Udupi: ವಯಸ್ಸಿಗೆ ಡೋಂಟ್ ಕೇರ್ ಹೇಳಿ ಡಾಕ್ಟರೇಟ್ ಪಡೆದ‌ ಮಹಿಳೆ

ಬದುಕಿನ ಮುಸ್ಸಂಜೆ ಹೊತ್ತಲ್ಲಿ ಏನ್ ಮಾಡೋಕೆ ಸಾಧ್ಯ ಎನ್ನುವವರಿಗೆ ಡಾಕ್ಟರೇಟ್ ಪದವಿ ಕೂಡ ಪಡೆಯಬಹುದು ಅಂತ ತೋರಿಸಿಕೊಟ್ಟಿದ್ದಾರೆ 75 ಹರೆಯದ ಉಡುಪಿಯ  ಉಷಾ ಚಡಗ. 

A 75 year old woman Usha Chadaga gets PhD from Mangaluru university gow

ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಮೇ.4): ಕಲಿತು ಮುಗಿಯೋದು ಅಂತಾನೆ ಇಲ್ಲ, ಉತ್ಸಾಹವೊಂದಿದ್ದರೆ ಸಾಕು ಬಾಲ್ಯದಿಂದ ವೃದ್ಧಾಪ್ಯದವರೆಗೂ ಕಲಿಕೆ ನಿರಂತರ! ಸಾಧನೆಗೆ ವಯಸ್ಸಿನ ಹಂಗಿಲ್ಲ ಅನ್ನೋ ಮಾತಿಗೆ ಇಲ್ಲಿದೆ ಒಂದು ಬೆಸ್ಟ್ ಎಕ್ಸಾಂಪಲ್. 60 ವಯಸ್ಸು ಆದರೆ ಮುಗೀತು , ಉದ್ಯೋಗ ದಿಂದಲ್ಲ ಜೀವನಕ್ಕೇ ನಿವೃತ್ತಿ ಬಂದಹಾಗೆ ಮಾಡುವ ಅನೇಕ ಜನರನ್ನು ನೋಡುತ್ತೇವೆ ಆದರೆ ಈ ಮಹಿಳೆ ಹಾಗಲ್ಲ, 75ರ ವಯಸ್ಸು,  ಬದುಕಿನ ಮುಸ್ಸಂಜೆ ಹೊತ್ತಲ್ಲಿ ಏನ್ ಮಾಡೋಕೆ ಸಾಧ್ಯ ಎನ್ನುವವರಿಗೆ ಡಾಕ್ಟರೇಟ್ (Doctorate) ಪದವಿ ಕೂಡ ಪಡೆಯಬಹುದು ಅಂತ ತೋರಿಸಿಕೊಟ್ಟಿದ್ದಾರೆ!

ಉಡುಪಿಯ ಈ ಛಲಗಾರ್ತಿ ಮಹಿಳೆ (Women). ಮೊಮ್ಮಕ್ಕಳ ಜೊತೆಗೆ ಆಟವಾಡುವ ವಯಸ್ಸಿಲ್ಲಿ ಓದಿ ಈ ಸಾಧನೆ ಮಾಡಿದ್ದಾರೆ.  ಡಾಕ್ಟರೇಟ್ ಪದವಿ ಪಡೆದು ಸಂಭ್ರಮಿಸಿದ್ದಾರೆ. ಇನ್ನು ನನ್ನಿಂದ ಏನ್ ಮಾಡೋಕು ಆಗಲ್ಲಪ್ಪ. ಆರಾಮವಾಗಿ ಇದು ಬಿಡುತ್ತೇನೆ ಅನ್ನುವವರೇ ಹೆಚ್ಚು, ಆದ್ರೆ 75 ವಯಸ್ಸಿನ ಈ  ಮಹಿಳೆ, ಛಲದಿಂದ ಓದಿ ಈ ವಯಸ್ಸಿನಲ್ಲೂ ಅಸಾಧ್ಯವಾದುದನ್ನು ಸಾಧ್ಯವಾಗಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

PSI recruitment scam ಪಿಎಸ್‌ಐ ಹುದ್ದೆಗಳ ಭರ್ತಿಗೆ ಎಎಸ್‌ಐಗಳಿಗೆ ಬಡ್ತಿ

ಇಳಿವಯಸ್ಸಲ್ಲಿ  ಡಾಕ್ಟರೇಟ್ (Ph.D) ಪಡೆದು ಸುದ್ದಿಯಲ್ಲಿರುವ ಉಡುಪಿಯ ಕನ್ನರ್ಪಾಡಿ ನಿವಾಸಿ ಉಷಾ ಚಡಗ (Usha Chadaga) ಸುಮಾರು 10 ವರ್ಷಗಳ ಹಿಂದೆ, ತನ್ನ ನಿವೃತ್ತ ಜೀವನದಲ್ಲಿ ಉಡುಪಿಯ ಸಂಸ್ಕ್ರತ ಕಾಲೇಜಿನ ವೇದಾಂತ ವಿಭಾಗಕ್ಕೆ (SMSP Sanskrit College) ಸೇರಿ ಎಂಟು ವರ್ಷ ಕಲಿತು ವೇದಾಂತ ಪಾಸ್ ಮಾಡಿದ್ರು, ನಂತರ ಮೈಸೂರು ಮುಕ್ತ ವಿವಿಯಲ್ಲಿ (Karnataka State Open University) ಎಂಎ ಪರೀಕ್ಷೆ ಪಡೆದು ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಪಡೆದರು. ಬಳಿಕ ಡಾಕ್ಟರೇಟ್ ಪದವಿ ಕನಸು ಕಂಡು, ತನ್ನ ಕನಸನ್ನು ವಿದ್ವಾಂಸ  ದಿ. ಡಾ. ಬನ್ನಂಜೆ ಗೋವಿಂದ ಆಚಾರ್ಯ (Dr. Bannanje Govindacharya) ಬಳಿ ಹಂಚಿಕೊಳ್ಳುತ್ತಾರೆ.

ಆಚಾರ್ಯರು ಇವರಿಗೆ ಉತ್ತಮ ಮಾರ್ಗದರ್ಶನ ಮಾಡ್ತಾರೆ. ಕಟೀಲು  ಶ್ರೀ ದುರ್ಗಾ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ನೋಂದಣಿ ಮಾಡಿ, ಡಾ. ಪದ್ಮನಾಭ ಮರಾಠೆ (Dr Padmanabha Marate) ಅವರ ಮಾರ್ಗದರ್ಶನದಲ್ಲಿ " ಕ್ರಿಟಿಕಲ್ ಅನಾಲಿಸಸ್ ಆಫ್ ಮಧ್ವಾಚಾರ್ಯಸ್ ಯೂನಿಕ್ ಡಾಕ್ಟ್ರಿನ್  ಆಫ್ ಜೀವ ಸ್ವಭಾವ ವಾದ ಆ್ಯಂಡ್ ಸರ್ವ ಶಬ್ದ ವಾಚ್ಯತ್ವ" ಎನ್ನುವ ವಿಷಯದ ಬಗ್ಗೆ ಮಂಡಿಸಿದ ಪ್ರಬಂಧಕ್ಕೆ ಮಂಗಳೂರು ವಿಶ್ವ ವಿದ್ಯಾಲಯ (Mangaluru university) ಡಾಕ್ಟರೇಟ್ ಪದವಿ ನೀಡಿದೆ.

SECR APPRENTICE RECRUITMENT 2022 ರೈಲ್ವೆ ಇಲಾಖೆ ಸೇರ ಬಯಸುವವರಿಗೆ ಸುವರ್ಣಾವಕಾಶ

ಉಷಾ ಚಡಗ ಅವರ ಈ ಸಾಧನೆಗೆ ಪತಿ ರಾಮಕೃಷ್ಣ ಅವರ ಸಾಥ್ ನೀಡಿದ್ದಾರೆ. ರಾಮಕೃಷ್ಣ ಅವರು ಕೂಡ ಸದ್ಯ ನಿವೃತ್ತ ಜೀವನದಲ್ಲಿ ಉಡುಪಿಯ ಮನೆಯಲ್ಲಿಇದ್ದು, ಪತ್ನಿಯ ಓದಿಗೆ ಬೆನ್ನೆಲುಬಾಗಿ ನಿಂತು ಸಹಕರಿಸಿದ್ದಾರೆ. ಪತ್ನಿ ಡಾಕ್ಟರೇಟ್ ಪದವಿ ಪಡೆದ ಕ್ಷಣವನ್ನು ಸಂಭ್ರಮಿಸಿದ್ದಾರೆ. ಒಟ್ನಲ್ಲಿ, ವಯಸ್ಸಾಯ್ತು, ಅಂತ ನೆಪ ಹೇಳಿಕೊಂಡು ಕಾಲ ಕಳೆಯುವವರ ಮಧ್ಯೆ ಉಷಾ ಚಡಗ ಅವರ ಸಾಧನೆ ಮೆಚ್ಚಲೇ ಬೇಕು. ಸದ್ಯ ಉಷಾ ಅವರ ಸಾಧನೆ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ಮಾತನ್ನಾಡುತ್ತಿದ್ದಾರೆ. ಡಾ. ಉಷಾ ಚಡಗ ಅವರ ಸಾಧನೆ ಎಲ್ಲರಿಗೂ ಸ್ಪೂರ್ತಿ ಆಗಲಿ ಅನ್ನೋದೆ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದ ಆಶಯ.

Latest Videos
Follow Us:
Download App:
  • android
  • ios