ಯುಪಿಎಸ್‌ಸಿಯಲ್ಲಿ 27ನೇ ಸ್ಥಾನ ಪಡೆದ ಬೀಡಿ ವರ್ಕರ್‌ ಮಹಿಳೆಯ ಪುತ್ರ!

Beedi Worker Son Nandala Saikiran ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶ ಬಂದ ಬಳಿಕ ಯಶಸ್ಸಿನ ಕಥೆಗಳು ಒಂದೊಂದಾಗಿ ಹೊರಬರುತ್ತಿವೆ. ಪಕ್ಕದ ತೆಲಂಗಾಣದಲ್ಲಿ ಬೀಡಿ ವರ್ಕರ್‌ ಮಹಿಳೆಯ ಮಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ 27ನೇ ಸ್ಥಾನ ಪಡೆದುಕೊಂಡಿದ್ದಾರೆ.

Beedi rollers son Nandala Sai Kiran from Karimnagar gets 27th rank in Civils san

ನವದೆಹಲಿ (ಏ.17): ಯುಪಿಎಸ್‌ಸಿ ಪರೀಕ್ಷೆ ಬರೆಯುವುದು ಯಜ್ಞವಿದ್ದಂತೆ. ಎಲ್ಲರಿಗೂ ಸಕ್ಸಸ್‌ ಸಿಗುತ್ತೆ ಅನ್ನೋ ಗ್ಯಾರಂಟಿ ಇರೋದಿಲ್ಲ. ಆದರೆ, ಪ್ರಯತ್ನ ಮಾತ್ರ ಎಂದಿಗೂ ಬಿಡಬಾರದು. ಈ ಬಾರಿಯ ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶಗಳು ಬಂದ ಬಳಿಕ ಒಬ್ಬೊಬ್ಬರ ಯಶಸ್ಸಿನ ಕಥೆಗಳು ಹೊರಬರುತ್ತಿದೆ. ಇದರ ನಡುವೆ ತೆಲಂಗಾಣದ ಕರೀಂನಗರದಲ್ಲಿ ಸ್ಫೂರ್ತಿದಾಯಕ ಕಥೆ ಹೊರಹೊಮ್ಮಿದೆ. ಜಿಲ್ಲೆಯ ಹಾರ್ಡ್‌ವೇರ್‌ ಇಂಜಿನಿಯರ್‌ ಆಗಿದ್ದ ನಂದಲಾ ಸಾಯಿಕಿರಣ್‌, ಯುಪಿಎಸ್‌ಸಿ ಸಿವಿಲ್‌ ಸರ್ವೀಸ್‌ ಪರೀಕ್ಷೆಯಲ್ಲಿ ಆನ್‌ ಇಂಡಿಯಾ 27ನೇ ಸ್ಥಾನ ಪಡೆದುಕೊಂಡಿದ್ದಾರೆ. ಸಾಯಿಕಿರಣ್‌ ತಮ್ಮ 2ನೇ ಯತ್ನದಲ್ಲಿಯೇ ಯುಪಿಎಸ್‌ಸಿ ಕ್ಲಿಯರ್‌ ಮಾಡಿರುವುದು ವಿಶೇಷವಾಗಿದೆ.  ರಾಮಡುಗು ಮಂಡಲದ ವೆಲಿಚಲದವರಾದ ಸಾಯಿಕಿರಣ್ ಅವರು ಕರೀಂನಗರದ ತೇಜ ವಸತಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿದರೆ. 2012 ರಲ್ಲಿ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.

ಆ ಬಳಿಕ ಕರೀಂನಗರದ ಟ್ರಿನಿಟಿ ಜೂನಿಯರ್ ಕಾಲೇಜಿನಲ್ಲಿ ತಮ್ಮ ಇಂಟರ್‌ಮಿಡಿಯೇಟ್‌ ಅಭ್ಯಾಸ ಮಾಡಿದ್ದ ಸಾಯಿಕಿರಣ್‌, ವಾರಂಗಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ನಲ್ಲಿ ಬಿ.ಟೆಕ್ (ಇಸಿಇ) ಪದವಿ ಪಡೆದಿದ್ದರು. ಆ ಬಳಿಕ ಹೈದರಾಬಾದ್‌ನಲ್ಲಿ ಕ್ವಾಲ್‌ಕಾಮ್‌ನಲ್ಲಿ ಹಾರ್ಡ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಇವರು, ಮೇ 2021 ರಲ್ಲಿ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿಯನ್ನು ಪ್ರಾರಂಭಿಸಿದರು.

ವೀಕೆಂಡ್‌ ಹಾಗೂ ರಜಾ ದಿನಗಳಲ್ಲಿ ಸಿಕ್ಕ ಸಮಯವನ್ನು ಸಾಯಿಕಿರಣ್‌ ಉಪಯೋಗಿಸಿಕೊಂಡದ್ದು ಮಾತ್ರವಲ್ಲದೆ, ಯಾವುದೇ ಕೋಚಿಂಗ್‌ ಇಲ್ಲದೇ 27ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಮಗೆ ಅನುಮಾನವಿದ್ದ ವಿಚಾರಗಳಿಗಾಗಿ ಯೂಟ್ಯೂಬ್‌ ಹಾಗೂ ಇತರ ಆನ್‌ಲೈನ್‌ ವೆಬ್‌ಸೈಟ್‌ಗಳೊಂದಿಗೆ ಪುಸ್ತಕಗಳನ್ನು ಓದುತ್ತಿದ್ದೆ ಎಂದು ತಿಳಿಸಿದ್ದಾರೆ.

12 ಪ್ರಯತ್ನದ ಬಳಿಕವೂ ಕ್ಲಿಯರ್‌ ಆಗದ ಯುಪಿಎಸ್‌ಸಿ, 'ಜೀವನದ ಮತ್ತೊಂದು ಹೆಸರೇ ಸಂಘರ್ಷ..' ಎಂದು ಟ್ವೀಟ್‌!

ನೇಕಾರ ಕಾಂತ ರಾವ್ ಮತ್ತು ಬೀಡಿ ಕಟ್ಟುವ ಲಕ್ಷ್ಮಿ ದಂಪತಿಯ ಮಗನಾದ ಸಾಯಿಕಿರಣ್ 2016ರಲ್ಲಿ ತನ್ನ ತಂದೆ ಕಾಂತ ರಾವ್ ಅವರನ್ನು ಕ್ಯಾನ್ಸರ್‌ ಕಾರಣದಿಂದಾಗಿ ಕಳೆದುಕೊಂಡಿದ್ದರು. ಈ ಹಂತದಲ್ಲಿ ಮಗನ ವಿದ್ಯಾಭ್ಯಾಸಕ್ಕೆ ಬೆನ್ನೆಲುಬಾಗಿ ನಿಂತವರು ಅವರ ತಾಯಿ ಲಕ್ಷ್ಮೀ. ಬೀಡಿ ಕಟ್ಟುವ ಮೂಲಕವೇ ಮಗನನ್ನು ಈಗ ಐಎಎಸ್‌ ಅಧಿಕಾರಿಯನ್ನಾಗಿ ಮಾಡಿದ್ದಾರೆ. ಸಾಯಿಕಿರಣ್‌ ಅವರ ಸಹೋದರಿ ರಾಜಣ್ಣ-ಸಿರ್ಸಿಲ್ಲಾ ಜಿಲ್ಲೆಯ ಬೋಯಿನಪಲ್ಲಿಯಲ್ಲಿ ಗ್ರಾಮೀಣ ನೀರು ಸರಬರಾಜು ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಯುಪಿಎಸ್‌ಸಿಯಲ್ಲಿ 3 ಬಾರಿ ಫೇಲಾಗಿದ್ದ ವಿಜೇತಾ ರಾಜ್ಯಕ್ಕೆ ಟಾಪರ್‌: ದೇಶಕ್ಕೆ 100ನೇ ರ್‍ಯಾಂಕ್‌

Latest Videos
Follow Us:
Download App:
  • android
  • ios