ಸಿಇಟಿ ಫಲಿತಾಂಶ: ಬೆಂಗ್ಳೂರಿನ 25 ವಿದ್ಯಾರ್ಥಿಗಳು ಟಾಪರ್ಸ್..
ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರು ಸಹಕಾರ ನಗರದ ನಾರಾಯಣ ಒಲಿಂಪಿಯಾಡ್ ಶಾಲೆಯ ವರ್ಷ ಕಾರ್ತಿಕೇಯ ವಿ. ಮೊದಲ ರ್‍ಯಾಂಕ್ ಪಡೆದಿದ್ದಾರೆ. ಉಳಿದಂತೆ ಮನೋಜ್ ಸೊಹನ್ ಗಾಜುಲ, ಅಭಿನವ್ ಪಿ.ಜೆ., ಸನಾ ತಬಸ್ಸುಮ್, ಅನಿಮೇಶ್ ಸಿಂಗ್ ರಾಥೋರ್ ಮೊದಲ 5 ಸ್ಥಾನ ಪಡೆದಿದ್ದಾರೆ.
ಬೆಂಗಳೂರು(ಜೂ.02): ಸಿಇಟಿ ಫಲಿತಾಂಶದಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳೇ ಹೆಚ್ಚು ರ್‍ಯಾಂಕ್ ಗಿಟ್ಟಿಸಿದ್ದು, ಎಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ಬದೂ ಬ್ಯಾಂಕ್‌ಗಳು ಬೆಂಗಳೂರಿನ ಅಭ್ಯರ್ಥಿಗಳೇ ತೆಕ್ಕೆಗೆ ಹಾಕಿಕೊಂಡಿದ್ದಾರೆ.
ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರು ಸಹಕಾರ ನಗರದ ನಾರಾಯಣ ಒಲಿಂಪಿಯಾಡ್ ಶಾಲೆಯ ವರ್ಷ ಕಾರ್ತಿಕೇಯ ವಿ. ಮೊದಲ ರ್‍ಯಾಂಕ್ ಪಡೆದಿದ್ದಾರೆ. ಉಳಿದಂತೆ ಮನೋಜ್ ಸೊಹನ್ ಗಾಜುಲ, ಅಭಿನವ್ ಪಿ.ಜೆ., ಸನಾ ತಬಸ್ಸುಮ್, ಅನಿಮೇಶ್ ಸಿಂಗ್ ರಾಥೋರ್ ಮೊದಲ 5 ಸ್ಥಾನ ಪಡೆದಿದ್ದಾರೆ.
ಉಳಿದ ಕೋರ್ಸ್‌ಗಳಲ್ಲೂ ಬೆಂಗಳೂರಿಗರು ಪ್ರಮುಖ ಬ್ಯಾಂಕ್ ಗಿಟ್ಟಿಸಿದ್ದಾರೆ. ಬೆಂಗಳೂರಿನ ಸಹಕಾರನಗರದ ಒಲಿಂಪಿಯಾಡ್ ಶಾಲೆ, ಮಾರತ್ ಹಳ್ಳಿ ಬ್ರಿಡ್ಜ್‌ನ ಶ್ರೀ ಚೈತನ್ಯ ಚಿಕ್ಕೋ ಶಾಲೆ, ಜಯನಗರದ ನೆಹರೂ ಸ್ಮಾರಕ ವಿದ್ಯಾಲಯ, ಅಯ್ಯೋ ಲೇಔಟ್ ನಾರಾಯಣ ಪಿಯು ಕಾಲೇಜು, ಜೆ.ಪಿ.ನಗರದ ಶ್ರೀ ಚೈತನ್ಯ ಟೆಕ್ಕೋ ಸ್ಕೂಲ್, ಶೇಷಾದ್ರಿಪುರಂ ಸಂಯುಕ್ತ ಪದವಿ ಪೂರ್ವ ಕಾಲೇಜು, ದಾಸರಹಳ್ಳಿಯ ನಾಡಿ ರಾಯಣ ಪಿಯು ಕಾಲೇಜು, ಜಾಲಹಳ್ಳಿಯ ಕೇಂದ್ರೀಯ ವಿದ್ಯಾಲಯ, ಯಲಹಂಕ ಉಪನಗರ ವೈಟ್ಫೀಲ್ಡ್ ನಾರಾಯಣ ಇ ಟೆಕ್ನೋ ಸ್ಕೂಲ್‌ಗಳ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಸಿಇಟಿ ಫಲಿತಾಂಶ ಪ್ರಕಟ: ಬಿಇ, ಬಿಎಸ್ಸಿ (ಕೃಷಿ)ಗೆ ತಲಾ 2.15 ಲಕ್ಷ ಅಭ್ಯರ್ಥಿಗಳು ಅರ್ಹ
2 ಗ್ರೇಸ್ ಅಂಕ
ಸಿಐಟಿ ಪರೀಕ್ಷೆಯಲ್ಲಿ ಪಠ್ಯ ಕ್ರಮದ ಹೊರತಾಗಿ ಪ್ರಶ್ನೆಗಳು ಬಂದಿದ್ದವು. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ವಿಷಯ ಪರಿಣಿತರ ವರದಿಯನ್ನಾಧರಿಸಿ ಭೌತಶಾಸ್ತ್ರದ 9. 15, ವಿಷಯದ 15. ಜೀವಶಾಸ್ತ್ರದ 11 ಪ್ರಶ್ನೆಗಳನ್ನು ಕೈಬಿಟ್ಟು ಮೌಲ್ಯ ಮಾಪನ ಮಾಡಲಾಗಿದೆ. ಇದೇ ಕಾರಣಕ್ಕೆ ಭೌತಶಾಸ್ತ್ರ ಹಾಗೂ ಗಣಿತ ವಿಷಯದಲ್ಲಿ ತಲಾ 1 ಕೃಪಾಂಕ ನೀಡಲಾಗಿದೆ.
ಕರ್ನಾಟಕ ಯುಜಿಸಿಇಟಿ 2024 ಫಲಿತಾಂಶ ಪ್ರಕಟ; ಹರ್ಷ ಕಾರ್ತಿಕೇಯ ಮೊದಲ ರ್ಯಾಂಕ್
ಸಿಇಟಿ 3ನೇ ರ್‍ಯಾಂಕ್ ಬರಲಿದೆ ಎಂಬ ನಿರೀಕ್ಷೆ ಇರಲಿಲ್ಲ, ಹಾಗೆಯೇ ಜೆಇಇ ಮೇನ್ಸ್‌ನಲ್ಲಿ 126ನೇ ರ್‍ಯಾಂಕ್ ಬಂದಿದೆ. ಬಾಂಬೆ ಅಥವಾ ದೆಹಲಿ ಐಐಟಿಯಲ್ಲಿ ಕಂಪ್ಯೂಟರ್‌ಸೈನ್ಸ್‌ನಲ್ಲಿ ಮುಂದುವರಿಯುವ ಆಲೋಚನೆ ಇದೆ. ಕೋಡಿಂಗ್‌ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ ಎಂದು ಅಭಿವನ್ ಪಿ.ಜೆ. ನೆಹರು ಸ್ಮಾರಕ ವಿದ್ಯಾಲಯ, ಬೆಂಗಳೂರು: (ಎಂಜಿನಿಯರಿಂಗ್ 3ನೇ ರ್‍ಯಾಂಕ್) ತಿಳಿಸಿದ್ದಾರೆ.
ಬಾಂಬೆಯ ಬೆಹರೀನ್‌ನಲ್ಲಿ ಹುಟ್ಟಿ ಮಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿದ್ದೇನೆ. ವೈದ್ಯಕೀಯ ಕ್ಷೇತ್ರದಲ್ಲಿ ಓದು ಮುಂದುವರೆಸಿ ಸಾಧನೆ ಮಾಡಬೇಕು ಎಂಬುದು ನನ್ನ ಗುರಿ. ಓದಿನ ಜತೆಗೆ ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದೇನೆ ಎಂದು ಮಿಹಿರ್ ಗಿರೀಶ್ ಕಾಮತ್ ಕೃಷಿ ವಿಜ್ಞಾನ 2ನೇ ರ್‍ಯಾಂಕ್ ಹೇಳಿದ್ದಾರೆ.