ಚಾಮರಾಜನಗರ: ಕೇಂದ್ರಿಯ ವಿದ್ಯಾಲಯದ ಇಬ್ಬರಿಗೆ ಕೊರೋನಾ, ವಿದ್ಯಾರ್ಥಿಗಳಲ್ಲಿ ಆತಂಕ..!
ಇಬ್ಬರು ಭೋದಕೇತರ ಸಿಬ್ಬಂದಿ ಹಾಗೂ ಅವರಿಬ್ಬರ ಸಂಪರ್ಕಿತರಿಗೆ ಕೋವಿಡ್ ಸೋಂಕು ದೃಢ|ಚಾಮರಾಜನಗರ ಕೇಂದ್ರೀಯ ವಿದ್ಯಾಲಯದಲ್ಲಿ 2021-22 ನೇ ಸಾಲಿನ ಶೈಕ್ಷಣಿಕ ಶಾಲಾ ದಾಖಲಾತಿ ಆರಂಭ| ಮಕ್ಕಳನ್ನು ದಾಖಲಾತಿ ಮಾಡಿದ ಪೋಷಕರಲ್ಲಿ ಆವರಿಸಿದ ಭೀತಿ|
ಚಾಮರಾಜನಗರ(ಏ.14): ಕೇಂದ್ರಿಯ ವಿದ್ಯಾಲಯದ ಇಬ್ಬರು ಬೋಧಕೇತರ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದ ಪರಿಣಾಮ ಶಾಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ತಾಲೂಕಿನ ಮಾದಪುರದಲ್ಲಿ ಇಂದು(ಬುಧವಾರ) ನಡೆದಿದೆ.
ಇಬ್ಬರು ಭೋದಕೇತರ ಸಿಬ್ಬಂದಿ ಹಾಗೂ ಅವರಿಬ್ಬರ ಸಂಪರ್ಕಿತರಿಗೆ ಇಂದು ಕೋವಿಡ್ ಸೋಂಕು ದೃಢಪಟ್ಟಿದೆ. SSLC ವಿದ್ಯಾರ್ಥಿಗಳಷ್ಟೇ ಶಾಲೆಗೆ ತೆರಳುತ್ತಿದ್ದರು ಹಾಗೂ ಶಾಲಾ ಪ್ರವೇಶಾತಿಗೆ ನಿತ್ಯ ಹತ್ತಾರು ಮಂದಿ ಪಾಲಕರು ಶಾಲೆಗೆ ಎಡತಾಕುತ್ತಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ.
CBSE: 10ನೇ ತರಗತಿ ಪರೀಕ್ಷೆ ರದ್ದು, 12ನೇ ತರಗತಿ ಪರೀಕ್ಷೆ ಮುಂದೂಡಿಕೆ!
ಚಾಮರಾಜನಗರ ಕೇಂದ್ರೀಯ ವಿದ್ಯಾಲಯದಲ್ಲಿ 2021-22 ನೇ ಸಾಲಿನ ಶೈಕ್ಷಣಿಕ ಶಾಲಾ ದಾಖಲಾತಿ ಆರಂಭವಾಗಿದ್ದು, ಮಕ್ಕಳನ್ನು ದಾಖಲಾತಿ ಮಾಡಿದ ಪೋಷಕರಲ್ಲಿ ಇದೀಗ ಭೀತಿ ಆವರಿಸಿದೆ. ಇನ್ನು, ಶಾಲೆಗೆ ತೆರಳುತ್ತಿದ್ದ 10 ನೇ ತರಗತಿ ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ.