Asianet Suvarna News Asianet Suvarna News

ಸರ್ಕಾರಿ ಡಿಗ್ರಿ ಕಾಲೇಜು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಕಾಲೇಜು ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಲು ಮತ್ತು ನ್ಯಾಕ್‌ ಮಾನ್ಯತೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಗ್ರಂಥಾಲಯ ಗಣಕೀಕರಣಗೊಳಿಸಲು ಇ-ಗ್ರಂಥಾಲಯ ಸಾಫ್ಟ್‌ವೇರ್‌ಗಳನ್ನು ಕಾಲೇಜುಗಳಿಗೆ ಇಲಾಖೆಯಿಂದ ಎನ್‌ಐಸಿ ಸಹಕಾರದೊಂದಿಗೆ ನೀಡಲಾಗಿದೆ.

Karnataka Govt Decided To Computaraise Degree College Library
Author
Bengaluru, First Published Aug 31, 2020, 7:30 AM IST

 ಬೆಂಗಳೂರು (ಆ.31): ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಗ್ರಂಥಾಲಯಗಳನ್ನು ಆಧುನೀಕರಣಗೊಳಿಸುವ ಹಾಗೂ ಗಣಿಕೀಕರಣಗೊಳಿಸಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ.

ಕಾಲೇಜು ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಲು ಮತ್ತು ನ್ಯಾಕ್‌ ಮಾನ್ಯತೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಗ್ರಂಥಾಲಯ ಗಣಕೀಕರಣಗೊಳಿಸಲು ಇ-ಗ್ರಂಥಾಲಯ ಸಾಫ್ಟ್‌ವೇರ್‌ಗಳನ್ನು ಕಾಲೇಜುಗಳಿಗೆ ಇಲಾಖೆಯಿಂದ ಎನ್‌ಐಸಿ ಸಹಕಾರದೊಂದಿಗೆ ಕಳುಹಿಸಿಕೊಡಲಾಗಿದೆ.

4499 ಹುದ್ದೆಗೆ ಅರ್ಜಿ ಆಹ್ವಾನ: SSLC ಪಾಸಾದವರಿಗೆ ಇದು ಸುವರ್ಣವಕಾಶ..

ಸಂಯೋಜಿತ ಗ್ರಂಥಾಲಯ ನಿರ್ವಹಣೆ ಸಾಫ್ಟ್‌ವೇರ್‌ ಅಳವಡಿಸಲು ಅಗತ್ಯವಿರುವ ಕಂಪ್ಯೂಟರ್‌, ಬಾರ್‌ಕೋಡ್‌ ಪ್ರಿಂಟರ್‌, ಬಾರ್‌ಕೋಡ್‌ ಸ್ಕಾ್ಯನರ್‌ ಮತ್ತು ಲೇಬಲ್ಸ್‌ ಖರೀದಿಸಲು ಇಲಾಖೆಯಿಂದ ಅನುದಾನ ಕೂಡ ಬಿಡುಗಡೆ ಮಾಡಲಾಗಿದೆ. ನ್ಯಾಕ್‌ನಿಂದ ‘ಎ’ ಅಥವಾ ‘ಎ ಪ್ಲಸ್‌’ ಶ್ರೇಣಿ ಪಡೆದ ಕಾಲೇಜುಗಳಿಗೆ ಉತ್ತಮ ಅನುದಾನ ಬರುತ್ತದೆ. ಆದರೆ, ರಾಜ್ಯದ ಅನೇಕ ಪದವಿ ಕಾಲೇಜುಗಳಿಗೆ ನ್ಯಾಕ್‌ನ ಉನ್ನತ ಶ್ರೇಣಿ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಗ್ರಂಥಾಲಯ ಅಭಿವೃದ್ಧಿಪಡಿಸಿ, ನ್ಯಾಕ್‌ ಮಾನ್ಯತೆಗೆ ಯೋಜನೆ ರೂಪಿಸಲಾಗಿದೆ.

ಈ ಸಂಬಂಧ ಕೆಲವು ಕಾಲೇಜುಗಳನ್ನು ಇ-ಗ್ರಂಥಾಲಯ 4.0 ಕ್ಲಸ್ಟರ್‌ಗೆ ಸೇರಿಸಲಾಗಿದೆ. ಇದರ ಅನುಷ್ಠಾನ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಾದೇಶಿಕ ವಲಯವಾರು ಸಂಚಾಲಕರ ನೇಮಕವೂ ಮಾಡಲಾಗಿದೆ. ಸಂಚಾಲಕರು ತಮ್ಮ ವ್ಯಾಪ್ತಿಯ ಕಾಲೇಜುಗಳ ಗ್ರಂಥಾಲಯ ಆಧುನೀಕರಣ ಮತ್ತು ಗಣಕೀಕರಣಗೊಳಿಸುವ ಮೇಲ್ವಿಚಾರಣೆ ವಹಿಸಿಕೊಳ್ಳಲಿದ್ದಾರೆ. ಈ ಮೂಲಕ ನ್ಯಾಕ್‌ ರಾರ‍ಯಂಕಿಂಗ್‌ನಲ್ಲಿ ಕಾಲೇಜು ಉತ್ತಮ ಸಾಧನೆ ಮಾಡಲು ಸಹಕರಿಸಲಿದ್ದಾರೆ.

ಅನುಕೂಲ ಏನು?:

ಗ್ರಂಥಾಲಯಗಳನ್ನು ಆಧುನೀಕರಣ ಹಾಗೂ ಗಣಕೀಕರಣ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಗ್ರಂಥಾಲಯದಲ್ಲಿ ಎಷ್ಟುಪುಸ್ತಕ ಮತ್ತು ಯಾವ ವಿಭಾಗಕ್ಕೆ ಸಂಬಂಧಿಸಿದ ಪುಸ್ತಕಗಳು ಎಷ್ಟಿವೆ ಎಂಬುದರ ಮಾಹಿತಿ ಇರುತ್ತದೆ. ಆದರೆ, ಅದನ್ನು ಕಂಪ್ಯೂಟರ್‌ನಲ್ಲಿ ಅಳವಡಿಸಿರುವುದಿಲ್ಲ. ಗಣಕೀಕರಣ ಪ್ರಕ್ರಿಯೆ ಪೂರ್ಣಗೊಂಡ ನಂತರ ಗ್ರಂಥಾಲಯದ ಪುಸ್ತಕಗಳ ಮಾಹಿತಿ ಕಂಪ್ಯೂಟರ್‌ನಲ್ಲಿ ಸಿಗಲಿದೆ. ಇದರಿಂದ ವಿದ್ಯಾರ್ಥಿಗಳು ಸುಲಭವಾಗಿ ತಮಗೆ ಬೇಕಾದ ಪುಸ್ತಕವನ್ನು ಹುಡುಕಬಹುದಾಗಿದೆ. ಇದರ ಜತೆಗೆ ಆನ್‌ಲೈನ್‌ ಮೂಲಕವೇ ಪುಸ್ತಕ ಓದಲು ಬೇಕಾದ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ವಿದ್ಯಾರ್ಥಿಗಳ ಬೇಡಿಕೆ ಆಧಾರದಲ್ಲಿ ಪುಸ್ತಕದ ಪೂರೈಕೆಯನ್ನು ಮಾಡಲಾಗುತ್ತದೆ. ಯಾವೆಲ್ಲ ಪುಸ್ತಕಗಳನ್ನು ಆನ್‌ಲೈನ್‌ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಬಹುದು ಎಂಬುದರ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

Follow Us:
Download App:
  • android
  • ios