ನವದೆಹಲಿ, [ಆ.28]: ದೇಶಾದ್ಯಂತ ಹೊಸದಾಗಿ  75 ಮೆಡಿಕಲ್ ಕಾಲೇಜು ಸ್ಥಾಪನೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಇಂದು [ಬುಧವಾರ] ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನೂತನ ಮೆಡಿಕಲ್ ಕಾಲೇಜುಗಳನ್ನು ತೆರೆಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಪರಿಸರ, ಅರಣ್ಯ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಸ್ಪಷ್ಟಪಡಿಸಿದರು.

50 ಸಾವಿರ ಉದ್ಯೋಗ ಸೃಷ್ಟಿ: ಮೋದಿ ಸರ್ಕಾರದಿಂದ ಮಹತ್ವದ ಘೋಷಣೆ

ಮುಂದಿನ 3 ವರ್ಷಗಳಲ್ಲಿ ದೇಶಾದ್ಯಂತ 75 ಹೊಸ ಮೆಡಿಕಲ್ ಕಾಲೇಜುಗಳನ್ನು ನಿರ್ಮಿಸಲಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ 24, 375 ಕೋಟಿ ರೂಪಾಯಿ ವ್ಯಯಿಸಲಿದೆ ಎಂದು ಪ್ರಕಾಶ್ ಜಾವ್ಡೇಕರ್ ಹೇಳಿದರು.

3 ವರ್ಷಗಳಲ್ಲಿ 75 ನೂತನ ಮೆಡಿಕಲ್ ಕಾಲೇಜುಗಳನ್ನು ತೆರೆಯುವುದರಿಂದ ಸುಮಾರು 15,700ಕ್ಕೂ ಅಧಿಕ ಮೆಡಿಕಲ್ ಸೀಟುಗಳು ದೊರೆಯುತ್ತದೆ. ಆ ನಿಟ್ಟಿನಲ್ಲಿ ಮೆಡಿಕಲ್ ಶಿಕ್ಷಣದ ಅತೀ ದೊಡ್ಡ ವಿಸ್ತರಣೆ ಇದಾಗಿದೆ ಎಂದು ಜಾವ್ಡೇಕರ್ ವಿವರಿಸಿದರು.

2021-22ರಲ್ಲಿ ನೂತನ ಮೆಡಿಕಲ್ ಕಾಲೇಜು ನಿರ್ಮಾಣವಾಗುವ ಮೂಲಕ 15,700 ಎಂಬಿಬಿಎಸ್ ವೈದ್ಯರು ನಮಗೆ ಹೆಚ್ಚುವರಿ ಸಿಗಲಿದ್ದಾರೆ. ಇದರಿಂದ ಕನಿಷ್ಠ ಮಟ್ಟದ ಆರೋಗ್ಯ ಸೇವೆ ಇರುವಲ್ಲಿ ಉತ್ತಮ ಆರೋಗ್ಯ ಸೇವೆ ನೀಡಲು ಸಾಧ್ಯವಾಗಲಿದೆ ಎಂದರು.