Bengaluru College Turban Row: ಬೆಂಗಳೂರು ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಟರ್ಬನ್ ತೆಗೆಯಲು ಸೂಚನೆ, ಸಿಖ್ ಸಮಿತಿ ವಿರೋಧ
ಹಿಜಾಜ್ ವಿವಾದ ತಾರಕಕ್ಕೇರುತ್ತಿರುವ ಬೆನ್ನಲ್ಲೇ ಸಿಖ್ ರ ಟರ್ಬನ್ ವಿವಾದ ಹುಟ್ಟಿಕೊಂಡಿದೆ. ಬೆಂಗಳೂರಿನ ಕಾಲೇಜೊಂದು ಟರ್ಬನ್ ಧರಿಸಿ ಬಂದ ವಿದ್ಯಾರ್ಥಿಗೆ ಟರ್ಬನ್ ತೆಗೆಯುವಂತೆ ಸೂಚಿಸಿದ್ದನ್ನು ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ವಿರೋಧ ವ್ಯಕ್ತಪಡಿಸಿದೆ.
ಚಂಡೀಗಢ(ಫೆ.19): ರಾಜ್ಯದಲ್ಲಿ ಹಿಜಾಜ್ ವಿವಾದ (Hijab row) ಭುಗಿಲೆದ್ದಿರುವ ನಡುವಲ್ಲೇ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಉಡುಪುಗಳನ್ನು ನಿಷೇಧಿಸುವ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ ಬೆಂಗಳೂರಿನ ಕಾಲೇಜೊಂದು ಟರ್ಬನ್ ( turban - ದಸ್ತಾರ್) ಧರಿಸಿ ಬಂದ ವಿದ್ಯಾರ್ಥಿಗೆ ಟರ್ಬನ್ ತೆಗೆಯುವಂತೆ ಸೂಚಿಸಿದ್ದನ್ನು ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ವಿರೋಧ ವ್ಯಕ್ತಪಡಿಸಿದೆ.
ಕಾಲೇಜಿನ ಈ ಕ್ರಮವನ್ನು "ಅಸಂವಿಧಾನಿಕ" ಎಂದು ಕರೆದಿರುವ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ (Shiromani Gurdwara Parbandhak Committee - SGPC) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಮಧ್ಯೆಪ್ರವೇಶಿಸುವಂತೆ ಆಗ್ರಹಿಸಿದೆ. ಕರ್ನಾಟಕದ ಮುಖ್ಯಮಂತ್ರಿಗಳು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಅಗತ್ಯ ಸೂಚನೆಗಳನ್ನು ನೀಡಬೇಕು ಎಂದು ಶಿರೋಮಣಿ ಅಕಾಲಿದಳ (ಎಸ್‌ಎಡಿ) ಆಗ್ರಹಿಸಿದೆ.
SGPC ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ( Harjinder Singh Dhami ) ಮಾತನಾಡಿ, ಸಿಖ್ಖರು (sikh) ತಮ್ಮ ಸ್ವಂತ ದೇಶದಲ್ಲಿ ತಮ್ಮ ಟರ್ಬನ್ ( ದಸ್ತಾರ್) ಬಲವಂತವಾಗಿ ತೆಗೆಯುವುದನ್ನು ನಾವು ಸಹಿಸುವುದಿಲ್ಲ. "ಇದು ಅಸಂವಿಧಾನಿಕ ನಿರ್ಧಾರ, ಇದನ್ನು ಎಂದಿಗೂ ಒಪ್ಪಿಕೊಳ್ಳಲಾಗುವುದಿಲ್ಲ. ಯಾರನ್ನಾದರೂ ಅವರ ಟರ್ಬನ್ತೆ ಗೆಯುವಂತೆ ಒತ್ತಾಯಿಸುವುದು ಸಿಖ್ ಸಂಪ್ರದಾಯಗಳು ಮತ್ತು ತತ್ವಗಳ ಉಲ್ಲಂಘನೆಯಾಗಿದೆ" ಎಂದು ಹೇಳಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಧ್ಯಪ್ರವೇಶಿಸಬೇಕು. ಮುಖ್ಯಮಂತ್ರಿ ಬಸವರಾದ ಮುಖ್ಯಮಂತ್ರಿಗಳೂ ಕೂಡ ಮಧ್ಯ ಪ್ರವೇಶಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
Indian Bank Recruitment 2022: ಖಾಲಿ ಇರುವ ಭದ್ರತಾ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಯವರಿಗೆ (cm basavaraj bommai )ಎಸ್'ಜಿಪಿಸಿ ಪತ್ರ ಬರೆದಿದ್ದು, ರಾಜ್ಯದಲ್ಲಿ ಸಿಖ್ಖರ ಧಾರ್ಮಿಕ ಸ್ವಾತಂತ್ರ್ಯವನ್ನು ಸಂರಕ್ಷಿಸುವಂತೆ ಮತ್ತು ದೇಶಕ್ಕೆ ಸಿಖ್ಖರ ಕೊಡುಗೆಯನ್ನು ನೆನಪಿಸುವಂತೆ ಆಗ್ರಹಿಸಿದೆ. ಇಂತಹ ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದೆ.
SAD ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರು ಟ್ವೀಟ್ ಮಾಡಿ, ಸಿಖ್ಖರು ಎಲ್ಲಾ ಧರ್ಮವನ್ನೂ ಗೌರವಿಸುತ್ತಾರೆ ಮತ್ತು 'ಸರ್ಬತ್ ದ ಭಲಾ' ಗಾಗಿ ಪ್ರಾರ್ಥಿಸುತ್ತಾರೆ. ಆದರೆ, ನಮ್ಮ ಧರ್ಮದ ಚಿನ್ಹೆಗಳಿಗೆ ಸೂಚಿಸುವ ಅಗೌರವವನ್ನು ನಾವ ಸಹಿಸುವುದಿಲ್ಲ. ಇದು ನಮ್ಮ ಹೆಮ್ಮೆಯಾಗಿದೆ. ಹೀಗಾಗಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು () ಮಧ್ಯ ಪ್ರವೇಶಿಸಿ ಅಗತ್ಯ ಕ್ರಮಗಳ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ, ಮೊದಲ ಬಾರಿಗೆ ತೃತೀಯ ಲಿಂಗಿಗಳಿಗೂ ಮೀಸಲಾತಿ!
ಬೆಂಗಳೂರಿನ ಕಾಲೇಜ್ ವೊಂದು ಟರ್ಬನ್ (ದಸ್ತಾರ್) ಧರಿಸಿ ಬಂದ 17 ವರ್ಷದ ಸಿಖ್ ವಿದ್ಯಾರ್ಥಿನಿಗೆ ಟರ್ಬನ್ ತೆಗೆಯುವಂತೆ ಸೂಚಿಸಿತ್ತು. ಅಲ್ಲದೆ, ಕಾಲೇಜು ಆಡಳಿತ ಮಂಡಳಿಯವರು ವಿದ್ಯಾರ್ಥಿನಿಗೆ ಕರ್ನಾಟಕ ಹೈಕೋರ್ಟ್ ಆದೇಶದ ಬಗ್ಗೆ ತಿಳಿ ಹೇಳಿದ್ದರು.