ನವದೆಹಲಿ, (ಆ.03): ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗೆ ಪ್ರವೇಶ ಪಡೆಯಲು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ವೇಳಾಪಟ್ಟಿ ಪ್ರಕಟವಾಗಿದೆ.

ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ (ಎನ್‌ಬಿಇ)  ಬಿಡುಗಡೆ ಮಾಡಿದ್ದು, ನೀಟ್-ಎಸ್ಎಸ್ -ಕಂಪ್ಯೂಟರ್ ಆಧಾರಿತ ಪರೀಕ್ಷೆ ಸೆಪ್ಟೆಂಬರ್ 15 ರಂದು ದೇಶಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ.

ನೀಟ್, ಜೆಇಇ ಪರೀಕ್ಷೆಗಳು ಮುಂದೂಡಿಕೆ: ಇಲ್ಲಿದೆ ಪರಿಷ್ಕೃತ ವೇಳಾಪಟ್ಟಿ

ಸೆಪ್ಟೆಂಬರ್ 13 ರಂದು ನೀಟ್ ಪರೀಕ್ಷೆ ನಡೆಯಬೇಕಿತ್ತು. ಆದ್ರೆ,  ಸೆಪ್ಟೆಂಬರ್ 15ಕ್ಕೆ ಮುಂದೂಡಲಾಗಿದ್ದು, ಪ್ರವೇಶ ಪರೀಕ್ಷೆಗೆ ಆಗಸ್ಟ್ 3 ರಿಂದ ಆಗಸ್ಟ್ 23 ರವರೆಗೆ natboard.edu.in ನಲ್ಲಿ ಆನ್​​ಲೈನ್ ಅರ್ಜಿ ಸಲ್ಲಿಸಬಹುದು.