮಾಡುತ್ತಿದೆ. ಈ ಬಗ್ಗೆ ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ಮುಖ್ಯಸ್ಥರೊಂದಿಗೆ ಸಭೆ ಮಾಡಿದ ಶಿಕ್ಷಣ ಇಲಾಖೆಯು ಪ್ರತಿನಿತ್ಯದ ಸಮಯಕ್ಕಿಂದ 30 ನಿಮಿಷ ಮೊದಲೇ ಆರಂಭಿಸಲು ತೀರ್ಮಾನಿಸಲಾಗುತ್ತಿದೆ.

ಹೌದು, ಸಿಲಿಕಾನ್ ಸಿಟಿಯ ಶಾಲೆಗಳ ಟೈಮಿಂಗ್ ಬದಲಾಗುವುದು ಬಹುತೇಕ ಫಿಕ್ಸ್ ಆಗಿದೆ. ಶಾಲಾ ಸಮಯ ಬದಲಾವಣೆ ವಿಚಾರಕ್ಕೆ ಕ್ಲೈಮ್ಯಾಕ್ಸ್ ಕೊಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಮಂಗಳವಾರ ಖಾಸಗಿ ಶಾಲೆಗಳ ಒಕ್ಕೂಟ, ಶಾಲಾ ವಾಹನಗಳ ಸಂಘ, ಪೋಷಕರ ಜೊತೆ ಶಿಕ್ಷಣ ಇಲಾಖೆ ಮಹತ್ವದ ಸಭೆ ಮಾಡಲಾಗಿದ್ದು, ಅಕ್ಟೋಬರ್‌ 5ರಂದು ಸಮಗ್ರ ಶಿಕ್ಷಣ ಇಲಾಖೆಯಲ್ಲಿ ಆಯುಕ್ತರ ನೇತ್ರತ್ವದಲ್ಲಿ ನಡೆಯಲಿರುವ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಲಾಗುತ್ತದೆ. ಈ ಮೂಲಕ ಸಂಚಾರ ದಟ್ಟಣೆಯನ್ನು ತಗ್ಗಿಸಲು ಕ್ರಮ ಕೈಗೊಳ್ಳಲಾಗಿದೆ.

ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌: ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಿದ ಸರ್ಕಾರ

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಶಾಲೆಗಳ ಸಮಯವನ್ನು ಬೇಗನೇ ಮಾಡುವಂತೆ ಹೈಕೋರ್ಟ್ ಕೆಲ ದಿನಗಳ ಹಿಂದೆ ಸೂಚನೆ ನೀಡಿತ್ತು. ಇದರ ಬೆನ್ನಲ್ಲಿಯೇ ರಾಜ್ಯ ಶಿಕ್ಷಣ ಇಲಾಖೆಯು ಖಾಸಗಿ ಶಾಲಾ ಒಕ್ಕೂಟದ ಜೊತೆ ಸಭೆ ನಡೆಸಿ ಚರ್ಚೆ ಮಾಡಿದೆ. ಇನ್ನು ರಾಜ್ಯಾದ್ಯಂತ ಬಹುತೇಕ ಶಾಲೆಗಳನ್ನು ಬೆಳಗ್ಗೆ 8.45 ರಿಂದ 3.30 ರವರೆಗೆ ತರಗತಿಗಳು ನಡೆಸಲಾಗುತ್ತದೆ. ಈ ಸಮಯವನ್ನು 30 ನಿಮಿಷ ಇಳಿಕೆ ಮಾಡಿದರೆ ಹೇಗೆ ಎಂಬ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಆಲೋಚನೆ ಮಾಡಿದೆ. ಇಲಾಖೆ ನಿರ್ಧಾರಕ್ಕೆ ಬರುವ ಮುನ್ನವೇ ಖಾಸಗಿ ಶಾಲೆಗಳ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೆ, ಟ್ರಾಫಿಕ್ ಕಡಿಮೆ ಮಾಡಲು ಶಾಲಾ ಅವಧಿ ಬೇಗ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಹೊರೆಯಾಗಲಿದೆ ಎಂದು ಆಕ್ಷೇಪ ಮಾಡಿವೆ. ಆದರೆ, ಇದನ್ನು ಪರಿಗಣಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಅತಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗುವ ಕೆಲವು ಪ್ರದೇಶಗಳಲ್ಲಿ ಸಮಯವನ್ನು ಬದಲಾವಣೆ ಮಾಡುವುದಕ್ಕೆ ಮುಂದಾಗಿದೆ. 

 ಖಾಸಗಿ ಶಾಲಾ ಒಕ್ಕೂಟ ಹೇಳಿದ್ದೇನು?
-ಸಮಯ ಬೇಗ ಆದ್ರೆ ಮಕ್ಕಳು ಬೆಳಗ್ಗೆ ಬೇಗ ಏಳಬೇಕು.
-ಮಕ್ಕಳ ದೈಹಿಕ ಚಟುವಟಿಕೆಗೆ ಕಡಿಮೆ ಕಾಲಾವಕಾಶ ಸಿಗುತ್ತದೆ.
- ಮಕ್ಕಳಿಗೆ ಕಡಿಮೆ ನಿದ್ದೆಯಿಂದ ಆರೋಗ್ಯ ಸಮಸ್ಯೆಯಾಗಬಹುದು.
- ನಗರದ ಪ್ರಮುಖ ಟ್ರಾಫಿಕ್ ಇರುವ ಏರಿಯಗಳಲ್ಲಿ ಬೇಗ ಶುರು ಮಾಡಲಿ.
- ಎಂಜಿ ರೋಡ್ ಸೇರಿದಂತೆ ಕೆಲವು ಭಾಗದಲ್ಲಿ ಮಾತ್ರ ಶಾಲೆಗಳನ್ನು ಬೇಗ ಆರಂಭಿಸಬಹುದು.
- ಬೆಂಗಳೂರಿನ ಹೊರ ವಲಯದ ರಸ್ತೆಗಳಲ್ಲಿ ಶಾಲೆ ಬೇಗ ಆರಂಭ ಮಾಡೋ ಅವಶ್ಯಕತೆ ಇಲ್ಲ.
- ಮಕ್ಕಳ ಕಲಿಕಾ ಅವಧಿ ಕಡಿತಗೊಳಿಸದೇ ಶಾಲೆ ಬೇಗ ಆರಂಭ ಮಾಡುವುದು ಸ್ವಾಗತಾರ್ಹ.

ಗೋಕಾಕ ಪಟ್ಟಣದಲ್ಲಿ ಬೆಚ್ಚಿ ಬೀಳಿಸೋ ಸಾಮೂಹಿಕ ಅತ್ಯಾಚಾರ: ರಾತ್ರಿಯಿಡೀ 6 ಕಾಮುಕರ ದಾಳಿಗೆ ನಲುಗಿದ ಮಹಿಳೆ

ಶಾಲೆ, ಕೈಗಾರಿಕೆ, ವಾಣಿಜ್ಯ ಸಂಸ್ಥೆಗಳ ಸಮಯ ಬದಲಿಸಲು ಸಲಹೆ: ನಗರದಲ್ಲಿ ಹದಗೆಟ್ಟಿರುವ ಟ್ರಾಫಿಕ್ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್‌ನಿಂದ ಸಮಯ ಬದಲಾವಣೆ ಮಾಡಲು ಸಲಹೆ ನೀಡಲಾಗಿತ್ತು. ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಸಲಹೆ ನೀಡಲಾಗಿತ್ತು. ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಮಯವನ್ನು ರಾಜ್ಯ ಸರ್ಕಾರ ಪರಿಗಣಿಸುವಂತೆ ಶಿಫಾರಸು ಮಾಡಲಾಗಿತ್ತು. ಈಗ ಮೊದಲ ಹಂತದಲ್ಲಿ ಶಾಲಾ ಸಮಯವನ್ನು ಬದಲಾವಣೆ ಮಾಡಲು ಶಿಕ್ಷಣ ಇಲಾಖೆ ಚರ್ಚೆಯನ್ನು ಮಾಡಿ 30 ನಿಮಿಷ ಬೇಗನೇ ಶಾಲೆಗಳನ್ನು ಆರಂಭಿಸಲು ಮುಂದಾಗಿದೆ.

Latest Videos
Follow Us:
Download App:
  • android
  • ios