ನವದೆಹಲಿ(ಆ.20): ಕೊರೋನಾ ವೈರಸ್ ಕಾರಣ ಹಲವು ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನೀಡಿದೆ. ಇತ್ತ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ತರಗತಿಯನ್ನು ಆರಂಭಿಸಲಾಗಿದೆ. ಕೊರೋನಾ ನಿಯಂತ್ರಣಕ್ಕೆ ಬರದ ಕಾರಣ ಶಾಲೆಗಳು ಆರಂಭವಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಆನ್‌ಲೈನ್ ಮೂಲಕ ತರಗತಿಗಳನ್ನು ಆರಂಭಿಸಲಾಗಿದೆ. ಆನ್‌ಲೈನ್ ಶಿಕ್ಷಣ ಕುರಿತು ಕೇಂದ್ರ ಶಿಕ್ಷಣ ಇಲಾಖೆ ಹಾಗೂ  ಶೈಕ್ಷಣಿ ತಜ್ಞರ ತಂಡ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿರುವುದು ಬೆಳಕಿಗೆ ಬಂದಿದೆ.

 ಸ್ಯಾಟ್ಸ್‌ ಮೂಲಕ ಶೈಕ್ಷಣಿಕ ಚಟುವಟಿಕೆ ಆರಂಭಕ್ಕೆ ಚಾಲನೆ.

ಆನ್‌ಲೈನ್ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಎದುರಿಸುತ್ತಿರುವ ವಿಚಾರ ಹೊಸದೇನಲ್ಲ. ಆದರೆ ಸಮೀಕ್ಷೆಯಲ್ಲಿ ಶೇಕಡಾ 55ರಷ್ಟು ವಿದ್ಯಾರ್ಥಿಗಳು ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಿರುವುದು ಬಯಲಾಗಿದೆ. ಆನ್‌ಲೈನ್ ಶಿಕ್ಷಣ ಕುರಿತು ಕೇಂದ್ರ ಶಿತ್ರಣ ಇಲಾಖೆ  NCERTಗೆ ಸಮೀಕ್ಷೆ ನಡೆಸುವಂತೆ ಸೂಚಿಸಿತ್ತು. ಈ ಪ್ರಕಾರ  NCERT, NIEPA, CBSE, KVS ಹಾಗೂ NVS ತಜ್ಞರ ತಂಡ ಆನ್‌ಲೈನ್ ಶಿಕ್ಷಣದಲ್ಲಿನ ಸಮಸ್ಯೆ, ಸವಾಲುಗಳು ಕುರಿತು ಸಮೀಕ್ಷೆ ನಡೆಸಿದೆ.

ಕೊರೋನಾ ಇದ್ರೂ ಶಾಲೆ ಶುರು..! ಪ್ಲಾಸ್ಟಿಕ್ ಬಾಕ್ಸ್‌ಗಳಲ್ಲಿ ಚಿಣ್ಣರು..!

ಆನ್‌ಲೈನ್ ಶಿಕ್ಷಣ ಪಡೆಯಲು ಶೇಕಡಾ 27 ರಷ್ಟು ವಿದ್ಯಾರ್ಥಿಗಳಲ್ಲಿ ಮೊಬೈಲ್, ನೆಟ್‌ವರ್ಕ್ ಸೇರಿದಂತೆ ಆನ್‌ಲೈನ್ ಶಿಕ್ಷಣಕ್ಕೆ ಬೇಕಾದ ಉಪಯುಕ್ತ ಸಲಕರಣೆಗಳೇ ಇಲ್ಲ. ಇದರಲ್ಲಿ ಬಹುತೇಕ ವಿದ್ಯಾರ್ಥಿಗಳು ನೆಟ್‌ವರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು ಶೇಕಡಾ 28 ರಷ್ಟು ವಿದ್ಯಾರ್ಥಿಗಳು ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಮೂಲಕ ಶೇಕಡಾ 55 ರಷ್ಟು ವಿದ್ಯಾರ್ಥಿಗಳು ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಿರುವುದು ದೃಢವಾಗಿದೆ.

ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಆನ್‌ಲೈನ್ ಶಿಕ್ಷಣ ಪಡೆಯಲು ಬೇಕಾದ ಟೆಕ್ನಿಕಲ್ ಅರಿವು ಮಕ್ಕಳಿಗಿಲ್ಲ. ಇದರ ಜೊತೆಗೆ ಶಿಕ್ಷಕರೂ ಕೂಡ ಅನ್‌ಲೈನ್ ಮೂಲಕ ತರಗತಿಗಳನ್ನು ತೆಗೆದುಕೊಳ್ಳಲು ಪ್ರಯಾಸ ಪಡುತ್ತಿರುವುದು ಸರ್ವೆಯಲ್ಲಿ ಬಯಲಾಗಿದೆ. 

ಆನ್‌ಲೈನ್ ಶಿಕ್ಷಣಕ್ಕೆ ಲ್ಯಾಪ್‌ಟಾಪ್‌ಗಿಂತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮೊಬೈಲ್ ಮೊದಲ ಆಯ್ಕೆ ಮಾಡಿಕೊಂಡಿದ್ದಾರೆ. ಲ್ಯಾಪ್‌ಟಾಪ್ ಬೆಲೆ ಕೂಡ ದುಬಾರಿಯಾಗಿರುವ ಕಾರಣ ಮೊಬೈಲ್ ಮೂಲಕ ಆನ್‌ಲೈನ್ ಶಿಕ್ಷಣ ಪಡೆಯಲು ಇಚ್ಚಿಸಿದ್ದಾರೆ. ಅನ್‌ಲೈನ್ ಶಿಕ್ಷಣದ ಮೂಲಕ ಗಣಿತ ತರಗತಿ ಮತ್ತಷ್ಟು ಕಠಿಣವಾಗಿದೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.