10, 12ನೇ ತರಗತಿ ಪರೀಕ್ಷೆಗೆ ದಿನಾಂಕ ಘೋಷಣೆ: ವೇಳಾಪಟ್ಟಿಯೂ ಪ್ರಕಟ
ಕೊರೋನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಹಲವು ಪರೀಕ್ಷೆಗಳನ್ನು ಮುಂದೂಡಲಾಗಿದೆ. ಅದೇ ರೀತಿ ಮುಂದೂಡಲಾಗಿದ್ದ 10ನೇ ತರಗತಿ ಪಬ್ಲಿಕ್ ಪರೀಕ್ಷೆಯನ್ನು ನಡೆಸಲು ಸರ್ಕಾರ ಮುಂದಾಗಿದೆ.
ಚೆನ್ನೈ, (ಮೇ.12): ಜೂನ್ 1ರಿಂದ 12ರವರೆಗೆ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯನ್ನು ನಡೆಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ.
ಜೂನ್ 1ರಿಂದ ಮಧ್ಯಾಹ್ನದ ವೇಳೆಯಲ್ಲಿ ಪರೀಕ್ಷೆಗಳು ನಡೆಯಲಿದ್ದು ವೈಯಕ್ತಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಮತ್ತು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
10, 12ನೇ ತರಗತಿ ಪರೀಕ್ಷೆಗೆ ದಿನಾಂಕ ಘೋಷಣೆ..!
ಅದೇ ರೀತಿ ಮಾರ್ಚ್ 24ರಂದು ನಿಗದಿಯಾಗಿದ್ದ 12ನೇ ತರಗತಿ ಪರೀಕ್ಷೆಯನ್ನು ಸಹ ಜೂನ್ 4 ರಂದು ನಡೆಸಲಾಗುವುದು ಎಂದು ತಮಿಳುನಾಡು ಶಿಕ್ಷಣ ಸಚಿವ ಕೆ.ಎ. ಸೆಂಗೊಟ್ಟಾಯನ್ ಸ್ಪಷ್ಟಡಿಸಿದ್ದಾರೆ.
ಮಾರ್ಚ್ 27ರಿಂದ ನಡೆಯಬೇಕಾಗಿದ್ದ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯನ್ನು ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.
ಜತೆಗೆ ಮಾರ್ಚ್ 24ರಂದು ಮುಂದೂಡಲ್ಪಟ್ಟಿದ್ದ 12ನೇ ತರಗತಿಯ ಕೊನೆಯ ಪತ್ರಿಕೆಯ ಪರೀಕ್ಷೆಯನ್ನು ಜೂನ್ 4ರಂದು ನಡೆಯಲಿದ್ದು, ಮುಂದಿನ ಶೈಕ್ಷಣಿಕ ವರ್ಷದ ಸಾಮಾನ್ಯ ಕಾರ್ಯಚಟುವಟಿಕೆಗಳು ಕೊರೋನಾ ವೈರಸ್ ಹಾವಳಿ ತಹಬಂದಿಗೆ ಬಂದ ನಂತರವೇ ಆರಂಭವಾಗಲಿದೆ ಎಂದು ಸೆಂಗೊಟ್ಟಾಯನ್ ತಿಳಿಸಿದ್ದಾರೆ.
ಇನ್ನು ಕರ್ನಾಟಕದಲ್ಲೂ ಸಹ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆಗಳು ನಡೆದಿದ್ದು, ಜೂನ್ ತಿಂಗಳಲ್ಲಿ ನಡೆಸಲು ಸರ್ಕಾರ ಚಿಂತನೆ ನಡೆಸಿದೆ.
ತಮಿಳುನಾಡಿನ ಎಸ್‌ಎಸ್‌ಎಲ್‌ಸಿ ವೇಳಾಪಟ್ಟಿ
1.Language- 01.06.2020
2.English- 03.06.2020
3.Maths- 05.06.2020
4.Optional Language- 06.06.2020
5.Science- 08.06.2020
6.Social Science- 10.06.2020
7.Vocational- 12.06.2020