ಶಾಲೆ ಪುನಾರಂಭ ಬಗ್ಗೆ ಸ್ಪಷ್ಟನೆ ಕೊಟ್ಟ ಸಚಿವ ಸುರೇಶ್ ಕುಮಾರ್

 ಕೊರೋನಾ ಭೀತಿ ಹಿನ್ನೆಲೆಯಲ್ಲಿ ಯಾವಾಗ ಶಾಲೆಗಳು ಪ್ರಾರಂಭವಾಗುತ್ತವೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಪೋಷಕರಿಗೆ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆಯೊಂದನ್ನು ಕೊಟ್ಟಿದ್ದಾರೆ.

Minister Suresh Kumar clarification about School reopening In Karnataka

ಬೆಂಗಳೂರು, (ಜುಲೈ.19): ಕೊರೋನಾ ಪರಿಣಾಮ ಶಾಲಾ-ಕಾಲೇಜುಗಳು ಕಳೆದ ಮೂರ್ನಾಲ್ಕು ತಿಂಗಳಿನಿಂದ ಬಂದ್ ಆಗಿದ್ದು, ಇನ್ನೆಷ್ಟು ದಿನ ಬಮದ್ ಆಗಲಿವೆ?  ಮತ್ತೆ  ಪುನರಾರಂಭ ಯಾವಾಗ?  ಎನ್ನುವ ಪ್ರಶ್ನೆ ಪೋಷಕರು ಮತ್ತು ವಿದ್ಯಾರ್ಥಿಗಳನ್ನ ಕಾಡುತ್ತಿದೆ.

ಇದರ ಮಧ್ಯೆ ಆಗಸ್ಟ್ 15ರ ನಂತರ ಎನ್ನುವ ಸುದ್ದಿಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಸ್ವತಃ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.

‘ಚಂದನ’ದಲ್ಲಿ ಹೈಸ್ಕೂಲ್‌ ಮಕ್ಕಳಿಗೆ ಪಾಠ, ಇಲ್ಲಿದೆ ವೇಳಾಪಟ್ಟಿ!

 ಈ ಬಗ್ಗೆ  ಇಂದು (ಭಾನುವಾರ) ಸುದ್ದಿಗಾರರ ಜೊತೆ ಮಾತನಾಡಿದ ಅವರು,  ಶಾಲೆ ಆರಂಭದ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಕೊರೋನಾ ನಿಯಂತ್ರಣಕ್ಕೆ ಬರುವವರೆಗೆ ಶಾಲೆಗಳು ತೆರೆಯುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು. 

ಸೆಪ್ಟೆಂಬರ್ ನಲ್ಲಿ ಶಾಲೆಗಳು ಆರಂಭಿಸುವ ಕುರಿತು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ವರದಿ ಅಷ್ಟೇ. ಆದ್ರೆ ಶಾಲೆಗಳ ಆರಂಭಿಸುವ ಕುರಿತು ರಾಜ್ಯ ಸರ್ಕಾರದ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ ಎಂದರು.

ಸದ್ಯ ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ಮಿತಿ ಮೀರುತ್ತಿದ್ದು, ಶಾಲೆಗಳು ಯಾವಾಗ ಪ್ರಾರಂಭವಾಗುತ್ತವೋ ಗೊತ್ತಿಲ್ಲ..

Latest Videos
Follow Us:
Download App:
  • android
  • ios