Asianet Suvarna News Asianet Suvarna News

ನೀಟ್, ಜೆಇಇ ಪರೀಕ್ಷೆಗಳು ಮುಂದೂಡಿಕೆ: ಇಲ್ಲಿದೆ ಪರಿಷ್ಕೃತ ವೇಳಾಪಟ್ಟಿ

ದೇಶದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಜೆಇಇ ಮುಖ್ಯ ಪರೀಕ್ಷೆ ಹಾಗೂ ನೀಟ್ ಪರೀಕ್ಷೆಯನ್ನು ಮುಂದೂಡಲಾಗಿದೆ.

NEET JEE now postponed to September amid increasing Covid19 cases
Author
Bengaluru, First Published Jul 3, 2020, 10:30 PM IST

ನವದೆಹಲಿ, (ಜುಲೈ.03): ಕೋವಿಡ್  ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ(ನೀಟ್ ಮತ್ತು ಜೆಇಇ) ಅನ್ನು ಸೆಪ್ಟೆಂಬರ್‌ಗೆ ಮುಂದೂಡಿದೆ.

ಈ ಬಗ್ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ.ರಮೇಶ್ ಪೋಖ್ರಿಯಾಲ್ ಪ್ರತಿಕ್ರಿಯಿಸಿದ್ದು, ಜೆಇಇ ಮುಖ್ಯ ಪರೀಕ್ಷೆ ಸೆಪ್ಟೆಂಬರ್ 1 ರಿಂದ 6 ರವರೆಗೆ ನಡೆಯಲಿದೆ. ಜೆಇಇ-ಮುಖ್ಯ ಪರೀಕ್ಷೆ ಸೆಪ್ಟೆಂಬರ್ 1-6ರ ನಡುವೆ ನಡೆಯಲಿದ್ದು, ಜೆಇಇ-ಅಡ್ವಾನ್ಸ್ ಪರೀಕ್ಷೆ ಸೆಪ್ಟೆಂಬರ್ 27 ರಂದು ನಡೆಯಲಿದೆ. ನೀಟ್ ಪರೀಕ್ಷೆ ಸೆಪ್ಟೆಂಬರ್ 13 ರಂದು ನಡೆಯಲಿದೆ ಎಂದು ಮಾಹಿತಿ ನೀಡಿದರು. 

ಈ ಹಿಂದೆ ನೀಟ್ ಪರೀಕ್ಷೆ ಜುಲೈ 26 ಹಾಗೂ ಜೆಇಇ ಪರೀಕ್ಷೆಗಳು ಜುಲೈ 18 ರಿಂದ 23 ರವರೆಗೆ ನಿಗದಿಯಾಗಿದ್ದವು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರವೇಶಕ್ಕಾಗಿ ನಡೆಸಲಾಗುವ ಜೆಇಇ-ಅಡ್ವಾನ್ಸ್ಡ್ ಅನ್ನು ಆಗಸ್ಟ್ 23 ರಂದು ನಿಗದಿಯಾಗಿದ್ದವು. 

ಇದೀಗ ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಜೆಇಇ ಮುಖ್ಯ ಪರೀಕ್ಷೆ ಹಾಗೂ ನೀಟ್ ಪರೀಕ್ಷೆಯನ್ನು ಮುಂದೂಡಿ ಆದೇಶ ಹೊರಡಿಸಲಾಗಿದೆ.

Follow Us:
Download App:
  • android
  • ios