ನೀಟ್‌ ರದ್ದು ಮಾಡಿ 12ನೇ ತರಗತಿ ಅಂಕ ಆಧರಿಸಿ ವೈದ್ಯ ಸೀಟು ಕೊಡಿ: ತಮಿಳುನಾಡು ಸರ್ಕಾರಕ್ಕೆ ಆಯೋಗದ ವರದಿ

ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕಾಗಿ ನಡೆಸಲಾಗುವ ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (ನೀಟ್‌)ಯನ್ನು ಕಾನೂನು ಅಥವಾ ಶಾಸನ ರಚನೆ ಪ್ರಕ್ರಿಯೆಗಳ ಮೂಲಕ ರದ್ದುಪಡಿಸುವಂತೆ ತಮಿಳುನಾಡು ಸರ್ಕಾರಕ್ಕೆ ಆಯೋಗವೊಂದು ಶಿಫಾರಸು ಮಾಡಿದೆ.

Abolish NEET Give doctor seat based on 12th class marks Commission Reported to Tamil Nadu Govt akb

ಪಿಟಿಐ ಚೆನ್ನೈ: ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕಾಗಿ ನಡೆಸಲಾಗುವ ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (ನೀಟ್‌)ಯನ್ನು ಕಾನೂನು ಅಥವಾ ಶಾಸನ ರಚನೆ ಪ್ರಕ್ರಿಯೆಗಳ ಮೂಲಕ ರದ್ದುಪಡಿಸುವಂತೆ ತಮಿಳುನಾಡು ಸರ್ಕಾರಕ್ಕೆ ಆಯೋಗವೊಂದು ಶಿಫಾರಸು ಮಾಡಿದೆ. ಮೊದಲ ವರ್ಷದ ವೈದ್ಯಕೀಯ ಕೋರ್ಸ್‌ಗಳಿಗೆ 12ನೇ ತರಗತಿಯ ಅಂಕಗಳನ್ನೇ ಆಧರಿಸಿ ಪ್ರವೇಶಾವಕಾಶ ಕಲ್ಪಿಸುವಂತೆಯೂ ಸಲಹೆ ಮಾಡಿದೆ.

ವಿವಿಧ ಬೋರ್ಡ್‌ಗಳಡಿ ಶಿಕ್ಷಣ ಪಡೆದಿರುವ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳು ಸಿಗುವಂತೆ ಸರ್ಕಾರ ಮಾಡಬೇಕು ಎಂದು ಮದ್ರಾಸ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾ। ಎ.ಕೆ. ರಾಜನ್‌ ನೇತೃತ್ವದ ಅತ್ಯುನ್ನತ ಸಮಿತಿ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ. ತಮಿಳುನಾಡು ಸರ್ಕಾರ ಈ ವರದಿಯನ್ನು ಕನ್ನಡ, ತೆಲುಗು, ಮಲಯಾಳ ಸೇರಿದಂತೆ ಪ್ರಾದೇಶಿಕ ಭಾಷೆಗಳಿಗೂ ತರ್ಜುಮೆಗೊಳಿಸಿದೆ. ಅಲ್ಲದೆ ಹಲವು ರಾಜ್ಯ ಸರ್ಕಾರಗಳ ಜತೆಗೆ ವರದಿಯನ್ನು ಹಂಚಿಕೊಂಡಿದ್ದು, ನೀಟ್‌ ಬಡ ವಿದ್ಯಾರ್ಥಿಗಳ ವಿರೋಧಿ ಹಾಗೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದಾಗಿದೆ ಎಂಬ ತನ್ನ ವಾದ ಸತ್ಯ ಎಂದು ಸಾಬೀತುಪಡಿಸಲು ಯತ್ನಿಸಿದೆ.

ನೀಟ್‌ 2024 ಪರೀಕ್ಷೆ ಫಲಿತಾಂಶ ಪ್ರಕಟ, ಕರ್ನಾಟಕದ 6 ವಿದ್ಯಾರ್ಥಿಗಳು ಟಾಪರ್ಸ್

ತಮಿಳುನಾಡಿನಲ್ಲಿ 2021ರಲ್ಲಿ ಅಧಿಕಾರಕ್ಕೆ ಬಂದ ಎಂ.ಕೆ. ಸ್ಟಾಲಿನ್‌ ನೇತೃತ್ವದ ಡಿಎಂಕೆ ಸರ್ಕಾರ, ನೀಟ್‌ ಆಧರಿತ ಪ್ರವೇಶ ಪರೀಕ್ಷೆಯ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ನ್ಯಾ। ಎ.ಕೆ. ರಾಜನ್ ನೇತೃತ್ವದಲ್ಲಿ ತಜ್ಞರ ಆಯೋಗವನ್ನು ರಚನೆ ಮಾಡಿತ್ತು. ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರ ಅಭಿಪ್ರಾಯದ ಜತೆಗೆ ವಿಸ್ತೃತ ದತ್ತಾಂಶಗಳನ್ನು ವಿಶ್ಲೇಷಣೆಗೊಳಪಡಿಸಿ ಆಯೋಗ ವರದಿ ಸಿದ್ಧಪಡಿಸಿದೆ. ಈ ಕನ್ನಡ ಸೇರಿ ವಿವಿಧ ಭಾಷೆಯಲ್ಲಿರುವ ವರದಿಯನ್ನು ಸ್ಟಾಲಿನ್‌ ಅವರು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನೀಟ್ ಪ್ರವೇಶ ಪರೀಕ್ಷೆ: ಎಕ್ಸ್‌ಪರ್ಟ್‌ನ ಅರ್ಜುನ್‌ಗೆ ಪ್ರಥಮ ರ್ಯಾಂಕ್‌

Latest Videos
Follow Us:
Download App:
  • android
  • ios