ಬೆಂಗಳೂರು, (ಆ.10): ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು ರಾಜ್ಯದಲ್ಲಿ ಈ ಬಾರಿ ಶೇ.71.80 ರಷ್ಟು ಫಲಿತಾಂಶ ಕಂಡುಬಂದಿದೆ. 

ಈ ಬಾರಿಯ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅವಕಾಶ ಕಲ್ಪಿಸಿದ್ದು, ಆಸಕ್ತ ವಿದ್ಯಾರ್ಥಿಗಳು ಆಗಸ್ಟ್ 14 ರಿಂದ ಆಗಸ್ಟ್ 24 ರ ಒಳಗೆ ಅರ್ಜಿ ಸಲ್ಲಿಸಬಹುದು. ಉತ್ತರ ಪತ್ರಿಕೆಯ ಸ್ಕ್ಯಾನ್ ಕಾಪಿ ನಾಳೆಯಿಂದಲೇ (ಮಂಗಳವಾರ) ಪಡೆಯಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

"

ಎಸ್​ಎಸ್​ಎಲ್​ಸಿ ರಿಸಲ್ಟ್ ಪ್ರಕಟ: ಶೇ.71.80 ಫಲಿತಾಂಶ, 6 ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್

ಛಾಯಾಪ್ರತಿಗಾಗಿ/ ಮರುಎಣಿಕೆಗಾಗಿ ಛಾಯಾಪ್ರತಿಗಾಗಿ/ ಮರುಎಣಿಕೆಗಾಗಿ ಉತ್ತರ ಪತ್ರಿಕೆಯ ಛಾಯಾಪ್ರತಿಗಾಗಿ ಅಥವಾ ಮರು ಎಣಿಕೆಗಾಗಿ ಅರ್ಜಿ ಸಲ್ಲಿಸಲು ಆಗಸ್ಟ್ 24 ಕೊನೆಯ ದಿನ. ಪೂರಕ ಪರೀಕ್ಷೆಯ ದಿನಾಂಕವನ್ನು ಇನ್ನೆರಡು ದಿನಗಳ ಒಳಗಾಗಿ ಪ್ರೌಢ ಶಿಕ್ಷಣ ಮಂಡಳಿ ಪ್ರಕಟಿಸಲಿದೆ ಎಂದು ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.

"

ಶುಲ್ಕದ ವಿವರ
ಮರುಎಣಿಕೆ ಒಂದು ವಿಷಯಕ್ಕೆ:  150ರೂ.
ಛಾಯಾಪ್ರತಿ ಒಂದು ವಿಷಯಕ್ಕೆ: 300 ರೂ.

ಉತ್ತರ ಪತ್ರಿಕೆಯ ಮರುಮೌಲ್ಯಮಾಪನಉತ್ತರ ಪತ್ರಿಕೆಯ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಛಾಯಾಪ್ರತಿ ಸ್ವೀಕರಿಸಿದ 7ದಿನದೊಳಗಾಗಿ ಮಂಡಳಿಗೆ ಸಲ್ಲಿಸುವುದು.

ಶುಲ್ಕದ ವಿವರ
*ಮರುಮೌಲ್ಯಮಾಪನ ಒಂದು ವಿಷಯಕ್ಕೆ ರೂ.700/

ಸೂಚನೆಗಳು
* 2019 - 20ನೇ ಸಾಲಿನಲ್ಲಿ ವಿದ್ಯಾರ್ಥಿಗಳು ಮರು ಎಣಿಕೆ, ಛಾಯಾಪ್ರತಿ ಹಾಗೂ ಮರು ಮೌಲ್ಯಮಾಪನಕ್ಕೆ ಅರ್ಜಿಗಳನ್ನು ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಮುಖಾಂತರ ಸಲ್ಲಿಸಬಹುದು.

* ಉತ್ತೀರ್ಣರಾದ ಅಭ್ಯರ್ಥಿಗಳು ಮುಂದಿನ ವ್ಯಾಸಂಗಕ್ಕೆ ಹಾಗೂ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮುಂದಿನ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮರುಮೌಲ್ಯಮಾಪನದ ಫಲಿತಾಂಶಕ್ಕಾಗಿ ಕಾಯಬಾರದು.

* ಮರು ಮೌಲ್ಯಮಾಪನದ ಬಗ್ಗೆ ಮರುಮೌಲ್ಯಮಾಪಕರು ತೆಗೆದುಕೊಂಡ ನಿರ್ಧಾರವೇ ಅಂತಿಮ ಇದರ ಬಗ್ಗೆ ಮರುಪರಿಶೀಲನೆ ಅಥವಾ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ.

* ಫಲಿತಾಂಶವನ್ನು ಉತ್ತಮ ಪಡಿಸಿಕೊಳ್ಳುವ ವಿದ್ಯಾರ್ಥಿಗಳು ಮೊದಲು ಉತ್ತೀರ್ಣರಾದ ಎರಡು ವರ್ಷದೊಳಗೆ ಅದೇ ವಿಷಯ/ವಿಷಯಗಳಿಗೆ ಪರೀಕ್ಷೆ ತೆಗೆದುಕೊಳ್ಳಬಹುದು.

* ಯಾವುದೇ ವಿದ್ಯಾರ್ಥಿ ಶಾಲಾ ಅಭ್ಯರ್ಥಿಯಾಗಿ ಪುನಃ ಪರೀಕ್ಷೆಯನ್ನು ತೆಗೆದುಕೊಳ್ಳಲು ಇಚ್ಛಿಸಿದಲ್ಲಿ ಶಾಲೆಗೆ ಮರು ಪ್ರವೇಶ ಪಡೆಯಲು ಅವಕಾಶವಿದೆ.

* ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳ ಉತ್ತೀರ್ಣ ಪ್ರಮಾಣ ಪತ್ರಗಳನ್ನು ಆಯಾ ಶಾಲೆಗಳಿಗೆ ಮರುಎಣಿಕೆ ಮತ್ತು ಮರು ಮೌಲ್ಯಮಾಪನ ಕಾರ್ಯ ಪೂರ್ಣಗೊಂಡ ನಂತರ ಕಳುಹಿಸಲಾಗುವುದು.