ಪದವಿ ಪೂರ್ವ ಕಾಲೇಜು ಪ್ರವೇಶ ಪ್ರಕ್ರಿಯೆ ವೇಳಾಪಟ್ಟಿಪರಿಷ್ಕರಣೆ ವಿದ್ಯಾರ್ಥಿಗಳು ಯಾವುದೇ ದಂಡ ಶುಲ್ಕವಿಲ್ಲದೆ ಪ್ರವೇಶ ಪಡೆಯಲು ಆ.28 ಕೊನೆಯ ದಿನ

ಬೆಂಗಳೂರು (ಆ.15): ಪದವಿ ಪೂರ್ವ ಕಾಲೇಜು ಪ್ರವೇಶ ಪ್ರಕ್ರಿಯೆ ವೇಳಾಪಟ್ಟಿಪರಿಷ್ಕರಿಸಲಾಗಿದ್ದು, ವಿದ್ಯಾರ್ಥಿಗಳು ಯಾವುದೇ ದಂಡ ಶುಲ್ಕವಿಲ್ಲದೆ ಪ್ರವೇಶ ಪಡೆಯಲು ಆ.28 ಕೊನೆಯ ದಿನವಾಗಿದೆ. 

ಈ ಮೊದಲು ಇದನ್ನು ಆ.31ರವರೆಗೆ ನೀಡಲಾಗಿತ್ತು. 670 ರು. ದಂಡ ಶುಲ್ಕದೊಂದಿಗೆ ಸೆ.1ರಿಂದ ಸೆ.11ರವರೆಗೆ ಹಾಗೂ ವಿಶೇಷ ದಂಡ ಶುಲ್ಕ 2890 ರು. ಪಾವತಿಸಿ ಸೆ.13ರಿಂದ 25ರವರೆ ಪ್ರವೇಶ ಪಡೆಯಬಹುದು ಎಂದು ತಿಳಿಸಿದೆ.

ದ್ವಿತೀಯ ಪಿಯು ರಿಸಲ್ಟ್‌ ತಿರಸ್ಕರಿಸಿದ ಅಭ್ಯರ್ಥಿಗಳಿಗೆ ಪರೀಕ್ಷೆ : ಯಾವಾಗ ನಡೆಯಲಿದೆ?

ಆ.16ರಿಂದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ ಆರಂಭಿಸಲು ಕೂಡ ಇಲಾಖೆ ಸೂಚಿಸಿದೆ. 

ಇನ್ನು ರಾಜ್ಯದಲ್ಲಿ ಆಗಸ್ಟ್ 23ರಿಂದಲೇ ಕಾಲೇಜು ಆರಂಭವಾಗಲಿದೆ. ಆನ್‌ಲೈನ್ ತರಗತಿಗಳು ನಡೆಯುತ್ತಿದ್ದು ಆಫ್ಲೈನ್‌ ತರಗತಿಗಳು ಶುರುವಾಗುತ್ತಿದೆ.