Asianet Suvarna News Asianet Suvarna News

ಮೀಸಲಾತಿಯಲ್ಲಿ IIT ಸೇರಿ ಅರ್ಧದಲ್ಲೇ ಕಾಲೇಜು ಬಿಡ್ತಿದ್ದಾರೆ ಶೇ.60 ವಿದ್ಯಾರ್ಥಿಗಳು

  • ಮೀಸಲಾತಿಯಲ್ಲಿ ಐಐಟಿ ಸೇರಿ ಅರ್ಧದಲ್ಲೇ ಶಿಕ್ಷಣ ಮೊಟಕು
  • ಕಾಲೇಜು ಅರ್ಧದಲ್ಲೇ ಬಿಟ್ಟವರಲ್ಲಿ ಮೀಸಲಾತಿ ಪಡೆದು ಬಂದವರು ಶೇ.60ರಷ್ಟು
60 percent of dropouts at 7 IITs from reserved categories dpl
Author
Bangalore, First Published Aug 6, 2021, 4:27 PM IST

ದೆಹಲಿ(ಆ.06): ಐಐಟಿಗಳಲ್ಲಿ ಕಲಿಯುವುದು ಬಹಳಷ್ಟು ವಿದ್ಯಾರ್ಥಿಗಳ ಕನಸು. ಹಾಗಾಗಿಯೇ ಹಗಲಿರುಳು ಕಷ್ಟಪಟ್ಟು ಓದುವವರಿದ್ದಾರೆ. ಆದರೆ ಐಐಟಿಗಳಲ್ಲಿ ಕಲಿಯೋ ಅವಕಾಶ ಸಿಕ್ಕರೂ ಕಾಲೇಜು ಬಿಡುವವರ ಸಂಖ್ಯೆಯೂ ಹೆಚ್ಚಿದೆ. ಇದರಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳು ಮೀಸಲಾತಿ ಕೋಟಾದಲ್ಲಿ ಕಾಲೇಜು ಸೇರಿದವರು.

ಶಿಕ್ಷಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಭಾರತೀಯ ತಾಂತ್ರಿಕ ಸಂಸ್ಥೆಗಳಲ್ಲಿ (ಐಐಟಿ) ಕಳೆದ ಏಳು ವರ್ಷಗಳಲ್ಲಿ ಸುಮಾರು 63% ರಷ್ಟು ವಿದ್ಯಾರ್ಥಿಗಳು ಶಿಕ್ಷಣವನ್ನು ಕೈಬಿಟ್ಟಿದ್ದಾರೆ. ಇವರಲ್ಲಿ ಸುಮಾರು 40% ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದವರು. ಕೆಲವು ಸಂಸ್ಥೆಗಳಲ್ಲಿ SC/ST ಪಾಲು 72%ರಷ್ಟಿತ್ತು.

ಐಐಟಿಯಲ್ಲಿ ಅರ್ಧದಷ್ಟು ಕೇವಲ ಮೀಸಲಾತಿ ವರ್ಗದವರಾಗಿದ್ದರೆ. ಸುಮಾರು 23% ರಷ್ಟು SC/ST ಸಮುದಾಯದವರು. ಈ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಆ ಸಮುದಾಯದ ವಿದ್ಯಾರ್ಥಿಗಳು ಹೆಚ್ಚಿನ ಮಟ್ಟದ ಒತ್ತಡ ಮತ್ತು ತಾರತಮ್ಯವನ್ನು ಎದುರಿಸುತ್ತಾರೆ ಎಂದು ದಲಿತ ಮತ್ತು ಆದಿವಾಸಿ ಕಾರ್ಯಕರ್ತರು ಬಹಳ ಹಿಂದಿನಿಂದಲೂ ವಾದಿಸಿದ್ದಾರೆ. ಮುಖ್ಯವಾಗಿ ಇತರ ವಿಭಾಗಗಳಲ್ಲಿ ಅಥವಾ ಸಂಸ್ಥೆಗಳಲ್ಲಿ ಸೀಟ್ ಸಿಕ್ಕಿದಾಗ ಅಥವಾ ಯಾವುದೇ ವೈಯಕ್ತಿಕ ಕಾರಣದಿಂದ ಶಿಕ್ಷಣ ಬಿಡುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜ್ಯಸಭೆಗೆ ಹೇಳಿದ್ದಾರೆ.

ಕೇರಳ ಸಂಸದರ ಪ್ರಶ್ನೆ

ಎಲ್ಲಾ ಕೇಂದ್ರ-ಅನುದಾನಿತ ತಾಂತ್ರಿಕ ಸಂಸ್ಥೆಗಳಲ್ಲಿ ಡ್ರಾಪ್ಔಟ್‌ಗಳು, ಸಾಮಾಜಿಕ ವರ್ಗಗಳಲ್ಲಿ ಕಂಡುಬರುವ ವ್ಯತ್ಯಾಸ ಮತ್ತು ಅದನ್ನು ಪರಿಹರಿಸಲು ತೆಗೆದುಕೊಂಡ ಕ್ರಮಗಳ ಕುರಿತು ಸಂಸದ ವಿ.ಶಿವದಾಸನ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಶುಲ್ಕ ಕಡಿತ, ಸಂಸ್ಥೆಗಳ ವಿದ್ಯಾರ್ಥಿವೇತನ, ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿವೇತನಕ್ಕೆ ಆದ್ಯತೆಯ ಪ್ರವೇಶವನ್ನು ಆರ್ಥಿಕ ಸಮಸ್ಯೆಯ ಹಿನ್ನೆಲೆ ಹೊಂದಿರುವ ವಿದ್ಯಾರ್ಥಿಗಳ ಶಿಕ್ಷಣವನ್ನು ಮುಂದುವರಿಸಲು ನೆರವಾಗಲು ನೀಡಲಾಗಿದೆ ಎಂದಿದ್ದಾರೆ.

ಐಐಟಿ ಗುವಾಹಟಿಯಲ್ಲಿ 25 ಡ್ರಾಪ್‌ಔಟ್‌ಗಳಲ್ಲಿ 88% ಮೀಸಲಾತಿ ವರ್ಗದಿಂದ ಬಂದವರು. ಮುಕ್ಕಾಲು ಭಾಗದಷ್ಟು ವಿದ್ಯಾರ್ಥಿಗಳು ಎಸ್‌ಸಿ/ಎಸ್‌ಟಿ ಸಮುದಾಯದಿಂದ ಬಂದವರಾಗಿದ್ದರೂ ಅವರು ಒಟ್ಟು ವಿದ್ಯಾರ್ಥಿಗಳ ಕಾಲು ಭಾಗಕ್ಕಿಂತಲೂ ಕಡಿಮೆ ಇದ್ದಾರೆ.

2018 ರಲ್ಲಿ ಐಐಟಿ ದೆಹಲಿಯಿಂದ ಹೊರಗುಳಿದ 10 ವಿದ್ಯಾರ್ಥಿಗಳಲ್ಲಿ ಎಲ್ಲರೂ ಮೀಸಲಾತಿ ವರ್ಗದವರಾಗಿದ್ದು, 2019 ರ ಹೊರತಾಗಿ ಇದು ಪ್ರತಿ ವರ್ಷವೂ ಹೀಗೆ ನಡೆದಿದೆ. ಐಐಟಿಯಲ್ಲಿನ ಅರ್ಧಕ್ಕಿಂತ ಹೆಚ್ಚು ಡ್ರಾಪ್ಔಟ್ಗಳು ಎಸ್ಸಿ/ಎಸ್ಟಿ ಸಮುದಾಯದವರಾಗಿದ್ದಾರೆ.

ಅಗ್ರ ಶ್ರೇಯಾಂಕಿತ ಐಐಟಿ ಮದ್ರಾಸ್ ಕಳೆದ ಐದು ವರ್ಷಗಳಲ್ಲಿ ಕೇವಲ 10 ಮಕ್ಕಳನ್ನು ಬಿಟ್ಟಿದೆ. ಆದರೆ ಅವರಲ್ಲಿ ಆರು ಮಂದಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು, ಮತ್ತೊಬ್ಬ ವಿದ್ಯಾರ್ಥಿ ಇತರೆ ಹಿಂದುಳಿದ ವರ್ಗದವರು. ಈ ಸಂಸ್ಥೆಯ 70% ಡ್ರಾಪ್ಔಟ್ಗಳು ಮೀಸಲಾತಿ ವರ್ಗಗಳಿಂದ ಬಂದವರು ಐಐಟಿ ಖರಗ್‌ಪುರವು ಅತಿ ಹೆಚ್ಚು ಡ್ರಾಪ್ಔಟ್‌ಗಳನ್ನು ಹೊಂದಿದ್ದು ಕಳೆದ ಐದು ವರ್ಷಗಳಲ್ಲಿ 79 ವಿದ್ಯಾರ್ಥಿಗಳು ಶಿಕ್ಷಣ ತೊರೆದಿದ್ದಾರೆ. ಇವರಲ್ಲಿ 60% ಕ್ಕಿಂತ ಹೆಚ್ಚು ಮೀಸಲು ವರ್ಗದವರು.

Follow Us:
Download App:
  • android
  • ios