ಬೆಂಗಳೂರು (ಫೆ.08): ಬೆಂಗಳೂರು ವಿಶ್ವವಿದ್ಯಾಲಯ ಸಂಯೋಜಿತ ಕಾಲೇಜುಗಳಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲಾಗುತ್ತಿದೆ. 

 ಎಂಬಿಎ ಸ್ನಾತಕೋತ್ತರ ಕೋರ್ಸ್‌ಗೆ 2004-2005ರಿಂದ ಪ್ರವೇಶಾತಿ ಪಡೆದು ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುನಃ 3ನೇ ಸೆಮಿಸ್ಟರ್‌ ಪರೀಕ್ಷೆ ಬರೆಯಲು ವಿವಿ ಅವಕಾಶ ಕಲ್ಪಿಸಿದೆ.

ಕೆ-ಸೆಟ್‌ ಪರೀಕ್ಷೆಗೆ ದಿನಾಂಕ ಪ್ರಕಟ: ಇಲ್ಲಿದೆ ಕೊನೆ ದಿನಾಂಕ, ಶುಲ್ಕದ ಮಾಹಿತಿ ...

ಆಸಕ್ತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಶುಲ್ಕ ಪಾವತಿಸಿ ಫೆ.20ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ www.bangloreuniversity.ac.in ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. ಈ ಮೂಲಕ ಫೇಲಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಲಭಿಸಿದಂತಾಗಿದೆ.