ಕೆ-ಸೆಟ್‌ ಪರೀಕ್ಷೆಗೆ ದಿನಾಂಕ ಪ್ರಕಟ: ಇಲ್ಲಿದೆ ಕೊನೆ ದಿನಾಂಕ, ಶುಲ್ಕದ ಮಾಹಿತಿ

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ ಮೈಸೂರು ವಿಶ್ವವಿದ್ಯಾನಿಲಯ ದಿನಾಂಕ ಪ್ರಕಟಿಸಿದೆ. ಅರ್ಜಿ ಶುಲ್ಕ, ಕೊನೆ ದಿನಾಂಕ ಸೇರಿದಂತೆ ಇತರೆ ಮಾಹಿತಿ ಈ ಕೆಳಗಿನಂತಿದೆ.

Mysuru University Announces kset exam on april 11 rbj

ಮೈಸೂರು, (ಫೆ.07): ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು (ಕೆ-ಸೆಟ್) ಏ.11ರಂದು ನಡೆಸುವುದಾಗಿ ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿದೆ.

ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ನಲ್ಲಿ (https://kset.uni-mysore.ac.in) ಇದೇ 8ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಮಾರ್ಚ್‌ 7 ಅರ್ಜಿ ಸಲ್ಲಿಸಲು ಕೊನೆ ದಿನಾಂಕ.  250ರೂ. ದಂಡದೊಂದಿಗೆ ಮಾರ್ಚ್ 13ರವರೆಗೂ ಅರ್ಜಿ ಸಲ್ಲಿಸಬಹುದು.

ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ತುಮಕೂರಿನಲ್ಲಿರುವ ನೋಡೆಲ್‌ ಕೇಂದ್ರಗಳಲ್ಲಿ 41 ವಿಷಯದಲ್ಲಿ ಪರೀಕ್ಷೆ ನಡೆಯಲಿದೆ.

ಮುಂದೂಡಲಾಗಿದ್ದ FDA ಪರೀಕ್ಷೆಗೆ ಹೊಸ ದಿನಾಂಕ ಪ್ರಕಟ

ಅರ್ಜಿ ಶುಲ್ಕ: ಸಾಮಾನ್ಯ ವರ್ಗದವರಿಗೆ  1,150ರೂ, ಪ್ರವರ್ಗ- 2 ಎ, 2 ಬಿ, 3 ಎ, 3 ಬಿ ವರ್ಗಕ್ಕೆ  950 ರೂ. ಎಸ್‌ಸಿ-ಎಸ್‌ಟಿ, ಪ್ರವರ್ಗ -1, ಅಂಗವಿಕಲರಿಗೆ 650ರೂ. ಶುಲ್ಕ ನಿಗದಿಪಡಿಸಲಾಗಿದೆ.

ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡ ಅಭ್ಯರ್ಥಿಗಳು ಸ್ಟೇಟ್‌ಬ್ಯಾಂಕ್‌ನ ಎಂಒಪಿಎಸ್‌ ಮೂಲಕವೂ ನಗದು ಪಾವತಿಸಬಹುದು. ನೇರವಾಗಿ ನಗದನ್ನು ಪಾವತಿಸಲು ಚಲನ್ ಡೌನ್‌ಲೋಡ್ ಮಾಡಿಕೊಂಡು, ಯಾವುದೇ ಎಸ್‌ಬಿಐ ಶಾಖೆಗಳಲ್ಲಿ ತುಂಬಬೇಕು.

ಶುಲ್ಕ ಪಾವತಿಸಿದ ಎರಡು ದಿನದ ಬಳಿಕ ಅರ್ಜಿ ನಮೂನೆ, ಪ್ರವೇಶ ಪತ್ರ, ಹಾಜರಾತಿ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. 
ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ತಮ್ಮಲ್ಲಿಯೇ ಇಟ್ಟುಕೊಂಡು, ಅರ್ಜಿಯ ಪ್ರತಿ ಮತ್ತು ಹಾಜರಾತಿ ಪ್ರತಿಗಳನ್ನು ಮಾತ್ರ ಎ 4 ಅಳತೆಯ ಲಕೋಟೆಯಲ್ಲಿ 'ಕೆ-ಸೆಟ್ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2021' ಎಂದು ನಮೂದಿಸಿ, ತಾವು ಆಯ್ಕೆ ಮಾಡಿಕೊಂಡ ಪರೀಕ್ಷಾ ಕೇಂದ್ರದ ನೋಡೆಲ್ ಅಧಿಕಾರಿಗೆ ಮಾ.15ರೊಳಗೆ ಸಲ್ಲಿಸಬೇಕು ಎಂದು ಕೆ-ಸೆಟ್ ಸಂಯೋಜನಾಧಿಕಾರಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios