ಶಿಕ್ಷಣ ಸಚಿವರೇ ಇಲ್ಲಿ ನೋಡಿ; ಎಪಿಎಂಸಿ ಗೋದಾಮಿನಲ್ಲಿ ನಡೆಯುತ್ತಿದೆ ಕನ್ನಡ ಶಾಲೆ!
ಭತ್ತದ ರಾಶಿಗಳ ನಡುವೆ ವಿಧ್ಯಾಭ್ಯಾಸ.. ಭತ್ತದ ರಾಶಿಗಳಿಂದ ಬರುವ ಧೂಳು, ಕಸ, ಜನ ಜಂಗುಳಿ ಗದ್ದಲದ ನಡುವೆ ಊಟ, ಆಟ, ಪಾಟ ಕಲಿಯುತ್ತಿರುವ ಈ ಮಕ್ಕಳ ಪಾಡು ದೇವರಿಗೇ ಪ್ರೀತಿ. ಇಷ್ಟು ಸಾಲದ್ದಕ್ಕೆ ಸುತ್ತಲು ನಿರಂತರ ದನಕರಗಳ ಓಡಾಟ, ಸ್ವಚ್ಚತೆ ಸಂಪೂರ್ಣ ಮರೀಚಿಕೆಯಾಗಿದೆ. ರಾತ್ರಿ ವೇಳೆ ಕರೆಂಟ್ ಹೋದರೆ ಪರ್ಯಾಯ ವ್ಯವಸ್ಥೆ ಇಲ್ಲ..ಕತ್ತಲಲ್ಲೆ ಮಕ್ಕಳ ಊಟ ಮತ್ತು ಕಲಿಕೆ. ರಾತ್ರಿವೇಳೆ ಸುರಕ್ಷತೆ ಇಲ್ಲದಂತಾಗಿದೆ.
ಬಳ್ಳಾರಿ (ಡಿ.17): ಕಳೆದ ವಾರ ಕುರುಗೋಡು ತಾಲೂಕಿನ ಸಿನಿಮಾ ಟಾಕೀಸ್ ನಲ್ಲಿ ವಿದ್ಯಾರ್ಥಿಗಳ ವಸತಿ ಶಾಲೆ ಇದ್ದ ಬಗ್ಗೆ ವರದಿ ನೋಡಿದ್ರಿ. ಇದೀಗ ಸಿರುಗುಪ್ಪದಲ್ಲೂ ಅಂತಹದ್ದೇ ಶಾಲೆ ನೋಡಬೇಕಾಗಿ ಬಂದಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಂತಿದೆ ಈ ಶಾಲೆ. ಒಂದೆಡೆ ಶಿಕ್ಷಣ ಸಚಿವರು ಉತ್ತಮ ಶಿಕ್ಷಣ ಕೊಡಬೇಕು, ಉತ್ತಮ ಶಿಕ್ಷಣ ಕೊಡುವುದು ದೇವರ ಕೆಲಸಕ್ಕೆ ಸಮಾನ ಎಂದು ಬಡಬಡಿಸುತ್ತಿದ್ದಾರೆ. ಇತ್ತ ಕನಿಷ್ಟ ಶಾಲೆ ಮಕ್ಕಳಿಗೆ ಸುಸಜ್ಜಿತ ಕಟ್ಟಡದೊಳಗೆ ಊಟ ವಸತಿ, ಪಾಠ ಇಲ್ಲದಂತಾಗಿದೆ.
ಎಪಿಎಂಸಿ ಗೋದಾಮಿನಲ್ಲಿ ನಡೆಯುತ್ತಿದೆ ಕರೂರು ಗ್ರಾಮದ ಅಂಬೇಡ್ಕರ್ ವಸತಿ ಶಾಲೆ. ಅತ್ತ ಭತ್ತದ ರಾಶಿ ಇತ್ತ ವಿದ್ಯಾರ್ಥಿಗಳು ಆಟ. ಪಾಠ. ಹೊಸ ಕಟ್ಟಡ ನಿರ್ಮಾಣವಾಗಿದ್ರೂ ಸಣ್ಣಪುಟ್ಟ ಕೆಲಸದ ನೆಪವೊಡ್ಡಿ ಉದ್ಘಾಟನೆಗೆ ಮೀನಾಮೇಷ ಎಣಿಸುತ್ತಿರುವ ಅಧಿಕಾರಿಗಳು, ಜನಪ್ರತಿನಿಧಿಗಳು. ಕಳೆದ 7 ವರ್ಷಗಳಿಂದ ಗೋದಾಮಿನಲ್ಲೇ ತರಗತಿ ನಡೆಸಿಕೊಂಡು ಬಂದಿರುವ ಸಿಬ್ಬಂದಿ 140 ಬಾಲಕರು ಮತ್ತು 90 ಬಾಲಕಿಯರು ಸೇರಿದಂತೆ ಒಟ್ಟು 230 ವಿಧ್ಯಾರ್ಥಿಗಳನ್ನು ಹೊಂದಿರುವ ಈ ವಸತಿ ಶಾಲೆಯಲ್ಲಿ, ಕೇವಲ ಮೂರು ಶೌಚಾಲಯಗಳಿವೆ. ಹೀಗಾಗಿ ಶೌಚಕ್ಕೆ ಬಯಲು ಪ್ರದೇಶ ಆಶ್ರಯಿಸಿರುವ ಶಾಲೆ ಮಕ್ಕಳು. ಇಡೀ ವಸತಿ ಶಾಲೆಯಲ್ಲಿ ಮಕ್ಕಳು ಮುಖ ತೊಳೆಯಲು, ಸ್ನಾನ ಮಾಡಲು, ಬಟ್ಟೆತೊಳೆಯಲು ಕೇವಲ ಎರಡೇ ಎರಡು ನಲ್ಲಿ ನೀರು ಇವೆ. ಅದರಲ್ಲೇ ಅಷ್ಟು ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಸ್ನಾನ ಮಾಡಿಕೊಂಡು ಶಾಲೆಗೆ ಹೋಗುವುಕ್ಕೆ ಹರಸಾಹಸ ಪಡುತ್ತಿರುವ ವಿದ್ಯಾರ್ಥಿಗಳು.
ಬಳ್ಳಾರಿ: ಸಿನಿಮಾ ಟಾಕೀಸ್‌ನಲ್ಲೇ ನಡೀತಿದೆ ವಸತಿ ಶಾಲೆ, ಬಾಲಕಿಯರ ವಸತಿ ಶಾಲೆಯ ದುರಂತ ಕಥೆ