10ನೇ ತರಗತಿಯ ಎಲ್ಲಾ 6 ಸಬ್ಜೆಕ್ಟ್‌ನಲ್ಲಿ 35 ಪಡೆದ ಮಗ, ಜಸ್ಟ್ ಪಾಸ್‌ಗೆ ಹೆತ್ತವರ ಮುಗಿಲು ಮುಟ್ಟಿದ ಸಂಭ್ರಮ!

ಥಾಣೆಯ  ವಿದ್ಯಾರ್ಥಿಯೊಬ್ಬ 10 ನೇ ತರಗತಿಯ ಎಲ್ಲಾ ಆರು ವಿಷಯಗಳಲ್ಲಿ 35 ಅಂಕಗಳನ್ನು ಪಡೆದು ಒಟ್ಟು ಶೇ. 35 ಗಳಿಸುವ ಮೂಲಕ ಕನಿಷ್ಠ ಉತ್ತೀರ್ಣ ಶೇಕಡಾವಾರು ಪಡೆದ ವಿದ್ಯಾರ್ಥಿಯಾಗಿದ್ದು, ಹೆತ್ತವರ ಸಂಭ್ರಮ ಮುಗಿಲು ಮುಟ್ಟಿದೆ.

A perfect 35 in all six subjects Thane teen and family celebrate his clearing of exam kannada news gow

ಥಾಣೆ: ಹೆಚ್ಚು ಅಂಕ ಪಡೆದವರು ತಮ್ಮ ಶಾಲೆ ಮತ್ತು ಹೆತ್ತವರು ಹೆಮ್ಮೆ ಪಡುವ ಸಮಯದಲ್ಲಿ, ಥಾಣೆಯ ಮರಾಠಿ ಮಾಧ್ಯಮ ಶಾಲೆಯ ವಿದ್ಯಾರ್ಥಿ ವಿಶಾಲ್ ಕರಾಡ್ ಅವರು ತಮ್ಮ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಎಲ್ಲಾ ಆರು ವಿಷಯಗಳಲ್ಲಿ 35 ಅಂಕಗಳನ್ನು ಪಡೆದು ಒಟ್ಟು ಶೇ. 35 ಗಳಿಸುವ ಮೂಲಕ ಕನಿಷ್ಠ ಉತ್ತೀರ್ಣ ಶೇಕಡಾವಾರು ಪಡೆದ ವಿದ್ಯಾರ್ಥಿಯಾಗಿ ಗಮನ ಸೆಳೆದಿದ್ದಾನೆ. ಮಾತ್ರವಲ್ಲ ಈತನ ಹೆತ್ತವರ ಸಂಭ್ರಮ ಮುಗಿಲು ಮುಟ್ಟಿದೆ.

ಥಾಣೆಯ ಉತಲ್ಸರ್‌ನ ಅಂಬೇಡ್ಕರ್ ನಗರದ ಕೊಳೆಗೇರಿಯ (Ambedkar Nagar slum) ನಿವಾಸಿಯಾಗಿರುವ ಈತನ ಮನೆ ಮುಂದೆ ಮಾಧ್ಯಮಗಳು  ನಿಂತಾಗ ನನಗೆ ಬೋರ್ಡ್ ಪರೀಕ್ಷೆಗಳಲ್ಲಿ (board exams) ತೇರ್ಗಡೆಯಾಗುವ ನಿರೀಕ್ಷೆಯೇ ಇರಲಿಲ್ಲ ಎಂದು ಹೇಳಿದ್ದಾನೆ. ಆದರೆ ಈ ರೀತಿ ವಿಶೇಷವಾಗಿ ಎಲ್ಲಾ ವಿಷಯಗಳಲ್ಲೂ 35 ಅಂಕ ಬಂದಿದೆ ಎಂದು ಖುಷಿಯಾಗಿದೆ ಎಂದಿದ್ದಾನೆ.

ಪಠ್ಯಪುಸ್ತಕ ಪುನರ್‌ ಪರಿಷ್ಕರಣೆ: ಬರಗೂರು ರಾಮಚಂದ್ರಪ್ಪ ಜತೆ ಸಚಿವ ಮಧು ಬಂಗಾರಪ್ಪ ಚರ್ಚೆ

ಕಡುಬಡತದಲ್ಲಿ ಇರುವ ವಿಶಾಲ್  ಕುಟುಂಬ ಆತನ ಹತ್ತನೇ ತರಗತಿಯ ಶೈಕ್ಷಣಿಕ (Education) ವರ್ಷಕ್ಕೆ ಮುನ್ನ  ಶಿವೈ ನಗರದಿಂದ ಉತಲ್ಸರ್‌ಗೆ ಸ್ಥಳಾಂತರಗೊಂಡಿತ್ತು. ಮನೆ ನಡೆಸಲು ಈತನ ತಂದೆ ಅಶೋಕ್ ಆಟೋರಿಕ್ಷಾ ಚಾಲಕರಾಗಿದ್ದಾರೆ. ವಿಶಾಲ್  ತಂದೆ ಅಶೋಕ್ ಅವರು ತಮ್ಮ ಮಗ ಶಾಲೆ ಮತ್ತು ಮನೆಗೆ ದೂರ ಪ್ರಯಾಣ ಬೇಡ ಜೊತೆಗೆ  ಅದಕ್ಕಾಗಿ ಹೆಚ್ಚುವರಿ ಖರ್ಚು ಕೂಡ ಬೇಡ ಎಂದು ಮನೆ ಬದಲಿಸಿದ್ದರು.  ವಿಶಾಲ್ ತಾಯಿ ಹುಟ್ಟುತ್ತಲೇ ಅಂಗವೈಕಲ್ಯ ಹೊಂದಿದ್ದು, ಸಹ ಸೇವಕಿಯಾಗಿ ಕೆಲಸ ಮಾಡುತ್ತಾರೆ.

ನನ್ನ ಹೆತ್ತವರ ನಿರಂತರ ಪ್ರೋತ್ಸಾಹದಿಂದ ನಾನು ಪರೀಕ್ಷೆಯಲ್ಲಿ ಒಂದೇ ಬಾರಿಗೆ ಎಲ್ಲಾ ವಿಷಯದಲ್ಲಿ ತೇರ್ಗಡೆಯಾಗಲು ಸಾಧ್ಯವಾಯಿತು ಎಂದು ನಾನು ಭಾವಿಸುತ್ತೇನೆ ಎಂದು ವಿಶಾಲ್ ಹೇಳಿದ್ದಾನೆ.

ಚಕ್ರತೀರ್ಥ ಸಿದ್ಧಪಡಿಸಿದ್ದ ಪಠ್ಯಕ್ಕೆ ಕೊಕ್, ಬರಗೂರು ಸಮಿತಿ ಪಠ್ಯ ಮರು ಮುದ್ರಣಕ್ಕೆ ಒತ್ತಡ

ನಾನು ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದವನು. ಈಗ, ನಾನು ಮತ್ತಷ್ಟು ಅಧ್ಯಯನ ಮಾಡಲು ಬಯಸುತ್ತೇನೆ ಮತ್ತು ನಮ್ಮ ಜೀವನ ಪರಿಸ್ಥಿತಿಗಳನ್ನು ಸುಧಾರಿಸಲು ಎಂಜಿನಿಯರ್ ಅಥವಾ ಕಲೆಕ್ಟರ್ ಆಗಲು ಬಯಸುತ್ತೇನೆ ಎಂದಿದ್ದಾನೆ. ಮುಂದಿನ ವಿದ್ಯಾಭ್ಯಾಸಕ್ಕಾಗಿ ಕಲಾ ವಿಭಾಗ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದಿದ್ದಾನೆ.

ಶೇ.35ರಷ್ಟು ಅಂಕ ಗಳಿಸಿದ್ದರೂ ಮಗ ಸುದ್ದಿಯಲ್ಲಿರುವುದಕ್ಕೆ ಖುಷಿಯಾಗುತ್ತಿದೆ ಎಂದಿರುವ ಅಶೋಕ್,  ಅನೇಕ ಪೋಷಕರು ತಮ್ಮ ಮಕ್ಕಳು ಹೆಚ್ಚು ಅಂಕಗಳನ್ನು ಪಡೆದಿರುವುದಕ್ಕೆ ಸಂಭ್ರಮಿಸುತ್ತಿರಬಹುದು, ಆದರೆ ನಮಗೆ ಮಗ ವಿಶಾಲ್  ಶೇ.35 ಪಡೆದಿರುವುದು ಹೆಚ್ಚಿನ ಪ್ರಾಮುಖ್ಯತೆಯನ್ನು ತಂದು ಕೊಟ್ಟಿದೆ. ಏಕೆಂದರೆ ಮಗ ಎಸ್‌ಎಸ್‌ಸಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವ ಮೂಲಕ ನಮಗೆ ಹೆಮ್ಮೆ ತಂದಿದ್ದಾನೆ ಎಂದಿದ್ದಾರೆ.

Latest Videos
Follow Us:
Download App:
  • android
  • ios