Asianet Suvarna News Asianet Suvarna News

ನೀಟ್ ಎಸ್‌ಎಸ್: ಕೊಪ್ಪಳದ ಮಂಜುನಾಥ್ ದೇಶಕ್ಕೇ  ಪ್ರಥಮ!

ನೀಟ್ ಎಸ್‌ಎಸ್: ಕೊಪ್ಪಳದ ಮಂಜುನಾಥ್ ದೇಶಕ್ಕೇ  ಪ್ರಥಮ!| ಮಂಜುನಾಥ್ ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪರೀಕ್ಷೆಯಲ್ಲಿ (ನೀಟ್-ಸೂಪರ್ ಸ್ಪೆಷಾಲಿಟಿ) ಎಂಡೋಕ್ರೈನೊಲಾಜಿ (ಅಂತಃಸ್ರಾವಶಾಸ್ತ್ರ) ವಿಷಯದಲ್ಲಿ ದೇಶಕ್ಕೆ ಪ್ರಥಮ ರ‌್ಯಾಂಕ್

NEET SS result 2019 declared Manjunath From Koppal Secure First Place
Author
Bangalore, First Published Jul 20, 2019, 10:34 AM IST

ಕೊಪ್ಪಳ[ಜು.20]: ಕುಷ್ಟಗಿ ತಾಲೂಕಿನ ನವಲಹಳ್ಳಿ ಗ್ರಾಮದ ವಿದ್ಯಾರ್ಥಿ ನೀಟ್ ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಮಂಜುನಾಥ್ ಹವಳಪ್ಪ ದೊಡ್ಮನಿ ಈ ಸಾಧನೆ ಮಾಡಿದ ವಿದ್ಯಾರ್ಥಿ. ಮಂಜುನಾಥ್ ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪರೀಕ್ಷೆಯಲ್ಲಿ (ನೀಟ್-ಸೂಪರ್ ಸ್ಪೆಷಾಲಿಟಿ) ಎಂಡೋಕ್ರೈನೊಲಾಜಿ (ಅಂತಃಸ್ರಾವಶಾಸ್ತ್ರ) ವಿಷಯದಲ್ಲಿ ದೇಶಕ್ಕೆ ಪ್ರಥಮ ರ‌್ಯಾಂಕ್ ಗಳಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಅಂದರೆ ಜಿಲ್ಲೆಯ ನವಲಹಳ್ಳಿಯಲ್ಲಿ ಶಿಕ್ಷಣ ಪೂರೈಸಿದ ಮಂಜುನಾಥ್ ಹೊಸಪೇಟೆಯ ಸ್ಮಯೋರ್ ಕಾಲೇಜ್‌ನಲ್ಲಿ ಪಿಯು ವಿಜ್ಞಾನ ಶಿಕ್ಷಣ ಪಡೆದು, ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದಿ, ವೈದ್ಯಕೀಯ ಎಂಡಿ ಕೋರ್ಸ್‌ನ್ನು ಚಂಡೀಗಢದಲ್ಲಿ ಪೂರೈಸಿದ್ದಾರೆ.

Follow Us:
Download App:
  • android
  • ios