ಬೆಂಗಳೂರು(ಆ.29): ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಕಳೆದ ಮಾರ್ಚ್‌ ತಿಂಗಳಲ್ಲಿ ನಡೆಸಲಾಗಿದ್ದ 2019-20ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮರುಮೌಲ್ಯಮಾಪನ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ. 

ಇಲಾಖೆಯ ವೆಬ್‌ಸೈಟ್‌ www.puc.kar.nic.in ನಲ್ಲಿ ಫಲಿತಾಂಶ ಲಭ್ಯವಿದ್ದು, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ದಾಖಲಿಸಿ ಫಲಿತಾಂಶ ವೀಕ್ಷಿಸಬಹುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ದ್ವಿತೀಯ ಪಿಯು ಫಲಿತಾಂಶ: ಉಡುಪಿ ರಾಜ್ಯಕ್ಕೇ ಪ್ರಥಮ, ಬಾಲಕಿಯರದ್ದೇ ಮೇಲುಗೈ!

ಪಿಯು ಪರೀಕ್ಷೆಯಲ್ಲಿ ಒಟ್ಟು 6 ಲಕ್ಷದ 75 ಸಾವಿರ 277 ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅದರಲ್ಲಿ 5,66,267 ಮಂದಿ ಹೊಸ ಪರೀಕ್ಷಾರ್ಥಿಗಳು. ಇವರಲ್ಲಿ 3,84,947 ಮಂದಿ ಉತ್ತೀರ್ಣರಾಗಿದ್ದರು. 69.20ಮಂದಿ ತೇರ್ಗಡೆ ಹೊಂದಿದ್ದರು. ಪುನರಾವರ್ತಿತ ಅಭ್ಯರ್ಥಿಗಳು 91 ಸಾವಿರದ 25 ವಿದ್ಯಾರ್ಥಿಗಳು. ಇವರಲ್ಲಿ 25 ಸಾವಿರದ 602 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು.ಈ ಬಾರಿ ಖಾಸಗಿ ಅಭ್ಯರ್ಥಿಗಳು ಹಾಜರಾದ 27 ಸಾವಿರದ 985, ಇವರಲ್ಲಿ 6 ಸಾವಿರದ 748 ಖಾಸಗಿ ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದರು.