ಶಾಲಾ ಚುನಾವಣೆ: ಸಾರ್ವತ್ರಿಕ ಚುನಾವಂತೆ ಇವಿಎಂ ಬಳಸಿ ಗಮನ ಸೆಳೆದ ಬಂಬಲವಾಡ ಗ್ರಾಮದ ಸರ್ಕಾರಿ ಶಾಲೆ ಮಕ್ಕಳು!

: ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಇವಿಎಂ ಬಳಸಿಕೊಂಡು ಸರ್ಕಾರಿ ಶಾಲೆಯ ಪುಟಾಣಿಗಳು ಸೇರಿ 'ಶಾಲಾ‌ ಸಂಸತ್‌ ಚುನಾವಣೆ'  ನಡೆಸುವ ಮೂಲಕ ಶಾಲೆಯ ಪುಟಾಣಿ ಗಮನ ಸೆಳೆದಿದ್ದಾರೆ.

Bambalawada Government School conducted school election using EVM in chikkodi belgum rav

ಚಿಕ್ಕೋಡಿ (ಜೂ.23) : ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಇವಿಎಂ ಬಳಸಿಕೊಂಡು ಸರ್ಕಾರಿ ಶಾಲೆಯ ಪುಟಾಣಿಗಳು ಸೇರಿ 'ಶಾಲಾ‌ ಸಂಸತ್‌ ಚುನಾವಣೆ'  ನಡೆಸುವ ಮೂಲಕ ಶಾಲೆಯ ಪುಟಾಣಿ ಗಮನ ಸೆಳೆದಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದ ಸರ್ಕಾರಿ ಶಾಲೆಯಲ್ಲಿ 2023-24ನೇ‌ ಸಾಲಿಗಾಗಿ ಶಾಲಾ‌‌ ಸಂಸತ್‌ ಆಡಳಿತ‌‌‌ ಮಂಡಳಿಗೆ ಅಧಿಕೃತ ಚುನಾವಣೆ ನಡೆಸಿದರು. ಚುನಾವಣೆಗೆ ಜೂನ್ 16ರಂದು ಅಧಿಸೂಚನೆ ಪ್ರಕಟಿಸಲಾಗಿತ್ತು. ಜೂನ್ 17 ರಂದು ನಾಮಪತ್ರ ಸಲ್ಲಿಕೆ, ಅವತ್ತೆ ನಾಮಪತ್ರ ಪರಿಶೀಲನೆ‌‌ ಹಾಗೂ ಹಿಂಪಡೆಯಲು ಕೊನೆ ದಿನವಾಗಿತ್ತು. 

ಜೂನ್ 17& 18 ರಂದು ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಬಹಿರಂಗ ಪ್ರಚಾರಕ್ಕೆ ಅವಕಾಶ.  ವಿದ್ಯಾರ್ಥಿಗಳ ಮನೆಮನೆಗೆ ತೆರಳಿ ಪ್ರಚಾರ ಕೈಗೊಂಡಿದ್ದ ವಿದ್ಯಾರ್ಥಿಗಳು. ಜೂನ್ 19ರಂದು ಮಧ್ಯಾಹ್ನ 2:30 ರಿಂದ 4:30 ರವರೆಗೆ  ಮತದಾನ ನಡೆಯಿತು. ಸರದಿ ಸಾಲಿನಲ್ಲಿ ಬಂದು ಮತದಾನ ಮಾಡಿದ ವಿದ್ಯಾರ್ಥಿಗಳು. ಸಾರ್ವತ್ರಿಕ ಚುನಾವಣೆ ಮಾದರಿಯಲ್ಲೆ ಚುನಾವಣಾಧಿಕಾರಿ‌  ಹಾಗೂ ಸಿಬ್ಬಂದಿ ನೇಮಕ.  ಶಾಲಾ‌ ಸಿಬ್ಬಂದಿಗಳ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಬಂಬಲವಾಡ ಗ್ರಾಮಸ್ಥರು..

9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೂ ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ಶಿಕ್ಷಣ ಸಚಿವರ ಮನವಿ

Latest Videos
Follow Us:
Download App:
  • android
  • ios