ಬೆಂಗಳೂರು, (ಮೇ.07): ಸಿಐಎಸ್‌ಸಿಇ ಮತ್ತು ಐಎಸ್‌ಸಿ 10ನೇ ಹಾಗೂ 12ನೇ ತರಗತಿ ಪರೀಕ್ಷೆಯ ಫಲಿತಾಂಶದ ಪ್ರಕಟವಾಗಿದ್ದು,  ಬೆಂಗಳೂರಿನ 2ನೇ ತರಗತಿಯ  ಐಎಸ್‌ಸಿಯಲ್ಲಿ ಬೆಂಗಳೂರಿನ ವಿಭಾ ಸ್ವಾಮಿನಾಥನ್ ದೇಶಕ್ಕೆ ಟಾಪರ್ ಆಗಿದ್ದಾರೆ.

ಐಸಿಎಸ್‌ಇ ಫಲಿತಾಂಶದಲ್ಲೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. 2018-19 ರ ಶೈಕ್ಷಣಿಕ ವರ್ಷದ ಐಸಿಎಸ್‌ಇ ಪರೀಕ್ಷೆಯಲ್ಲಿ ಶೇ. 98.54ರಷ್ಟು ವಿದ್ಯಾರ್ಥಿಗಳು, ಐಎಸ್‌ಸಿ ಪರೀಕ್ಷೆಯಲ್ಲಿ ಶೇ. 96.52ರಷ್ಟು ಮಂದಿ ತೇರ್ಗಡೆ ಹೊಂದಿದ್ದಾರೆ.

ಕರಿಯರ್ ಆಯ್ಕೆ ಮಾಡುವಾಗ ಈ 9 ತಪ್ಪುಗಳನ್ನು ಮಾಡ್ಬೇಡಿ..!

ಕೋಲ್ಕತದ ದೇವಾಂಗ್‌ ಕುಮಾರ್‌ ಅಗರ್ವಾಲ್‌ (ವಿಜ್ಞಾನ ವಿಭಾಗ) ಹಾಗೂ ಬೆಂಗಳೂರಿನ ವಿಭಾ ಸ್ವಾಮಿನಾಥನ್‌ (ಹ್ಯೂಮಾನಿಟೀಸ್‌ ವಿಭಾಗ) 12ನೇ ತರಗತಿಯ ಐಎಸ್‌ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದುಕೊಂಡ ಸಾಧನೆ ಮಾಡಿದ್ದಾರೆ. 

ಇನ್ನು, ಐಸಿಎಸ್‌ಇ ಪರೀಕ್ಷೆಯಲ್ಲಿ ಮುಂಬೈ ಜೂಹಿ ರೂಪೇಶ್‌ ಕಜಾರಿಯಾ ಹಾಗೂ ಮುಕ್ತ್‌ಸಾರ್‌ನ ಮನ್ಹಾರ್‌ ಬನ್ಸಾಲ್‌ ಶೇ. 99. 60 ರಷ್ಟು ಫಲಿತಾಂಶ ಗಳಿಸಿಕೊಂಡು ಟಾಪರ್‌ ಆಗಿದ್ದಾರೆ. 

ಈ ವರ್ಷ ಫೆಬ್ರವರಿ 22ರಿಂದ ಮಾರ್ಚ್ 25ರವರೆಗೆ ಐಸಿಎಸ್‌ಇ ಪರೀಕ್ಷೆಗಳು ನಡೆದಿದ್ದವು.