ನವದೆಹಲಿ, (ಜುಲೈ.29): ಕೊರೋನಾದಿಂದಾಗಿ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಆಗಸ್ಟ್ 15ರ ಬಳಿಕ ಶಾಲಾ-ಕಾಲೇಜುಗಳು ಪ್ರಾರಂಭಿಸುವ ಚಿಂತನೆ ನಡೆದಿದೆ ಎಂದು ಈ ಹಿಂದೆ ಕೇಂದ್ರ ಸರ್ಕಾರವೇ ಹೇಳಿತ್ತು.

ಆದ್ರೆ, ಇದೀಗ ಆಗಸ್ಟ್ 31ರ ವರೆಗೆ ಯಾವುದೇ ಶಾಲೆ-ಕಾಲೇಜು ಮತ್ತು ಕೋಚಿಂಗ್ ಸೆಂಟರ್‌ ತೆಗೆಯುವಂತಿಲ್ಲ.

34 ವರ್ಷಗಳ ಬಳಿಕ ಬದಲಾದ ಶಿಕ್ಷಣ ನೀತಿ: ರಾಜ್ಯದಲ್ಲೂ ಅನುಷ್ಠಾನವಾಗುತ್ತೆ ಎಂದ ಡಿಸಿಎಂ 

ಹೌದು..: ಕೇಂದ್ರ ಸರ್ಕಾರ ಇಂದು (ಬುಧವಾರ) ಅನ್ ಲಾಕ್ 3.0 ಹೊಸ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದ್ದು, ಈ ಮಾರ್ಗಸೂಚಿಯಂತೆ ಆಗಸ್ಟ್ 31ರವರೆಗೆ ದೇಶಾದ್ಯಂತ ಶಾಲಾ-ಕಾಲೇಜು ಆರಂಭಕ್ಕೆ ಅನುಮತಿಯನ್ನು ನೀಡಿಲ್ಲ. 

ಈ ಮೂಲಕ ಆಗಸ್ಟ್‌ನಲ್ಲಿ ಶಾಲಾ-ಕಾಲೇಜುಗಳು ಪ್ರಾರಂಭವಾಗುತ್ತವೆ ಅಂತೆಲ್ಲಾ ಸುದ್ದಿಗಳು ಹರಿದಾಡುತ್ತಿದ್ದವು. ಇದರಿಂದ  ವಿದ್ಯಾರ್ಥಿ ಮತ್ತು ಪೋಷಕರು ಗೊಂದಲಕ್ಕೀಡಾಗಿದ್ದರು. ಇದೀಗ ಆ ಎಲ್ಲಾ ಗೊಂದಲಗಳಿಗೆ ಕೇಂದ್ರ ಸರ್ಕಾರ ತೆರೆ ಎಳೆದಿದ್ದು, ಆಗಸ್ಟ್‌ನಲ್ಲಿ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗುವುದಿಲ್ಲ.

ಸದ್ಯಕ್ಕೆ ಆಗಸ್ಟ್ ವರೆಗೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅದರೊಳಗೆ ಏನಾದರೂ ಕೊರೋನಾ ನಿಯಂತ್ರಣಕ್ಕೆ ಬಂದರೆ ಶೈಕ್ಷಣಿಕ ಚಟುವಟಿಕೆಗಳ ಪ್ರಾರಂಭಕ್ಕೆ ಮಾರ್ಗಸೂಚಿ ಪ್ರಕಟಿಸಲಿದೆ. ಒಂದು ವೇಳೆ ಆಗಸ್ಟ್ ಬಳಿಕವೂ ಕೊರೋನಾ ಹೆಚ್ಚಾದರೆ, ಇನ್ನಷ್ಟು ದಿನ ಇದೇ ಪರಿಸ್ಥಿತಿ ಮುಂದೂಡುವ ಸಾಧ್ಯತೆಗಳಿವೆ

ಮತ್ತೊಂದೆಡೆ ರಾಜ್ಯದಲ್ಲಿ ಎಷ್ಟು ದಿನ ಕ್ಲಾಸ್ ನಡೆಯುತ್ತವೆ? ಶೈಕ್ಷಣಿಕ ವರ್ಷ ಆರಂಭವಾಗುವ ಸಾಧ್ಯತೆಗಳು ಕ್ಷೀಣಿಸಿರುವುದರಿಂದ ಪಠ್ಯಗಳ ಸಂಖ್ಯೆಯನ್ನು ಎಷ್ಟು ಕಡಿತ ಮಾಡಬೇಕು? ಎನ್ನುವ ನೀಲಿನಕ್ಷೆಯನ್ನು ಕರ್ನಾಟಕ ಶಿಕ್ಷಣ ಇಲಾಖೆ ತಯಾರಿಸುತ್ತಿದೆ.