Asianet Suvarna News Asianet Suvarna News

ಎಸ್​ಎಸ್​ಎಲ್​ಸಿ ರಿಸಲ್ಟ್ ಪ್ರಕಟ: ಶೇ.71.80 ಫಲಿತಾಂಶ, 6 ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್

ಬಹುನಿರೀಕ್ಷಿತ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ವಿವರಗಳನ್ನು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮತ್ತು ಅಧಿಕಾರಿಗಳು ನೀಡುತ್ತಿದ್ದಾರೆ.

karnataka sslc results 2020 declared Total 71.80 per cent
Author
Bengaluru, First Published Aug 10, 2020, 3:32 PM IST

ಬೆಂಗಳೂರು, (ಆ.10): 2019-20ನೇ ಸಾಲಿನ ಎಸ್​ಎಸ್‌ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇಖಡವಾರು 71.80 ಫಲಿತಾಂಶ ಬಂದಿದೆ.  ಕಳೆದ ವರ್ಷ ಶೇ. 73.70 ಫಲಿತಾಂಶ ಬಂದಿತ್ತು.

ಕೊರೋನಾ ಆತಂಕದ ನಡುವೆಯೂ ಪರೀಕ್ಷೆಗೆ ಹಾಜರಾಗಿದ್ದ 8,11,050 ವಿದ್ಯಾರ್ಥಿಗಳ ಪೈಕಿ 5,82, 360 ಮಂದಿ ಉತ್ತೀರ್ಣರಾಗಿದ್ದಾರೆ. 2,28,734 ವಿದ್ಯಾರ್ಥಿಗಳು ಅನುತ್ತೀಣರಾಗಿದ್ದಾರೆ.

ಎಸ್ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟ: ಇಲ್ಲಿ ನಿಮ್ಮ ರಿಸಲ್ಟ್ ನೋಡಿ

ಶೇ. 66.41 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ರೆ, ಶೇ. 77.74 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಕಳೆದಬಾರಿ ಇಬ್ಬರು ಮಾತ್ರ 625ಕ್ಕೆ 625 ಅಂಕ ಪಡೆದಿದ್ದರು. ಆದ್ರೆ, ಈ ಬಾರಿ 625ಕ್ಕೆ 625 ಅಂಕ ಪಡೆದ 6 ಮಕ್ಕಳು ರಾಜ್ಯಕ್ಕೆ ಟಾಪರ್​ ಆಗಿ ಹೊರಹೊಮ್ಮಿದ್ದಾರೆ. 

ಟಾಪರ್​ಗಳು..
* ಚಿರಾಯು. ನಾಗಸಂದ್ರ
* ನಿಖಿಲೇಶ್ ಮರಳಿ. ಸದಾಶಿವನಗರ
* ಧೀರಜ್ ರೆಡ್ಡಿ ಮಂಡ್ಯ.
* ಕುಮಾರಸ್ವಾಮಿ, ಸುಳ್ಯ.
* ತನ್ಮಯಿ, ಚಿಕ್ಕಮಗಳೂರು
* ಸನ್ನಿಧಿ ಮಹಾಬಲೇಶ್ವರ ಹೆಗಡೆ, ಶಿರಸಿ, ಉತ್ತರ ಕನ್ನಡ ಜಿಲ್ಲೆ.

"

Follow Us:
Download App:
  • android
  • ios